ಮೊದಲ ಪತ್ನಿಗೆ ಮಾತ್ರ ಪತಿಯ ಪಿಂಚಣಿ ಪಡೆಯುವ ಅಧಿಕಾರವಿದೆ – ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು : ಮೃತ ಪತಿಯ ಪಿಂಚಣಿ (Pension)ಸೇರಿದಂತೆ ದೊರೆಯುವ ಎಲ್ಲ ಸೌಲಭ್ಯಗಳನ್ನು(Husband’s pension for wife) ಪಡೆಯುವ ಮೊದಲ ಅಧಿಕಾರ ಅಥವಾ ಹಕ್ಕು ಮೊದಲ ಪತ್ನಿಗೆ

ಮಾತ್ರ ಇರುತ್ತದೆ. ಮೊದಲನೇ ಪತ್ನಿ ಬದುಕಿದ್ದಾಗ ಆಗುವ 2ನೇ ವಿವಾಹಕ್ಕೆ ಕಾನೂನಿನ ಮಾನ್ಯತೆಯಿಲ್ಲ. ಹೀಗಾಗಿ ಎರಡನೇ ಪತ್ನಿಗೆ ಪಿಂಚಣಿ ಸೇರಿದಂತೆ ಯಾವುದೇ ಹಕ್ಕು ನೀಡಲಾಗುವುದಿಲ್ಲ

ಎಂದು ರಾಜ್ಯ ಹೈಕೋರ್ಟ್ ಮಹತ್ವದ (Husband’s pension for wife) ಆದೇಶ ನೀಡಿದೆ.

ಪ್ರಕರಣವೊಂದರಲ್ಲಿ ಎರಡನೇ ಪತ್ನಿ(Wife) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಬಿ.ವರ್ಲೆ ಮತ್ತು ನ್ಯಾ. ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ದ್ವಿಸದಸ್ಯ ಪೀಠ

ಈ ಮಹತ್ವದ ಆದೇಶ ನೀಡಿದೆ. ಹಿಂದೂ ಧರ್ಮದಲ್ಲಿ ಏಕಪತ್ನಿತ್ವ ರೂಢಿಯಲ್ಲಿದೆ. ಹೀಗಾಗಿ ನಮ್ಮ ಕಾನೂನಿನಲ್ಲಿ ಮೊದಲನೇ ಪತ್ನಿ ಬದುಕಿದ್ದಾಗಲೇ, ಎರಡನೇ ಮದುವೆಗೆ ಕಾನೂನಿನಲ್ಲಿ ಯಾವುದೇ

ಅವಕಾಶವೇ ಇಲ್ಲ. ಹಾಗಾಗಿ ಅರ್ಜಿದಾರರು ಏನೇ ವಾದ ಮಾಡಿದರೂ ಅದಕ್ಕೆ ಯಾವುದೇ ಕಾನೂನಿನ ಬೆಂಬಲ ಇರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಹಿಂದೂ(Hindu) ವಿವಾಹ ಕಾಯಿದೆ 1955ರ ಪ್ರಕಾರ, ಎರಡನೇ ಪತ್ನಿಯ ಮದುವೆ ಕಾನೂನಿನ ದೃಷ್ಟಿಯಲ್ಲಿ ಮದುವೆಯೇ ಅಲ್ಲ. ಹೀಗಾಗಿ ಅರ್ಜಿದಾರರು ಕಾನೂನು ಬದ್ಧವಾಗಿ ಮದುವೆಯಾದ ಪತ್ನಿಯಲ್ಲ.

ಹೀಗಾಗಿ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯವನ್ನು ನೀಡಲಾಗದು ಎಂದು ಆದೇಶ ನೀಡಿದೆ.

ಮರಣ ಪ್ರಮಾಣಪತ್ರ ವಿತರಣೆಗೆ ಮುನ್ನ ಇ-ಕೆವೈಸಿ(I-KYC) : ಹೈಕೋರ್ಟ್


ಮರಣ ಪ್ರಮಾಣಪತ್ರ ವಿತರಣೆಗೆ ಮುನ್ನ ಇ-ಕೆವೈಸಿ ಮಾದರಿ ಅನುಸರಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಹೈಕೋರ್ಟ್ ಸೂಚಿಸಿದೆ. ಆಸ್ಪತ್ರೆಗಳು ಯಾರು ಮೃತಪಟ್ಟಿದ್ದಾರೆಂದು ಗುರುತಿಸಿ,

ಅವರ ವಿವರಗಳನ್ನು ಇ-ಕೆವೈಸಿ ಮಾದರಿಯಲ್ಲಿ ಭರ್ತಿ ಮಾಡಬೇಕು. ನಂತರ ಸಂಬಂಧಿಸಿದ ಇಲಾಖೆಯ ಪರಿಶೀಲನೆಯ ನಂತರ ಮರಣ­ ಪ್ರಮಾಣಪತ್ರ ವಿತರಣೆ ಮಾಡಬೇಕು ಎಂದು ನ್ಯಾಯಾಲಯ

ಆದೇಶಿಸಿದೆ. ಜನನ ಮತ್ತು ಮರಣಪ್ರಮಾಣಪತ್ರಗಳನ್ನು ವಿಶ್ವಾಸಾರ್ಹತೆಯಿಂದ ಪರಿಗಣಿಸಲಾಗುತ್ತದೆ. ಹೀಗಾಗಿ ಇ-ಕೆವೈಸಿ ಮೂಲಕ ಮೃತ ವ್ಯಕ್ತಿಯನ್ನು ಗುರುತಿಸಿ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ

ಜಾರಿಗೊಳಿಸಬೇಕು ಎಂದು ಹೇಳಿದೆ.

ಇದನ್ನು ಓದಿ: ಐಟಿ ದಾಳಿ ವೇಳೆ 42 ಕೋಟಿ ಹಣ ಪತ್ತೆ ಪ್ರಕರಣ: ಗುತ್ತಿಗೆದಾರರಾದ ಅಂಬಿಕಾಪತಿ ಹೃದಯಾಘಾತದಿಂದ ನಿಧನ

Exit mobile version