ಗೂಗಲ್ ಪೇ ನಲ್ಲಿ ಸಿಬಿಲ್ ಸ್ಕೋರ್ ನೋಡುವುದು ಹೇಗೆ ಇದರ ಹಂತ ಹಂತದ ಮಾಹಿತಿ ಹೀಗಿದೆ

Google Pay: ನಮ್ಮಲ್ಲಿ ಸದ್ಯಕ್ಕೆ ಸಾಕಷ್ಟು ಮಂದಿ ಹಣ ಪಾವತಿಸಲು ಅಂದರೆ ವರ್ಗಾವಣೆ ಮಾಡಲು ಗೂಗಲ್ ಪೇ (Google Pay) ಬಳಸುತ್ತಾರೆ. ಆದರೆ (hw to view cibilscore) ಇದು ಎಲ್ಲರಿಗು ತಿಳಿದಿರುವ

ವಿಷಯ ಇನ್ನು ಗೂಗಲ್‌ ಪೇ ಅಲ್ಲಿ ಇದರ ಜೊತೆಗೆ ಸಿಬಿಲ್ ಸ್ಕೋರ್ (Cibil Score) ಕೂಡಾ ಚೆಕ್ ಮಾಡಬಹುದು. ಯಾವ ರೀತಿ ಸಿಬಿಲ್ ಸ್ಕೋರ್ ಕೂಡ ನೋಡಬಹುದು. ಭಾರತದಲ್ಲಿ ಡಿಜಿಟಲ್

(Digital) ಹಣಕಾಸಿನ ವ್ಯವಹಾರ ಜನಪ್ರಿಯವಾಗುತ್ತಿದ್ದಂತೆಯೇ ಸಾಕಷ್ಟು ಹಣಕಾಸು ವಹಿವಾಟುಗಳ ಆ್ಯಪ್‌ಗಳು (App) ಬಂದಿವೆ. ಅದರಲ್ಲಿ ಗೂಗಲ್ ಪೇ ಕೂಡಾ ಒಂದು. ಗೂಗಲ್‌ನ ಯುನಿಫೈಡ್‌

ಪೇಮೆಂಟ್‌ ಇಂಟರ್‌ಫೇಸ್‌ (Unified payment interface) ಆ್ಯಪ್ ಆಗಿದ್ದು, ಇದು ತ್ವರಿತ ಪಾವತಿ, ಹಣ ವರ್ಗಾವಣೆಗೆ ಈ ಆ್ಯಪ್ ಸಹಕಾರಿಯಾಗಿದೆ.

ಆನ್‌ಲೈನ್ (Online) ಮೂಲಕ ಇದನ್ನು ಬಳಸುವವರು ಮೊಬೈಲ್ ರೀಚಾರ್ಜ್ (Mobile Recharge) ಮಾಡಲು ಶಾಪಿಂಗ್‌ಗೆ, ಬಿಲ್‌ಗಳನ್ನು ಪಾವತಿಸಲು, ತ್ವರಿತವಾಗಿ ತಮ್ಮ ಬ್ಯಾಂಕ್ (Bank) ಖಾತೆಯಿಂದ

ಇತರರಿಗೆ ಹಣ ಕಳುಹಿಸಲು ಅಥವಾ ಇತರರಿಂದ ತಮ್ಮ ಖಾತೆಗೆ ನೇರವಾಗಿ ಹಣ ಸ್ವೀಕರಿಸಲು ಇದು ಸಹಾಯಮಾಡುತ್ತದೆ.

ಈ ಎಲ್ಲಾ ಕಾರಣಗಳಿಂದ ಗೂಗಲ್ ಪೇ (Google Pay) ಸೇರಿದಂತೆ ಇತರ ಆ್ಯಪ್‌ಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ. ಅಡ್ರಸ್ (Address), ಅಕೌಂಟ್‌ ನಂಬರ್‌ (Account Number), ಯುಪಿಐ ಐಡಿ

(UPI ID), ಕ್ಯೂಆರ್ ಕೋಡ್, ಮೊಬೈಲ್ (Mobile) ಸಂಖ್ಯೆಯ ಮೂಲಕವೂ ವಹಿವಾಟು ನಡೆಸಲು ಈ ಅಪ್ಲಿಕೇಷನ್‌ ಬಳಕೆದಾರರಿಗೆ ಅನುಮತಿ ಕೊಡುತ್ತದೆ.

ವೇಗವಾಗಿ ಹರಡುತ್ತಿದೆ ಕೊರೊನಾ ರೂಪಾಂತರಿ EG.5.1 ಭಾರತಕ್ಕಿದೆಯೇ ಆತಂಕ? ತಜ್ಞರು ಹೇಳಿದ ಸತ್ಯವೇನು?ಏನಿದರ ಲಕ್ಷಣ?

ಸಿಬಿಲ್ ಸ್ಕೋರ್‌ (Cibil Score) ಅಥವಾ ಗೂಗಲ್ ಪೇ ಕ್ರೆಡಿಟ್ ರಿಪೋರ್ಟ್ (Credit Report) ಪಡೆಯುವುದಕ್ಕೂ ಬಳಕೆದಾರರಿಗೆ ನೆರವಾಗುತ್ತದೆ. ಈ ವೈಶಿಷ್ಟ್ಯವನ್ನು ಗೂಗಲ್ ಪೇ ಹೊಂದಿದ್ದು, ಬಳಕೆದಾರರು

ಗೂಗಲ್ ಪೇನಲ್ಲಿ ಸಿಬಿಲ್ ಸ್ಕೋರ್ ಪಡೆದಾಗ ಈ ಕ್ರೆಡಿಟ್ ಸ್ಕೋರ್ (Credit Score) ಅನ್ನು ಸುಧಾರಿಸಲು ಏನು ಮಾಡಬೇಕು ಎಂಬುದರ ಕುರಿತ ಶಿಫಾರಸ್ಸನ್ನೂ ಇದು ನೀಡುತ್ತದೆ.

ಸಿಬಿಲ್ ಸ್ಕೋರ್ (Cibil Score) ಅಂದರೆ:
300 ಮತ್ತು 900 ನಡುವಿನ ಮೂರು-ಅಂಕಿಯ ಸಂಖ್ಯೆಗಳನ್ನು ಸಿಬಿಲ್ ಸ್ಕೋರ್ (Cibil Score) ಹೊಂದಿದ್ದು, ಇದು ಸಾಲದ ಅರ್ಹತೆಯನ್ನು ಪ್ರತಿಬಿಂಬಿಸುತ್ತದೆ. ಮತ್ತು ಸಾಲ ಮರುಪಾವತಿ ಸಾಮರ್ಥ್ಯದ

ಆಧಾರದ ಮೇಲೆ ಇದನ್ನು ಲೆಕ್ಕಾಚಾರ ಮಾಡಲಾಗುತ್ತದೆ. 700ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಸಾಮಾನ್ಯವಾಗಿ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇನ್ನು ಕಡಿಮೆ ಸ್ಕೋರ್ (Score) ಹೊಂದಿರುವವರನ್ನು

ಅಪಾಯಕಾರಿ ಸಾಲಗಾರ (hw to view cibilscore) ಎನ್ನಲಾಗುತ್ತೆ.

ಸಿಬಿಲ್ ಸ್ಕೋರ್ ವರದಿ ಎಲ್ಲರ ವೈಯಕ್ತಿಕ ಮಾಹಿತಿ, ಉದ್ಯೋಗದ ವಿವರ, ಬ್ಯಾಂಕ್ (Bank) ಖಾತೆ ಮತ್ತು ಹಳೆಯ ಸಾಲದ ಮಾಹಿತಿಯನ್ನೊಳಗೊಂಡಿರುತ್ತದೆ. ಯಾವುದೇ ಬ್ಯಾಂಕಿನಲ್ಲಿ ನೀವು ಸಾಲ ಅಥವಾ

ಕ್ರೆಡಿಟ್ ಕಾರ್ಡ್ (Credit Card) ಪಡೆಯಲು ಬಯಸಿದರೆ ಬ್ಯಾಂಕು ಅಥವಾ ಯಾವುದೇ ಹಣಕಾಸು ಸಂಸ್ಥೆಗಳು ಮೊದಲು ಸಿಬಿಲ್ ಸ್ಕೋರ್ ಪರಿಶೀಲನೆ ನಡೆಸುತ್ತವೆ. ಈ ಮೂಲಕ ಬ್ಯಾಂಕುಗಳು ಒಬ್ಬರ ಸಾಲ

ಮರುಪಾವತಿ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ. ಹೆಚ್ಚಿನ ಸಿಬಿಲ್‌ ಸ್ಕೋರ್‌ ಎಂದರೆ ಬಳಕೆದಾರರು ಲೋನ್‌ಗಾಗಿ (Loan) ಶೀಘ್ರದಲ್ಲಿ ಅನುಮೋದನೆ ಪಡೆಯುವ ಸಾಧ್ಯತೆ ಹೆಚ್ಚು. ಜೊತೆಗೆ ಕಡಿಮೆ ಬಡ್ಡಿ ದರ

ಕೂಡಾ ಸಿಗುವ ಸಾಧ್ಯತೆಯೂ ಇರುತ್ತದೆ.

ಗೂಗಲ್‌ ಪೇನಲ್ಲಿ (Google Pay) ಸಿಬಿಲ್ ಸ್ಕೋರ್ ಪರಿಶೀಲನೆ ಹೇಗೆ:
೧. ಫೋನ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ (Application) ತೆರೆಯಬೇಕು
೨. ನಂತರ ಮ್ಯಾನೇಜ್‌ ಯುವರ್ ಮನಿ ಟ್ಯಾಬ್ಅನ್ನು (Manege Your Mani Tab) ಕ್ಲಿಕ್ ಮಾಡಬೇಕು
೩. ಕೆಳಗೆ ಸ್ಕ್ರಾಲ್ (Scroll) ಮಾಡಿ ಮತ್ತು ನಿಮ್ಮ ಸಿಬಿಲ್ ಸ್ಕೋರ್ ಅನ್ನು (Cibil Score) ಉಚಿತವಾಗಿ ಪರಿಶೀಲಿಸಿ ಎಂಬ ಆಯ್ಕೆಯ ಬಟನ್ (Button) ಒತ್ತಬೇಕು.
೪. ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ (Pancard) ಇರುವಂತೆ ನಿಮ್ಮ ಮೊದಲ ಹೆಸರು ಮತ್ತು ಕೊನೆಯ ಹೆಸರನ್ನು ನಮೂದಿಸಬೇಕು ತದನಂತರ ಮುಂದುವರಿಸಿ ಎಂಬ ಆಯ್ಕೆಯನ್ನು ಕ್ಲಿಕ್ (Click)
ಮಾಡಬೇಕು.
. ಇದಾದ ಬಳಿಕ ನಿಮ್ಮ ಗುರುತನ್ನು ವೆರಿಫೈ ಮಾಡಲು ಕೇಳಲಾಗುತ್ತದೆ. ಇಲ್ಲಿ ಮೊಬೈಲ್ (Mobile) ಸಂಖ್ಯೆ ಅಥವಾ ಇಮೇಲ್ (E-mail) ವಿಳಾಸವನ್ನು ನಮೂದಿಸಬಹುದು
ನಿಮ್ಮ ಗುರುತಿನ ವೆರಿಫಿಕೇಷನ್ (Verification) ಆದ ಬಳಿಕ ಸಿಬಿಲ್ ಸ್ಕೋರ್ ಎಷ್ಟಿದೆ ಎಂದು ಅಲ್ಲಿ ಕಾಣಬಹುದು.

ಭವ್ಯಶ್ರೀ ಆರ್.ಜೆ

Exit mobile version