2018 ರಲ್ಲಿ ನನ್ನನ್ನು ಹಿಂದೂ ವಿರೋಧಿ ಎಂದು ಸುಳ್ಳು ಪ್ರಚಾರ ಮಾಡಲಾಗಿತ್ತು : ಸಿದ್ದರಾಮಯ್ಯ

Bengaluru : ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ (Congress) ಹಿರಿಯ ನಾಯಕ ಸಿದ್ದರಾಮಯ್ಯ (Siddaramaiah) ಅವರು 2018 ರ ವಿಧಾನಸಭಾ ಚುನಾವಣೆಯ (Assembly election) ಸಮಯದಲ್ಲಿ ನಾನು ಹಿಂದೂ ವಿರೋಧಿ ಎಂದು ಸುಳ್ಳು (I am not anti Hindu) ಪ್ರಚಾರ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಸೋಮವಾರ ಪಿಟಿಐ ಸುದ್ದಿ ಸಂಸ್ಥೆಗೆ (PTI news agency) ನೀಡಿದ ಸಂದರ್ಶನದ ಒಂದಿಷ್ಟು ತುಣಕನ್ನು ಬಿಡುಗಡೆ ಮಾಡಿದ ಅವರು,

ಮೇ 10 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಗೆದ್ದರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ (State Congress President D.K Shivakumar) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ.

ಇದು ಆರೋಗ್ಯಕರ ಸ್ಪರ್ಧೆ ಚೆನ್ನಾಗಿದೆ ಎಂದು ಹೇಳಿದರು. ನೋಡಿ, ಆರೋಗ್ಯಕರ ಪೈಪೋಟಿ ಇದ್ದರೆ ಏನೂ ತಪ್ಪಿಲ್ಲ, ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಮತ್ತು ಆಕಾಂಕ್ಷಿಯಾಗಿದ್ದರೆ ಏನೂ ತಪ್ಪಿಲ್ಲ,

ನಾನು ಸಿಎಂ ಆಕಾಂಕ್ಷಿಯಾದರೆ ಅದರಲ್ಲಿ ತಪ್ಪೇನಿಲ್ಲ! ಅಂತಿಮವಾಗಿ ಹೊಸದಾಗಿ ಆಯ್ಕೆಯಾದ ಶಾಸಕರು (I am not anti Hindu) ನಿರ್ಧರಿಸುತ್ತಾರೆ ಮತ್ತು

ಉನ್ನತ ಹುದ್ದೆಯಲ್ಲಿ ಹೈಕಮಾಂಡ್ (High Command) ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕೆಲವು ವದಂತಿಗಳಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ : https://vijayatimes.com/40-bodies-found-at-kenya/

ಮಾಧ್ಯಮದ ಸಂದರ್ಶನದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. 2013 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರಿಂದ ಸ್ಪಷ್ಟ ಜನಾದೇಶ ಸಿಕ್ಕಿತ್ತು,

2013 ರಿಂದ 2018 ರ ಅವಧಿಯಲ್ಲಿ ( ಸಿಎಂ ಆಗಿದ್ದಾಗ) ಉತ್ತಮ ಕೆಲಸ ಮಾಡಿದ್ದೆವು, ಅವರು ನನ್ನ ವಿರುದ್ಧ ಆರೋಪ ಮಾಡಿದ್ದಕ್ಕೆ ಸುಳ್ಳು ಪ್ರಚಾರ ಕೈ ಹಿಡಿದಿತ್ತು.

ನಾನು ಬಹುಸಂಖ್ಯಾತ ಸಮುದಾಯಗಳ ವಿರುದ್ಧ, ಮೇಲ್ವರ್ಗದ ವಿರುದ್ಧ ಮತ್ತು ನಾನು ಹಿಂದುತ್ವ/ ಹಿಂದೂ ಧರ್ಮದ (Hinduism) ವಿರುದ್ಧವಾಗಿದ್ದೇನೆ ಎಂಬಂತೆ ಅವರು ಬಿಂಬಿಸಿದ್ದಾರೆ.

ಆದರೆ ಅದು ನಿಜವಲ್ಲ! ಈ ಬಾರಿ ಅವರ ಪ್ರಚಾರವನ್ನು ಜನರು ನಂಬುವುದಿಲ್ಲ. ಏಕೆಂದರೆ ಅವರ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಅವರಿಗೆ ತಿಳಿದಿದೆ.

ಆದ್ದರಿಂದ ಬಿಜೆಪಿ (BJP) ಅವರು ಈ ಬಾರಿ ಹಿಂದುತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ.

ಏಕೆಂದರೆ ಹಣದ ಬಲದಿಂದ ಅವರು ಈ ಬಾರಿ ಗೆಲ್ಲಲು ಬಯಸಿದ್ದರು. ಆದರೆ ಅದು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸುಳ್ಳು ಪ್ರಚಾರದ ಮೂಲಕ 2018 ರ ಚುನಾವಣೆಯಲ್ಲಿ ಬಿಜೆಪಿ ತನ್ನ ಪರವಾಗಿ ಜನಾದೇಶವನ್ನು ತಿರುಗಿಸಲು ಸಾಧ್ಯವಾಯಿತು.

ಚುನಾವಣೆಯಲ್ಲಿ ಜಾತಿ ಮುಖ್ಯವಲ್ಲ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ನೇರವಾಗಿ ಉತ್ತರಿಸಿದರು.

ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯ, ಈಗ ಸಮಸ್ಯೆಗಳೆಂದರೆ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ಇನ್ನು ಹಲವು ಸಮಸ್ಯೆಗಳಿವೆ.

ಕರ್ನಾಟಕದ ಜನರು ಜಾತಿಯನ್ನು ಪರಿಗಣಿಸುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಒತ್ತಿ ಹೇಳಿದರು.

ಮೇ 10 ರಂದು ನಡೆಯಲಿರುವ ಚುನಾವಣೆ ನಿಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ನಡುವಿನ ಹೋರಾಟವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,

ಇದನ್ನೂ ಓದಿ : https://vijayatimes.com/donate-to-pm-cares-fund/

ಇದು ನನ್ನ ಮತ್ತು ಮೋದಿ ನಡುವಿನ ಹೋರಾಟವಲ್ಲ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆ ವಿಷಯವನ್ನು (I am not anti Hindu) ಚರ್ಚಿಸುವುದಿಲ್ಲ.

ಸಮಸ್ಯೆಗಳು ಕರ್ನಾಟಕದ (Karnataka) ಜನರಿಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳಾಗಿವೆ ಮತ್ತು ಇದು ರಾಜ್ಯ ವಿಧಾನಸಭೆಗೆ ಚುನಾವಣೆಯಾಗಿದೆ,

ಸಂಸತ್ತಿಗೆ ಅಲ್ಲ. ಆದ್ದರಿಂದ, ಕರ್ನಾಟಕದ ಜನರು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದನ್ನು ಉಲ್ಲೇಖಿಸಿದ ಅವರು,

ತಮ್ಮ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ಸಿಎಂ ಸ್ಥಾನ ಅಲಂಕರಿಸುವ ಪೈಪೋಟಿ ಇದೆ ಎಂಬ ವದಂತಿಗಳಿಗೆ ತಿರುಗೇಟು ನೀಡಿದರು.

Exit mobile version