ಇತರರು ಏನು ಮಾಡುತ್ತಾರೋ ನನಗೆ ಗೊತ್ತಿಲ್ಲ, ನಾನು ಮಾತ್ರ ರಾಮನ ಆರ್ಶೀವಾದ ಪಡೆಯಲು ಅಯೋಧ್ಯೆಗೆ ಹೋಗುತ್ತೇನೆ: ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್

New Delhi: ಜನವರಿ (January)22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ (I Will Go to Ayodhya-Harbajan Singh) ಅಥವಾ ಇತರ ವಿರೋಧ ಪಕ್ಷಗಳು

ಭಾಗವಹಿಸುವ ಕುರಿತು ನನಗೆ ಗೊತ್ತಿಲ್ಲ. ಆದರೆ ಪ್ರಭು ಶ್ರೀರಾಮನ ಆಶೀರ್ವಾದ ಪಡೆಯಲು ನಾನು ಖಂಡಿತವಾಗಿಯೂ ಕಾರ್ಯಕ್ರಮಕ್ಕೆ ಹೋಗುತ್ತೇನೆ ಎಂದು ಎಎಪಿ (AAP) ಸಂಸದ ಮತ್ತು

ಮಾಜಿ ಕ್ರಿಕೆಟಿಗ (I Will Go to Ayodhya-Harbajan Singh) ಹರ್ಭಜನ್ ಸಿಂಗ್ ಹೇಳಿದ್ದಾರೆ.

ರಾಮಮಂದಿರ (Ramamandir) ಉದ್ಘಾಟನೆಗೆ ಹೆಚ್ಚಿನ ವಿರೋಧ ಪಕ್ಷಗಳು ಹೋಗದಿರುವ ನಿರ್ಧಾರ ತಳೆದಿದ್ದರೂ, ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ

(ರಾಮನ ವಿಗ್ರಹ) ‘ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಮಾಜಿ ಕ್ರಿಕೆಟಿಗ ಮತ್ತು ಎಎಪಿ ಸಂಸದ ಹರ್ಭಜನ್ ಸಿಂಗ್ (Harbajan Singh) ರ ಹೇಳಿದ್ದಾರೆ.

ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳು ಹೋಗಲಿ ಅಥವಾ ಹೋಗದಿದ್ದರೂ, ನಾನು ಖಂಡಿತವಾಗಿಯೂ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಹೋಗುತ್ತೇನೆ. ಇದು ವೈಯಕ್ತಿಕವಾಗಿ ನನ್ನ

ನಿಲುವು. ಈ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸುತ್ತಿರುವುದು ನಮ್ಮ ಅದೃಷ್ಟ, ಆದ್ದರಿಂದ ನಾವೆಲ್ಲರೂ ಹೋಗಿ ಶ್ರೀರಾಮನಿಂದ ಆಶೀರ್ವಾದವನ್ನು ಪಡೆಯಬೇಕು. ನಾನು ಖಂಡಿತವಾಗಿಯೂ

ರಾಮ ಮಂದಿರ ಉದ್ಘಾಟನೆಗೆ ಹೋಗಿ ಪ್ರಭು ಶ್ರೀರಾಮನ ಆಶೀರ್ವಾದವನ್ನು ಪಡೆಯುತ್ತೇನೆ ಎಂದಿದ್ದಾರೆ.

ಇನ್ನು ಬಿಜೆಪಿಯು (BJP) ಈ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿದೆ. 2024ರ ಲೋಕಸಭೆ ಚುನಾವಣೆಗೆ ಪ್ರಚಾರದ ಅಸ್ತ್ರವಾಗಿ ದೇವಾಲಯದ ಉದ್ಘಾಟನೆಯನ್ನು ಬಳಸಿಕೊಳ್ಳಲು ಬಿಜೆಪಿ

ಮುಂದಾಗಿದೆ ಎಂದು ಎಎಪಿ, ತೃಣಮೂಲ ಕಾಂಗ್ರೆಸ್, ಡಿಎಂಕೆ (DMK), ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧ ಪಕ್ಷಗಳು ರಾಮ ಮಂದಿರ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿವೆ.

ಆದರೆ ಎಎಪಿ ಸಂಸದ ಹರ್ಭಜನ್ ಸಿಂಗ್ ಅವರು ಉದ್ಘಾಟನೆಗೆ ಹೋಗುವುದಾಗಿ ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಎಎಪಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejrival) ಅವರು ಜನವರಿ 22 ರ ಕಾರ್ಯಕ್ರಮದ ಔಪಚಾರಿಕ ಆಹ್ವಾನ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.

ಆದರೆ ಜನವರಿ 22ರ ನಂತರ ಪತ್ನಿ, ಮಕ್ಕಳು ಹಾಗೂ ಪೋಷಕರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನು ಓದಿ: ದೇಶದೊಳಗೆ ನುಗ್ಗುತ್ತಿರುವ ಮ್ಯಾನ್ಮಾರ್ ಸೈನಿಕರು: ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಮಿಜೋರಾಂ ಮನವಿ

Exit mobile version