ಚಾಮುಂಡೇಶ್ವರಿ ಕ್ಷೇತ್ರದಿಂದ ಇನ್ಮುಂದೆ ಸ್ಪರ್ಧಿಸುವುದಿಲ್ಲ ; ಇದೇ ನನ್ನ ಕಡೆ ಚುನಾವಣೆ : ಸಿದ್ದರಾಮಯ್ಯ

congress

ಚಾಮುಂಡೇಶ್ವರಿ ಕ್ಷೇತ್ರದಿಂದ ಇನ್ಮುಂದೆ ಸ್ಪರ್ಧಿಸುವುದಿಲ್ಲ! ಇದೇ ನನ್ನ ಕಡೆ ಚುನಾವಣೆ. ಇನ್ಮುಂದೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಂತು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ(Congress Leader) ಸಿದ್ದರಾಮಯ್ಯ(Siddaramaiah) ಘೋಷಣೆ ಮಾಡಿದ್ದಾರೆ. ಮೈಸೂರು ನಗರದಲ್ಲಿ ನಡೆದ ಕಾಂಗ್ರೆಸ್(Congress) ಸಭೆಯೊಂದರಲ್ಲಿ ಮಾತನಾಡಿದ ಅವರು ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ದಿನಗಳಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ, ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ನನಗೆ ಮತ್ತೊಮ್ಮೆ, ಮಗದೊಮ್ಮೆ ಪ್ರಶ್ನಿಸಬೇಡಿ, ಕರೆಯಬೇಡಿ ಇದು ನನ್ನ ಮನವಿ. ನಿಮ್ಮ ತಲೆಯಿಂದ ಇದನ್ನು ತೆಗೆದುಹಾಕಿ, ನನ್ನನ್ನು ಸಂತೋಷ ಪಡಿಸಲು ಪ್ರತಿಬಾರಿ ಇಲ್ಲಿಗೆ ಬನ್ನಿ ಎಂದು ಕರೆಯಬೇಡಿ, ನನ್ನ ಬದಲಾಗಿ ಯಾರಾದರೂ ಬೇರೆ ವ್ಯಕ್ತಿಯನ್ನು ನಿಲ್ಲಿಸುತ್ತೇನೆ. ದಯಮಾಡಿ ಅವರನ್ನು ಗೆಲ್ಲಿಸಿ ಅಷ್ಟೇ ಸಾಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಈ ಹಿಂದೆಯಿಂದಲೂ ಕಾಂಗ್ರೆಸ್ ಕಾರ್ಯಕರ್ತರಲ್ಲಿದ್ದ ಗೊಂದಲಕ್ಕೆ ಅಂತ್ಯವಾಡಿದ್ದಾರೆ. ಇದಲ್ಲದೇ 2023ರ ವಿಧಾನಸಭಾ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇದೇ ನನ್ನ ಕೊನೆಯ ಚುನಾವಣೆಯಾಗಲಿದೆ. ಇದಾದ ಬಳಿಕ ಎಂಥ ಹುದ್ದೆ ಕೊಟ್ಟರೂ ನಾನು ಸ್ವೀಕರಿಸುವುದಿಲ್ಲ, ರಾಜ್ಯಸಭೆ ಮೆಂಬರ್ ಆಗಿ ಎಂದು ಕೇಳಿದ್ರೂ ನಾನು ಆಗಲ್ಲ. ಸದ್ಯ ಈ ಬಾರಿಯ ಚುನಾವಣೆಗೆ ಕೋಲಾರ, ಹುಣಸೂರು, ಕೊಪ್ಪಳ ಕ್ಷೇತ್ರದವರು ನನ್ನನ್ನು ಆಹ್ವಾನಿಸುತ್ತಿದ್ದಾರೆ. ಎಲ್ಲಾದರೂ ಒಂದು ಕಡೆ ನಿಂತು ಸ್ಪರ್ಧಿಸುತ್ತೇನೆ ಹೊರೆತು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ

Exit mobile version