ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಮಾಜಿ ನಾಯಕ!

ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಜಿಂಬಾಬ್ವೆ ತಂಡದ ಮಾಜಿ ನಾಯಕನಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC ) ಮೂರುವರೆ ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿಷೇಧ ಹೇರಿದೆ.
ಘಟನೆ ಹಿನ್ನಲೆ : ಜಿಂಬಾಬ್ವೆ ತಂಡದ ಮಾಜಿ ನಾಯಕನಿಗೆ ಸ್ಪಾಟ್ ಫಿಕ್ಸಿಂಗ್ (Spot Fixing) ಮಾಡುವಂತೆ ಆಹ್ವಾನ ಬಂದ ವಿಚಾರವನ್ನು ತಕ್ಷಣವೇ ತಿಳಿಸಲು ವಿಫಲವಾಗಿರುವ (Zimbabwe)ಹಾಗೂ ಇದರ ಜೊತೆಗೆ ಡೋಪಿಂಗ್ ನಿಯಮ ಉಲ್ಲಂಘನೆ ಮಾಡಿದ ಆರೋಪವೂ ಇವರ ಮೇಲಿದೆ. ಬ್ರೆಂಡನ್ ಟೇಲರ್‌ಗೆ (Brendan Taylor) ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಭ್ರಷ್ಟಾಚಾರ ನಿಗ್ರಹ ಘಟಕ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಮೂರೂವರೆ ವರ್ಷ ನಿಷೇಧ ಹೇರಿದೆ. ಈ ಕುರಿತಾಗಿ ಮಾಧ್ಯಮ ಪ್ರಕಟಣೆ ನೀಡಿರುವ ಐಸಿಸಿ, ಟೇಲರ್ ಕೂಡ ನಿಷೇಧ ಶಿಕ್ಷೆಯನ್ನು ಒಪ್ಪಿಕೊಂಡಿದ್ದು, ಜನವರಿ 28 ರಿಂದಲೇ ಶಿಕ್ಷೆ ಆರಂಭವಾಗಲಿದೆ.


ಪ್ರಕರಣವನ್ನು ಒಪ್ಪಿಕೊಂಡಿರುವ ಟೇಲರ್‌ ಈ ಬಗ್ಗೆ ಹೇಳಿದಿಷ್ಟು.
ಭಾರತ ಪ್ರವಾಸದಲ್ಲಿದ್ದ ವೇಳೆ ನಾನು ಕೊಕೇನ್ ಸೇವನೆ ಮಾಡುತ್ತಿದ್ದ ವಿಡಿಯೋವನ್ನು ಉದ್ಯಮಿಯೊಬ್ಬರು ಚಿತ್ರೀಕರಣ ಮಾಡಿದ್ದರು. ಬಳಿಕ ಈ ವಿಡಿಯೋವನ್ನು ಇಟ್ಟುಕೊಂಡು ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡುವಂತೆ ಒಪ್ಪಂದ ಮಾಡಿಕೊಳ್ಳಲು ಬ್ಲ್ಯಾಕ್ ಮೇಲ್ (Black Mail) ಮಾಡುತ್ತಿದ್ದರು ಎಂದು ಹೇಳಿದ್ದರು ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಕೊನೆಯ ಪಂದ್ಯದ ವೇಳೆ, ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದೆ ಎಂದು ಬ್ರೆಂಡನ್ ಟೇಲರ್‌ ಸ್ಪಷ್ಟಪಡಿಸಿದ್ದಾರೆ.


ಐಸಿಸಿ ಸ್ಪಷ್ಟನೆ :


ಟೇಲರ್‌ ಅವರಿಗೆ ಶಿಕ್ಷೆ ವಿಧಿಸಿರುವ ಬಗ್ಗೆ ಸ್ಪಷ್ಟಪಡಿಸಿರುವ ಐಸಿಸಿ, ಟೇಲರ್ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿರುವ ನಾಲ್ಕು ಆರೋಪಗಳನ್ನ ಮತ್ತು ಡೋಪಿಂಗ್ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿರುವ ಒಂದು ಪ್ರತ್ಯೇಕ ಆರೋಪವನ್ನ ಒಪ್ಪಿಕೊಂಡಿದ್ದಾರೆ ಹೀಗಾಗಿ ಬ್ರೆಂಡನ್ ಟೇಲರ್ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಮೂರೂವರೆ ವರ್ಷಗಳ ನಿಷೇಧವನ್ನ ಹೇರಲಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಬ್ರೆಂಡನ್‌ ಟೇಲರ್‌ ಅಂತರಾಷ್ಟ್ರೀಯ ಪಂದ್ಯಗಳಲ್ಲಿನ ಸಾಧನೆ, 205 ಏಕದಿನ, 34 ಟೆಸ್ಟ್ ಹಾಗೂ 45 ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ 17 ಶತಕಗಳೊಂದಿಗೆ 9938 ರನ್ ಬಾರಿಸಿದ್ದಾರೆ.

Exit mobile version