ಐಸಿಸಿ ಟೆಸ್ಟ್‌‌ ಶ್ರೇಯಾಂಕ; ನಂ.1 ಸ್ಥಾನಕ್ಕೇರಿದ ನ್ಯೂಜಿ಼ಲ್ಯಾಂಡ್ ನಾಯಕ ಕೇನ್ ವಿಲಿಯಂಸನ್

ಹೊಸದಿಲ್ಲಿ, ಜೂ. 30: ನ್ಯೂಜಿ಼ಲ್ಯಾಂಡ್ ತಂಡದ ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಗೆದ್ದುಕೊಡುವ ಮೂಲಕ ಚಾಂಪಿಯನ್ ಸ್ಥಾನ ಗಿಟ್ಟಿಸಿಕೊಟ್ಟ ನಾಯಕ ಕೇನ್ ವಿಲಿಯಂಸನ್, ಐಸಿಸಿ ಟೆಸ್ಟ್‌ ಬ್ಯಾಟ್ಸಮನ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.

ನ್ಯೂಜಿ಼ಲ್ಯಾಂಡ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿರುವ ವಿಲಿಯಂಸನ್, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ಸು ಕಂಡಿದ್ದರು. ವಿಲಿಯಂಸನ್ ಅವರ ಅದ್ಭುತ ಪ್ರದರ್ಶನದಿಂದ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. 901 ರೇಟಿಂಗ್ ಪಾಯಿಂಟ್ಸ್ ಪಡೆದಿರುವ ವಿಲಿಯಂಸನ್, ನಂ.1 ಸ್ಥಾನಕ್ಕೇರುವ ಮೂಲಕ ಶ್ರೇಷ್ಠ ಬ್ಯಾಟ್ಸಮನ್ ಎನಿಸಿದ್ದರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಬುಷೇನ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

ಇನ್ನೂ ಟೀಂ ಇಂಡಿಯಾ ನಾಯಕ ‌ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದರೆ. ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಸಹ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Exit mobile version