ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ!

raid

ಬೆಂಗಳೂರು : ಕಳೆದ ರಾತ್ರಿ ಸಿಸಿಬಿ(CCB) ಪೊಲೀಸರ(Police) ಕಾರ್ಯಾಚರಣೆ ಗಾಂಧೀನಗರದ(Gandhinagar) ಮೂಡ್ ಲೈವ್ ಬ್ಯಾಂಡ್ನಲ್ಲಿ ಮಸ್ತಾಗಿ ಕುಣಿತ್ತಿದ್ದ 75ಕ್ಕು ಹೆಚ್ಚು ಗ್ರಾಹಕರು ಮತ್ತು 58 ಡ್ಯಾನ್ಸ್ ಗರ್ಲ್ಗಳು ಪತ್ತೆ, ಅಕ್ರಮವಾಗಿ ಹುಡುಗಿಯರನ್ನ ಕರೆತಂದು ಲೈವ್ ಬ್ಯಾಂಡ್ ನಡೆಸಿದ ಆರೋಪ ಉಪ್ಪಾರಪೇಟೆ(Upparpet) ಪೊಲೀಸ್ ಠಾಣೆಯಲ್ಲಿ(Police Station) ಪ್ರಕರಣ ದಾಖಲಾಗಿದೆ. ಸಿಸಿಬಿ ಇನ್ಸ್ಪೆಕ್ಟರ್ ಮಹಮ್ಮದ್ ಸಿರಾಜ್ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಅಕ್ರಮವಾಗಿ ಕರೆತಂದಿದ್ದ 58 ಯುವತಿಯರನ್ನ ರಕ್ಷಿಸಲಾಗಿದೆ.

ತಡರಾತ್ರಿ ನಡೆದ ಈ ದಾಳಿಯಲ್ಲಿ ಅಕ್ರಮವಾಗಿ ಯುವತಿಯರನ್ನ ಕರೆತರಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ತಕ್ಷಣ ಲೈವ್ ಬ್ಯಾಂಡನ್ನ ಮುಚ್ಚಲು ಆದೇಶಿಸಿದ ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತ. ರಾಜ್ಯದ ಅನೇಕ ಸ್ಥಳಗಳಲ್ಲಿ ನಡೆಯುತ್ತಿರುವ ಅಕ್ರಮ ಲೈವ್ ಬ್ಯಾಂಡ್ ಮೇಲು ಪೊಲೀಸರು ಕಣ್ಣಿಟ್ಟಿದ್ದು, ಮುಂದಿನ ದಿನಗಳಲ್ಲಿ ದಾಳಿ ನಡೆಸುವ ಸೂಚನೆ ಹೊರಡಿಸಿದ್ದಾರೆ.

ಅಕ್ರಮವಾಗಿ ಯುವತಿಯರನ್ನ ಕರೆತಂದು ರಾಜ್ಯದ ವಿವಿಧ ಡ್ಯಾನ್ಸ್ ಪಬ್ಗಳಿಗೆ ಮಾರಾಟ ಮಾಡೋ ಅನೇಕ ಪ್ರಕರಣಗಳು ಕೂಡ ಬೆಳಕಿಗೆ ಬಂದಿದೆ. ಬಿಹಾರ, ಒರಿಸ್ಸಾದಿಂದ ಬೇರೆ ಬೇರೆ ಆಮಿಷ ಒಡ್ಡಿ ಕರೆತಂದು ವೇಶ್ಯ ವಾಟಿಕೆ ದಂಧೆಗೆ ಬಳಸಿಕೊಳ್ಳುತ್ತಿರುವ ಆರೋಪ ಕೇಳಿಬಂದಿರುವುದಾಗಿ ತಿಳಿಸಿದ್ದಾರೆ.

Exit mobile version