ಕೋಲಾರದಲ್ಲಿ ಮುಂಜಾನೆ ಟೀ, ಕಾಫಿಗೂ ಮೊದಲೇ ಸಿಗುತ್ತೆ ಎಣ್ಣೆ: ಕಳೆದ 3 ತಿಂಗಳಲ್ಲಿ 40 ಕೊಲೆ

Kolar: ಚಿನ್ನದ ನಾಡಿನ ಜನರು ಬೆಚ್ಚಿ ಬಿದ್ದಿದ್ದು, ಕೋಲಾರ ಜಿಲ್ಲೆಯಲ್ಲಿ ಕಳೆದ ಮೂರು (In Kolar 40 murders) ತಿಂಗಳಲ್ಲಿ 40 ಕೊಲೆಗಳಾಗಿದೆ. ಈ ವಿಚಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್​

ಅಧ್ಯಕ್ಷತೆಯಲ್ಲಿ ಗುರುವಾರ (ನ.17) ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಕಷ್ಟು ಚರ್ಚೆಯಾಯಿತು. ಸಚಿವರು ಹಾಗೂ ಶಾಸಕರು ಎರಡನೇ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲೇ

ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ನಡೆದ ಸರಣಿ ಕೊಲೆಗಳು ಮತ್ತು ಅಕ್ರಮ ಮದ್ಯ ಹಾಗೂ ಡ್ರಗ್ಸ್​ ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಕೋಲಾರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ, ಕ್ರಿಕೆಟ್​ ಬೆಟ್ಟಿಂಗ್​, ಚಿಲ್ಲರೆ ಅಂಗಡಿಗಳಲ್ಲೂ ಮದ್ಯ ಮಾರಾಟ, ಅಕ್ರಮ ಜೂಜು ಅಡ್ಡೆಗಳು, ಮೆಡಿಕಲ್​ ಶಾಪ್​ಗಳಲ್ಲಿ ಅಕ್ರಮ ಡ್ರಗ್ಸ್​ ಮಾರಾಟ

ನಡೆಯುತ್ತಿದ್ದು, ಜಿಲ್ಲೆಯಲ್ಲಿ ಕೊಲೆಗಳಷ್ಟೇ ನಡೆಯುತ್ತಿವೆ. ಈ ಕುರಿತು ಸಭೆಯಲ್ಲಿ ಅಧಿಕಾರಿ ವಿರುದ್ಧ ಸಚಿವ ಬೈರತಿ ಸುರೇಶ್ ಹಾಗೂ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್​​ ಕೆಂಡಾಮಂಡಲರಾದರು.

ಡ್ರಗ್​ ಕಂಟ್ರೋಲರ್​ ಶ್ಯಾಮಲಾ ಅವರನ್ನು ಅಮಾನತು ಮಾಡುವಂತೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳನ್ನು ಕೂಡಾ ತರಾಟೆಗೆ ತೆಗೆದುಕೊಂಡ ಸಚಿವ ಸುರೇಶ್

ಮತ್ತು ಕೋಲಾರ ಶಾಸಕ ಕೊತ್ತೂರು ಮಂಜುನಾಥ್,​ “ಎಲ್ಲಂದರಲ್ಲಿ ಮದ್ಯ ಸಿಗುತ್ತಿದೆ, ಗಾಂಜಾ ಮಾರಾಟದ ಬಗ್ಗೆ ನೀವು ದಾಳಿ ಮಾಡುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.

ಇನ್ನು ಪೊಲೀಸ್​ ಇಲಾಖೆಯಲ್ಲಿ ಕೋಲಾರ ನಗರ ಸೇರಿದಂತೆ ಜಿಲ್ಲೆಯಲ್ಲಿ ಖಾಲಿ ಇರುವ ಇನ್ಸ್​ಪೆಕ್ಟರ್​ ಮತ್ತು ಸಬ್​ಇನ್ಸ್​ಪೆಕ್ಟರ್​ ಹುದ್ದೆಗಳ ಭರ್ತಿ ಸಂಬಂಧಿಸಿದಂತೆ ಸಭೆಯಲ್ಲೇ ಗೃಹಸಚಿವ ಜಿ.ಪರಮೇಶ್ವರ್

ಅವರಿಗೆ ಪೋನ್​ ಕರೆ ಮಾಡಿ (In Kolar 40 murders) ಮಾತನಾಡಿದರು.

3 ತಿಂಗಳಲ್ಲಿ ಕೋಲಾರದಲ್ಲಿ 40 ಕೊಲೆ


ವಿವಿಧ ಕಾರಣಗಳಿಗಾಗಿ ಕಳೆದ 3 ತಿಂಗಳಲ್ಲಿ ಜಿಲ್ಲೆಯಲ್ಲಿ ಬರೊಬ್ಬರಿ 40 ಕೊಲೆಗಳಾಗಿದ್ದು, ಅದರಲ್ಲೂ ನಾಲ್ಕು ಅತಿ ಪ್ರಮುಖ ಹಾಗೂ ಇಡೀ ಕೋಲಾರ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವ ಕೊಲೆಗಳಾಗಿದ್ದು,

ಮಾಲೂರು ಗ್ರಾಮ ಪಂಚಾಯ್ತಿ ಸದಸ್ಯ ಅನಿಲ್​​ ಕುಮಾರ್ ಕೊಲೆ, ಶ್ರೀನಿವಾಸಪುರದ ಕಾಂಗ್ರೇಸ್ ಮುಖಂಡ ಗೃಹಸಚಿವರ ಆಪ್ತ ಶ್ರೀನಿವಾಸ್​ ಕೊಲೆ ಪ್ರಕರಣ ಮತ್ತು ಕೋಲಾರ ನಗರದಲ್ಲಿ ಒಬ್ಬ ಅಪ್ರಾಪ್ತ

ಬಾಲಕ ಕಾರ್ತಿಕ್​ ಸಿಂಗ್​ ಕೊಲೆಗಳು ಇಡೀ ಜಿಲ್ಲೆಯನ್ನೇ ಆತಂಕಕ್ಕೀಡು ಮಾಡಿತ್ತು.

ಈ ಪ್ರಕರಣಗಳು ಪೊಲೀಸ್ ಇಲಾಖೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಾಗಿದ್ದವು. ಈ ಕಾರಣದಿಂದಲೇ ಸಚಿವರ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲೇ ಎಲ್ಲಾ

ಪ್ರಕರಣಗಳ ಬಗ್ಗೆ ಸಚಿವರು ಮಾಹಿತಿ ಪಡೆದರಲ್ಲದೇ ಪೊಲೀಸ್​ ಅಧಿಕಾರಿಗಳಿಗೆ ಜಿಲ್ಲೆಯನ್ನು ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ತಾಕೀತು ಮಾಡಿದರು.

ಕೋಲಾರ ಜಿಲ್ಲೆಯಾದ್ಯಂತ ಹೀಗೆ ಕಳೆದ ಮೂರು ತಿಂಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಇಡೀ ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಒಕ್ಕೂರಲಿನಿಂದ ಧ್ವನಿ

ಎತ್ತಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಕೇವಲ ಜನರನ್ನಷ್ಟೇ ಅಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿದ್ದೆಗೆಡಿಸಿದ್ದು ಕೂಡಲೇ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು ಇನ್ಮುಂದೆಯಾದರೂ ಸರಣಿ ಕೊಲೆಗಳಿಗೆ ಕಡಿವಾಣ ಬೀಳುತ್ತಾ ಕಾದು ನೋಡಬೇಕಿದೆ.

ಇದನ್ನು ಓದಿ: ಕೂದಲು ಉದುರುವ ಸಮಸ್ಯೆ ಇದೀಯಾ? ಹಾಗಾದ್ರೆ, ಈ ಸಮಸ್ಯೆಗೆ ಇಲ್ಲಿದೆ ಪರಿಹಾರ

Exit mobile version