ನವದೆಹಲಿ, ಮೇ. 05: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3.82 ಲಕ್ಷ ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 34. 87ಲಕ್ಷಕ್ಕೇರಿದೆ. ಇದೇ ವೇಳೆಯಲ್ಲಿ 3,780 ಮಂದಿ ಸಾವಿಗೀಡಾಗಿದ್ದು, ಕನಿಷ್ಠ 13 ರಾಜ್ಯಗಳಲ್ಲಿ 100ಕ್ಕಿಂತ ಹೆಚ್ಚು ಸಾವು ಸಂಭವಿಸಿದೆ. ದೇಶದಲ್ಲಿ ಮಹಾರಾಷ್ಟ್ರದಲ್ಲಿ 51,880 ಪ್ರಕರಣ ಪತ್ತೆಯಾಗಿದ್ದು ಕರ್ನಾಟಕದಲ್ಲಿ 44,631 ಪ್ರಕರಣಗಳು ವರದಿ ಆಗಿವೆ.
ಭಾರತದಲ್ಲಿ ಪ್ರತಿ ದಿನ ಮೂರು ಲಕ್ಷ ಕೊವಿಡ್ -19 ಪ್ರಕರಣಗಳನ್ನು ವರದಿಯಾಗುತ್ತಿದ್ದು ಹಲವಾರು ರಾಜ್ಯಗಳು ಇನ್ನೂ ಆಮ್ಲಜನಕದ ಪೂರೈಕೆಯ ಕೊರತೆ ಇದೆ . ಸಮಯಕ್ಕೆ ಸರಿಯಾಗಿ ಆಮ್ಲಜನಕವನ್ನು ಪೂರೈಸದಿದ್ದಲ್ಲಿ ಹಲವಾರು ಜೀವಗಳು ನಷ್ಟವಾಗುತ್ತವೆ ಎಂದು ಹರ್ಯಾಣ ಸರ್ಕಾರ ಮಂಗಳವಾರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ಗೆ ತಿಳಿಸಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕವಾಗಿ ಪತ್ರ ಬರೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಗೆ ಒತ್ತಾಯಿಸಿದೆ.
ಕೇೆಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಗಳ ಪ್ರಕಾರ ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 2,06,65,148 ಆಗಿದೆ. ಒಟ್ಟು 1,69,51,731 ಮಂದಿ ಚೇತರಿಸಿಕೊಂಡಿದ್ದಾರೆ. ಲಸಿಕೆ ಪಡೆದವರ ಸಂಖ್ಯೆ 16,04,94,188 ಆಗಿದೆ.