ಕಳೆದ 24 ಗಂಟೆಗಳಲ್ಲಿ 4529 ಮಂದಿ ಕೊವಿಡ್ ರೋಗಿಗಳು ಸಾವು

ನವದೆಹಲಿ, ಮೇ. 19: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4529 ಮಂದಿ ಕೊವಿಡ್ ರೋಗಿಗಳು ಸಾವಿಗೀಡಾಗಿದ್ದು, 2.67 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದರೊಂದಿಗೆ ದೇಶದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 25,496,330 ಕ್ಕೆ ಏರಿದ್ದು ಸಾವಿನ ಸಂಖ್ಯೆ 283,248 ಕ್ಕೆ ಏರಿದೆ.

ಈವರೆಗೆ 2,19,86,363ಮಂದಿ ಗುಣಮುಖರಾಗಿದ್ದು. ದೇಶದಲ್ಲಿ ಇನ್ನೂ 32,26,719 ಆಕ್ಟಿವ್ ಕೇಸುಗಳಿವೆ. ಕಳೆದ ಎರಡು ವಾರಗಳಿಂದ ಸುಮಾರು 200 ಜಿಲ್ಲೆಗಳಲ್ಲಿ ಕೊವಿಡ್ ಪ್ರಕರಣಗಳು ಕುಸಿತ ಕಂಡಿವೆ. ಕಳೆದ 13 ವಾರಗಳಿಂದ ಸತತವಾಗಿ ಪ್ರಕರಣಗಳ ಸಂಖ್ಯೆ ಏರಿಕೆ ಆದ ನಂತರ ದೇಶದ ಒಟ್ಟಾರೆ ಪ್ರಕರಣದ ಪಾಸಿಟಿವಿಟಿ ದರ ಕಳೆದ ಏಳು ದಿನಗಳಲ್ಲಿ ಕುಸಿತವನ್ನು ದಾಖಲಿಸಿದೆ ಎಂದು ಸರ್ಕಾರ ಮಂಗಳವಾರ ಹೇಳಿದೆ.

Exit mobile version