ಆದಾಯ ತೆರಿಗೆದಾರರಿಗೆ ಐಟಿಆರ್ ಫೈಲಿಂಗ್ ; ಪ್ಯಾನ್-ಆಧಾರ್ ಲಿಂಕ್ ಮಾಡಲು ಈ ದಿನವೇ ಕಡೆಯ ದಿನಾಂಕ!

tax payers

ಆದಾಯ ತೆರಿಗೆದಾರರು( Tax Payers) ತಡವಾದ ITR, ಪರಿಷ್ಕೃತ ರಿಟರ್ನ್(Return) ಅನ್ನು ಸಲ್ಲಿಸಬೇಕು ಮತ್ತು ಈ ಕಾರ್ಯವಿಧಾನಗಳನ್ನು ಪೂರ್ಣಗೊಳಿಸುವ ದಿನಾಂಕ ಹತ್ತಿರವಾಗುತ್ತಿರುವ ಹಿನ್ನೆಲೆ ಆಧಾರ್(Aadhar) ಮತ್ತು ಪಾನ್(PAN) ಸಂಖ್ಯೆಯನ್ನು (PAN) ಕೂಡಲೇ ಲಿಂಕ್ ಮಾಡಬೇಕು ಎಂದು ತಿಳಿಸಿದೆ. ಎಲ್ಲಾ ತೆರಿಗೆ ವೃತ್ತಿಪರರು ಮತ್ತು ತೆರಿಗೆ ಪಾವತಿದಾರರಿಗೆ ಅನುಸರಣೆಗಾಗಿ ಮಾಹಿತಿ ಸ್ಪಷ್ಟಪಡಿಸುವಾಗ ಆದಾಯ ತೆರಿಗೆ ಇಲಾಖೆ(Income Tax Department) ಈ ಮಾಹಿತಿಯನ್ನು ಪ್ರಕಟಿಸಿದೆ.

ITR ಫೈಲಿಂಗ್ ಕೊನೆಯ ದಿನಾಂಕ ತಡವಾದ ರಿಟರ್ನ್, ಪರಿಷ್ಕೃತ ರಿಟರ್ನ್, ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡುವುದು ಮತ್ತು ಮೌಲ್ಯಮಾಪನಕ್ಕಾಗಿ ಇ-ಪ್ರಕ್ರಿಯೆಗಳ ಅನುಸರಣೆ ಅಂದ್ರೆ ಆನ್ಲೈನ್ ಪ್ರಕ್ರಿಯೆಗಳು ಇತ್ಯಾದಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ ಇದೇ ಮಾರ್ಚ್ 31.03.2022 ಆಗಿದೆ ಎಂಬುದನ್ನು ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರು ಗಮನಿಸಬೇಕಾದ ಅಂಶ! ಈ ಬಗ್ಗೆ ಸಂಸ್ಥೆ ಕೂಡ ಗ್ರಾಹಕರಿಗೆ ವಿನಂತಿಸಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿಕೆಯಲ್ಲಿ ತಿಳಿಸಿಲಾಗಿದೆ.

ಆಧಾರ್ ಪ್ಯಾನ್ ಲಿಂಕ್ ಆದಾಯ ತೆರಿಗೆ ಕಾಯಿದೆ 1961ರ ಅಡಿಯಲ್ಲಿ ಅಗತ್ಯವಿರುವಂತೆ ತೆರಿಗೆದಾರರು ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಿಸಬೇಕಾಗುತ್ತದೆ. ಐಟಿಆರ್‌ಗಳ ತ್ವರಿತ ಮತ್ತು ಸುಲಭವಾದ ಇ-ಪರಿಶೀಲನೆಯನ್ನು ಸಕ್ರಿಯಗೊಳಿಸಲು ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಿಸಿ. ನಿಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು ಅಂತಿಮ ದಿನಾಂಕ ಮಾರ್ಚ್ 31, 2022. ಇಂದೇ ಲಿಂಕ್ ಮಾಡಿ ಎಂದು ಆದಾಯ ತೆರಿಗೆ ಇಂಡಿಯಾ ಅಧಿಕೃತವಾಗಿ ಟ್ವೀಟ್ ಮಾಡಿದೆ. ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು, ನೀವು ಕೆಳೆಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಿದೆ. ಈ ಲಿಂಕ್ ನೇರವಾಗಿ ಆಧಾರ್ ಜೋಡಣೆಯ ಪೋರ್ಟಲ್ಗೆ ತಲುಪುತ್ತದೆ.


https://eportal.incometax.gov.in/iec/foservices/#/pre-login/bl-link-aadhaar.

ನೀವು ಪ್ಯಾನ್, ಆಧಾರ್ ಸಂಖ್ಯೆ, ಆಧಾರ್ ಮತ್ತು ಮೊಬೈಲ್ ಸಂಖ್ಯೆಯ ಪ್ರಕಾರ ಹೆಸರು ನಮೂದಿಸಬೇಕು. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಮುದ್ರಿತವಾಗಿರುವ ‘ಆಧಾರ್‌ನಲ್ಲಿರುವ ಹೆಸರು’ ನಿಖರವಾಗಿ ಒಂದೇ ಆಗಿರುತ್ತದೆ ಮತ್ತು ಪ್ಯಾನ್ ಕಾರ್ಡ್‌ನೊಂದಿಗೆ ಹೊಂದಿಕೆಯಾಗಬೇಕು ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳುವುದು ಸೂಕ್ತ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Exit mobile version