ಮೊಬೈಲ್ ತಂತ್ರಜ್ಞಾನವು ಮುಂದುವರೆದಂತೆ ಮೊಬೈಲ್ ಸಂಖ್ಯೆಗಳನ್ನು (how to retrieve deleted contact) ನೆನಪಿನಲ್ಲಿಡುವುದನ್ನು ಮರೆತುಬಿಡುತ್ತಿದ್ದೇವೆ. ಬೇರೆಯವರ ಮೊಬೈಲ್ ಸಂಖ್ಯೆಗಳನ್ನು
ನೆನಪಿನಲ್ಲಿಡುವುದಕ್ಕಿಂತ ಜಾಸ್ತಿ ನಾವು ಬಳಸುವ ಫೋನ್ನಲ್ಲಿ ಶೇಖರಿಸುತ್ತೇವೆ. ಒಂದು ವೇಳೆ ಆ ಸಂಖ್ಯೆಗಳು ಡಿಲೀಟ್ ಆಗುತ್ತವೆ. ಆ ರೀತಿ ಡಿಲೀಟ್ ಆದ ಮೊಬೈಲ್ ಸಂಖ್ಯೆಯನ್ನು ಮರಳಿ ಪಡೆಯುವುದು
ಹೇಗೆ? ಸರಳ (how to retrieve deleted contact) ಮಾಹಿತಿ ಇಲ್ಲಿದೆ.
ಡಿಲೀಟ್ ಆದ ಕಾಂಟೆಕ್ಟ್ ಸಂಖ್ಯೆಯನ್ನು ಕೆಲವು ತಂತ್ರಗಳನ್ನು ಬಳಸಿ ಮರಳಿ ಪಡೆಯಬಹುದು. ಎಲ್ಲಾ ಕಾಂಟೆಕ್ಟ್ ನಂಬರ್ ಗೂಗಲ್ ಅಕೌಂಟ್ನಲ್ಲಿ ಲಭ್ಯವಿದ್ದು, ಗೂಗಲ್ ಖಾತೆಯ ಮೂಲಕ ಡಿಲೀಟ್
ಆದ ಕಾಂಟೆಕ್ಟ್ ನಂಬರ್ ಅನ್ನು ಮರಳಿ ಪಡೆಯಬಹುದು. ಇದಕ್ಕಾಗಿ ನೀವು ಈ ಹಂತಗಳನ್ನು ಅನುಸರಿಸಬೇಕು.
ನಿಮ್ಮ ಮೊಬೈಲ್ನಲ್ಲಿ ಗೂಗಲ್ ಕಾಂಟೆಕ್ಟ್ ಅಪ್ಲಿಕೇಶನನ್ನು ಡೌನ್‌ಲೋಡ್ ಮಾಡಿ.
ಫೋನ್ ನಂಬರ್ ಸೇವ್ ಮಾಡಲು Google IDಯೊಂದಿಗೆ ಈ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ.
ಈಗ ಕೆಳಭಾಗದಲ್ಲಿರುವ ಫಿಕ್ಸ್ & ಮ್ಯಾನೇಜ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಈಗ ನೀವು ಕಾಂಟೆಕ್ಟ್ ನಂಬರ್ ಆಮದು ಮಾಡಲು, ರಫ್ತು ಮಾಡಲು ಮತ್ತು ಮರುಸ್ಥಾಪಿಸಲು ಆಯ್ಕೆಗಳನ್ನು ಪಡೆಯುತ್ತೀರಿ.
ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಈಗ ಡಿಲೀಟ್ ಆದ ಎಲ್ಲಾ ಕಾಂಟೆಕ್ಟ್ ಫೋನ್‌ಗೆ ಹಿಂತಿರುಗುತ್ತವೆ.
ಮೊಬೈಲ್ ನಂಬರ್ ಅನ್ನು ಫೋನ್ ಬ್ಯಾಕಪ್‌ನಿಂದ ಮರಳಿ ಪಡೆಯಿರಿ:
ಫೋನ್‌ನ ಬ್ಯಾಕಪ್ ಮಾಡಿದರೆ, ಡಿಲೀಟ್ ಆದ ಸಂಪರ್ಕ ಸಂಖ್ಯೆಗಳನ್ನು ಮರುಪಡೆಯಬಹುದು. ಇದಕ್ಕಾಗಿ ಈ ಹಂತಗಳನ್ನು ಅನುಸರಿಸಬೇಕಾಗುತ್ತದೆ.
ಫೋನ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ.
ಬ್ಯಾಕಪ್ ಮತ್ತು ರಿ-ಸ್ಟೋರ್ ಆಯ್ಕೆಗೆ ಹೋಗಿ.
ಇಲ್ಲಿ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಕಾಂಟೆಕ್ಸ್ ಆಯ್ಕೆಯನ್ನು ಆರಿಸಿ.
ಡಿಲೀಟ್ ಆದ ಕಾಂಟೆಕ್ಟ್ ನಂಬರ್ ರಿ-ಸ್ಟೋರ್ ಮಾಡಲು ಬಯಸುತ್ತೀರಾ ಅಥವಾ ಬೇಡವೇ ಎಂದು ಕೇಳುವ ಸಂದೇಶವನ್ನು ನೋಡಬಹುದು. ಹೌದು, ಎಂದು ಬಯಸಿದರೆ ನಂತರ ರಿ-ಸ್ಟೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಒಂದು ವೇಳೆ ಗೂಗಲ್ ಖಾತೆ ಅಥವಾ ಫೋನ್ ಬ್ಯಾಕಪ್ ಹೊಂದಿಲ್ಲದಿದ್ದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದ್ದು, ಡಿಲೀಟ್ ಆದ ಕಾಂಟ್ಯಾಕ್ಟ್ ನಂಬರ್ ಗಳನ್ನೂ
ಇವುಗಳ ಮೂಲಕ ಹಿಂಪಡೆಯಬಹುದಾಗಿದೆ. ಫೋನ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಡಿಲೀಟ್ ಆದ ಕಾಂಟ್ಯಾಕ್ಟ್ ಸಂಖ್ಯೆಗಳನ್ನು ಕಂಡುಹಿಡಿಯುವ ಸೌಲಭ್ಯವನ್ನು ಈ ಅಪ್ಲಿಕೇಶನ್‌ಗಳು ಒದಗಿಸುತ್ತವೆ.
ಥರ್ಡ್ ಪಾರ್ಟಿ ಅಪ್ಲಿಕೇಷನ್ಗಳನ್ನು ಡೌನ್‌ಲೋಡ್ ಮಾಡುವಾಗ, ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು ಎಂಬುದನ್ನು
ನೆನಪಿನಲ್ಲಿಡಿ. ಥರ್ಡ್ ಪಾರ್ಟಿ ಅಪ್ಲಿಕೇಷನ್ ಅಪಾಯಕಾರಿಯಾಗಿದೆ.
ಇದನ್ನು ಓದಿ:” ಆರೋಗ್ಯಕ್ಕೆ ಬೇವು ಎಷ್ಟು ಪ್ರಯೋಜನಕಾರಿ ಗೊತ್ತಿದೀಯಾ? ಹಾಗಾದ್ರೆ ತಿಳಿಯೋಣ ಬನ್ನಿ
- ಭವ್ಯಶ್ರೀ ಆರ್ ಜೆ