ಯೂಟ್ಯೂಬ್ ಚಾನೆಲ್​ನಲ್ಲಿ ಚಂದಾದಾರರನ್ನು ಹೆಚ್ಚಿಸಲು ಇಲ್ಲಿದೆ ಸುಲಭ ಮಾರ್ಗ

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ (increase subscribers on YouTube channel) ಬಳಕೆದಾರರು ಜಾಸ್ತಿಯಾಗಿದ್ದು, ಯಶಸ್ಸಿಗೆ ಪರಿಶ್ರಮ ಅತ್ಯಗತ್ಯ. ಅದೇ ರೀತಿ, ಯೂಟ್ಯೂಬ್​ನಲ್ಲಿ

ಚಂದಾದಾರರನ್ನು ಹೆಚ್ಚಿಸಲು, ನೀವು ನಿರಂತರವಾಗಿ ನಿಮ್ಮ ಚಾನಲ್‌ಗೆ ವಿಡಿಯೋಗಳನ್ನು ಅಪ್‌ಲೋಡ್ (Upload) ಮಾಡುತ್ತಿರಬೇಕು. ಯೂಟ್ಯೂಬ್​ನಲ್ಲಿ ಯಾವ ವಿಷಯದ ಬಗ್ಗೆ ವಿಡಿಯೋಗಳನ್ನು

ಮಾಡುತ್ತಿದ್ದೀರೊ, ಅದರಲ್ಲಿ (increase subscribers on YouTube channel) ಕ್ರಿಯಾಶೀಲರಾಗಿರಬೇಕು.

ದೇಶದಲ್ಲಿ ಯೂಟ್ಯೂಬ್‌ ಜನಪ್ರಿಯತೆ ಗಮನಾರ್ಹ ಏರಿಕೆ ಕಂಡಿದ್ದು, ಕೌಶಲ್ಯದಿಂದ ಮನೆಯಲ್ಲೇ ಕುಳಿತು ಹಣವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ. ಹಾಗಾಗಿ ಯೂಟ್ಯೂಬ್‌ ಚಾನೆಲ್​(Channel) ಗಳ

ಸಂಖ್ಯೆ ಕೂಡ ಲೆಕ್ಕಕ್ಕೆ ಸಿಗದಷ್ಟಾಗಿದ್ದು, ಆದರೆ, ಯೂಟ್ಯೂಬ್ ಖಾತೆ ತೆರೆದು ಕೇವಲ ವಿಡಿಯೋ ಹಂಚಿಕೊಳ್ಳುತ್ತಿದ್ದರೆ ಸಾಕಾಗದು.

ಯೂಟ್ಯೂಬ್ ಖಾತೆ ತೆರೆದು ಹಣಗಳಿಸಬೇಕು ಎಂದರೆ ಅದಕ್ಕೆ ಒಂದಿಷ್ಟು ಮಾನದಂಡಗಳಿದ್ದು, ಒಂದು ಸಾವಿರ ಚಂದಾದಾರರು, ನಾಲ್ಕು ಸಾವಿರ ವೀಕ್ಷಣೆ ಹೀಗೆ ಕೆಲವೊಂದು ನಿಯಮಗಳಿವೆ. ಈ ಪೈಕಿ

ಬಳಕೆದಾರರಿಗೆ ಚಂದಾದಾರರನ್ನು ಗಳಿಸುವುದೇ ದೊಡ್ಡ ಸವಾಲಾಗಿದೆ. ಹಾಗಾದರೆ, ನಿಮ್ಮ ಚಾನಲ್​ಗೆ ಚಂದಾದಾರರ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ಬಯಸಿದರೆ ಈ ಟ್ರಿಕ್ (Trick) ಅನ್ನು ಪ್ರಯೋಗಿಸಬಹುದು.

ಅದೇ ರೀತಿ, ಯೂಟ್ಯೂಬ್​ನಲ್ಲಿ (Youtube) ಚಂದಾದಾರರನ್ನು ಹೆಚ್ಚಿಸಲು, ನಿರಂತರವಾಗಿ ನಿಮ್ಮ ಚಾನಲ್‌ಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರಬೇಕು. ಯೂಟ್ಯೂಬ್​ನಲ್ಲಿ ಯಾವ ವಿಷಯದ ಬಗ್ಗೆ

ವಿಡಿಯೋಗಳನ್ನು ಮಾಡುತ್ತಿದ್ದೀರೊ, ಅದರಲ್ಲಿ ಕ್ರಿಯಾಶೀಲರಾಗಿರಬೇಕು. ವಾರದಲ್ಲಿ ಕನಿಷ್ಠ 3 ವಿಡಿಯೋಗಳನ್ನು ಯೂಟ್ಯೂಬ್​ಗೆ ಅಪ್‌ಲೋಡ್ ಮಾಡಲೇಬೇಕು.

ಉತ್ತಮ ಗುಣಮಟ್ಟದ ಮಾಹಿತಿಯನ್ನು ಒದಗಿಸಬೇಕು. ವಿಡಿಯೋವನ್ನು (Video) ಪೋಸ್ಟ್ ಮಾಡಿದಾಗ ಅದರ ಗುಣಮಟ್ಟಕ್ಕೆ ವಿಶೇಷ ಗಮನ ನೀಡಬೇಕಾಗಿದ್ದು, ಅದು ಚಾನಲ್ ಅನ್ನು ಇತರರಿಗಿಂತ

ಭಿನ್ನವಾಗಿಸುತ್ತದೆ. ಹಾಗೆಯೇ ಹೈ ಕ್ವಾಲಿಟಿಯಲ್ಲಿ (High Quality) ಹಂಚಿಕೊಳ್ಳಬೇಕು. ಯೂಟ್ಯೂಬ್​ ಚಾನಲ್ ಅನ್ನು ಪ್ರಾರಂಭಿಸಿ ಅದರಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿಬಿಟ್ಟರೆ ಸಾಲದು.

ನೆಟ್‌ವರ್ಕಿಂಗ್ ವಿಸ್ತಾರವಾಗಿರಬೇಕು. ಇದಕ್ಕಾಗಿ ನೀವು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋವನ್ನು ಶೇರ್ ಮಾಡಬೇಕು. ನೀವು ಎಷ್ಟು ಜನರಿಗೆ ಹತ್ತಿರವಾಗುತ್ತೀರೊ ಅಷ್ಟು ಚಂದಾದಾರರನ್ನು

ಪಡೆಯಬಹುದಾಗಿದೆ.

ಇನ್ನು ಈ ಚಾನಲ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ರಚಿಸಿದ್ದರೆ, ನೀವು ಅಧ್ಯಯನ ಮಾಡಬೇಕು. ಅಲ್ಲದೆ ಇತರರಿಗಿಂತ ಭಿನ್ನವಾದ ಮಾಹಿತಿ ನೀಡಬೇಕು. ಆಗ ಜನರು ನೋಡಲು ಇಷ್ಟಪಟ್ಟು ಸಬ್​ಸ್ರೈಬ್

(Subscribe) ಮಾಡುತ್ತಾರೆ. ಅಡುಗೆ ಚಾನೆಲ್ ಅನ್ನು ಪ್ರಾರಂಭಿಸಿದ್ದರೆ, ಅಲ್ಲಿ ಕೇವಲ ಅಡುಗೆ ಮಾಡುವ ವಿಡಿಯೋ ಮಾತ್ರವಲ್ಲ ಅದರ ಜೊತೆಗೆ ವಿಭಿನ್ನ ಸಲಹೆಗಳನ್ನು ನೀಡಬೇಕು. ಹೀಗಾದಾಗ ನಿಮ್ಮ

ಯೂಟ್ಯೂಬ್​ ಚಾನೆಲ್ ಕ್ಲಿಕ್ ಆಗುತ್ತದೆ.

ಇದನ್ನು ಓದಿ : ಮಣಿಪುರದಲ್ಲಿ ಅಪರಿಚಿತರಿಂದ ಗುಂಡಿನ ದಾಳಿ: ಐಆರ್​ಬಿ ಯೋಧ ಸೇರಿ ಇಬ್ಬರು ಸಾವು

Exit mobile version