ಮೈಸೂರು, ಏ. 20: ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆಮುಖವಾಗಿದೆ. ಹೀಗಾಗಿ
ಆರ್ಥಿಕ ನಷ್ಟ-ಹೊರೆಯಾಗುವ ಕಾರಣದಿಂದ ಮೈಸೂರಿನ ಚಿತ್ರಮಂದಿರಗಳನ್ನು ಬಂದ್ ನಿರ್ಧರಿಸಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಸಂಖ್ಯೆಯಲ್ಲಿ ಏರಿಕೆಯಾಗಿರುವ ಪರಿಣಾಮ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, ಏ.23ರಿಂದ ಅನಿರ್ಧಿಷ್ಟವಧಿ ಬಂಧ್ ಮಾಡಲು ಚಿತ್ರಮಂದಿರ ಮಾಲೀಕರ ನಿರ್ಧಾರ ಕೈಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಚಿತ್ರಮಂದಿರ ಒಕ್ಕೂಟದ ಕಾರ್ಯದರ್ಶಿ ರಾಜಾರಾಮ್, ಒಂದೆಡೆ ಕೊರೊನ ಎರಡನೇ ಅಲೆ ಹಿನ್ನೆಲೆ ಚಿತ್ರಮಂದಿರಕ್ಕೆ ಜನರು ಅಗಮಿಸುತ್ತಿಲ್ಲ. ಇದರ ಪರಿಣಾಮ ನಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.
ಭಯದ ವಾತಾವರಣದಲ್ಲಿ ಜನರು ಥಿಯೇಟರ್ ಗೆ ಅಗಮಿಸುತ್ತಿಲ್ಲ. ಇದೆ ವೇಳೆ ಮೈಸೂರು ಮಹಾನಗರ ಪಾಲಿಕೆಯು ಅವೈಜ್ಞಾನಿಕ ತೆರಿಗೆ ಹೆಚ್ಚಳವಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೈಸೂರು ಜಿಲ್ಲೆಯ ಬಹುತೇಕ ಚಿತ್ರಮಂದಿರಗಳು 23ರಿಂದ ಚಿತ್ರಪ್ರದರ್ಶನ ಬಂದ್ ಮಾಡಲಾಗುತ್ತೆ. ಕೆ.ಆರ್ ನಗರ ನಂಜನಗೂಡು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಬಂದ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು