ವಾಖರ್ ಯೂನಿಸ್‌ ಹೇಳಿಕೆಗೆ ಕ್ರಿಕೆಟ್‌ ದಿಗ್ಗಜರಿಂದ ತೀವ್ರ ಆಕ್ರೋಶ

Waqar Younis

ನವದೆಹಲಿ ಅ 27 : ಧರ್ಮದ ಆಫೀಮನ್ನು ತಲೆಗತ್ತಿಸಿಕೊಂಡ ಪಾಕಿಸ್ತಾನ ಕ್ರೀಡೆಯಲ್ಲೂ ಧರ್ಮವನ್ನು ತುರುಕಿಸಿ ಜಗತ್ತಿನ ಮುಂದೆ ನಗೆಪಾಟಲಿಗೀಡಾಗುತ್ತಿದ್ದಾರೆ. ಪಾಕಿಸ್ಥಾನದ ಕ್ರಿಕೆಟ್ ಲೆಜೆಂಡ್ ಎಂದೇ ಕರೆಯಲ್ಪಡುವ ವಾಖರ್ ಯೂನಿಸ್ ನೀಡಿರುವ ಜಿಹಾದಿ ಮನಸ್ಥಿತಿಯ ಹೇಳಿಕೆ ಕ್ರೀಡಾ ಪ್ರಿಯರನ್ನು ಆಕ್ರೋಶಕ್ಕೀಡುಮಾಡಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರು ಮೊದಲ ಬಾರಿಗೆ ಜಯಗಳಿಸಿರುವ ಪಾಕಿಸ್ಥಾನ ಗೆಲುವಿನ ಉನ್ಮಾದದಲ್ಲಿ ತೇಲಾಡುತ್ತಿದೆ. ಇದೇ ಉನ್ಮಾದದಲ್ಲಿ “ಮೊಹಮ್ಮದ್ ರಿಜ್ವಾನ್ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ವಿಶೇಷವಾಗಿತ್ತು” ಎಂದು ವಾಖರ್ ಯೂನಿಸ್ ಹೇಳಿದ್ದಾನೆ.

ಈತನ ಹೇಳಿಕೆಗೆ ಜಾಗತಿಕ ಮಟ್ಟದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಟ್ವೀಟ್ ಮಾಡಿ, ಇದು ಜಿಹಾದಿ ಮನಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಕಮೆಂಟೇಟರ್ ಹರ್ಷ ಭೋಗ್ಲೆ ಅವರು, ವಾಖರ್ ಯೂನಿಸ್ ಅವರ ಹೇಳಿಕೆ ಬೇಸರ ತರಿಸಿದೆ ಎಂದಿದ್ದಾರೆ.

ಹೀಗೆ ಎಲ್ಲಾ ಕಡೆಗಳಿಂದ ಆಕ್ರೋಶ ವ್ಯಕ್ತವಾದ ಬಳಿಕ ವಾಖರ್ ಯೂನಿಸ್ ತಮ್ಮ ಹೇಳಿಕೆಯ ಬಗ್ಗೆ ಕ್ಷಮಾಪಣೆ ಕೇಳಿದ್ದಾರೆ.

ನಾನು ಹೇಳಿದ ಮಾತು ಯಾರ ಭಾವನೆಗಳಿಗಾದರು ಧಕ್ಕೆ ತಂದಿದ್ದಾರೆ ನಾನು ಕ್ಷಮೆಯಾಚಿಸುತ್ತೇನೆ. ಧರ್ಮ, ಬಣ್ಣ ಮತ್ತು ಜನಾಂಗದ ಭೇದವಿಲ್ಲದೆ ಕ್ರೀಡೆ ಎಲ್ಲರನ್ನು ಒಗ್ಗೂಡಿಸುತ್ತದೆ ಎಂದಿದ್ದಾರೆ.

Exit mobile version