ಅಲ್ಪ ಮೊತ್ತಕ್ಕೆ ಕುಸಿದ ಭಾರತ

ind vs SA

ಕೇಪ್ ಟೌನ್ ಜ.12- ದಕ್ಷಿಣ ಆಫ್ರಿಕಾ ವಿರುದ್ದ ನಡೆಯುತ್ತಿರುವ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದೆ.   ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. 223 ರನ್ ಗಳ ಅಲ್ಪ ಮೊತ್ತಕ್ಕೆ ಸರ್ವಪತನ ಕಂಡಿತು.
ಇಂದು ಇಲ್ಲಿ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ನಿರೀಕ್ಷೆಯಂತೆ ಬ್ಯಾಟಿಂಗ್‌ ಆಯ್ಕೆಮಾಡಿಕೊಂಡರು. ಆದರೆ ಹರಿಣಗಳ ಬೌಲಿಂಗ್ ದಾಳಿಗೆ ತತ್ತರಿಸಿದೆ.
ಮಯಾಂಕ್ ಅಗರ್ ವಾಲ್ ಮತ್ತು ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸಿದರು.‌ಆದರೆ ಉತ್ತಮ ಆರಂಭ ಒದಗಿಸಲು ವಿಫಲರಾದರು. 31 ರನ್ ಗಳಿಸುವಷ್ಟರಲ್ಲಿ 12 ರನ್ ಗಳಿಸಿ ರಾಹುಲ್ ಔಟಾದರು. ಇದರ ಬೆನ್ನಿಗೆ ಮಯಾಂಕ್ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ತಾಳ್ಮೆಯ ಆಟ ಪ್ರದರ್ಶಿಸಿದರಾದರೂ ಎದುರಾಳಿ ತಂಡದ ಬೌಲಿಂಗ್ ಗೆ ದಿಟ್ಟ ಉತ್ತರ ನೀಡಲು ಆಗಲಿಲ್ಲ.‌ಚೆನ್ನಾಗಿ ಆಡುತ್ತಿದ್ದ ಚೇತೇಶ್ವರ ಪೂಜಾರ 43 ರನ್ ಗಳಿಸಿ ನಿರ್ಗಮಿಸಿದರು.
ವಿರಾಟ್ ಕೊಹ್ಲಿ 72 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರ ರಿಷಬ್ ಪಂತ್ 27 ರನ್ ಗಳಿಸಿದ್ದನ್ನು ಬಿಟ್ಟರೆ ಅಜಿಂಕ್ಯಾ ರಹಾನೆ ಉತ್ತಮ ಆಟವಾಡುವಲ್ಲಿ ವಿಫಲರಾಗಿ ಕೇವಲ 9 ರನ್ ಗಳಿಸಿ ಔಟಾದರು.
ಹರಿಣಗಳ ಪರ ರಬಾಡ 4, ಜಾನ್ಸನ್ 3 ವಿಕೆಟ್ ಪಡೆದು‌ ಭಾರತವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು ಬ್ಯಾಟಿಂಗ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಒಂದು ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿದೆ. ಕೇವಲ 10 ರನ್ ಗಳಾಗುವಷ್ಟರಲ್ಲೇ ಎಲ್ಗಾರ್ ಕೇವಲ‌ ಮೂರು ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ದಿನದಾಟದ ಅಂತ್ಯಕ್ಕೆ ಮರ್ಕರಂ 8 ಹಾಗೂ ಕೇಶವ್ ಮಹಾರಾಜ್ 6 ರನ್ ಗಳಿಸಿ ಆಡುತ್ತಿದ್ದಾರೆ. ಉಭಯ ತಂಡಗಳು ಸಮಬಲ ಸಾಧಿಸಿರುವ ಹಿನ್ನಲೆಯಲ್ಲಿ ಈ ಪಂದ್ಯ ಅತ್ಯಂತ ಕೂತುಹಲಕಾರಿ ಪಂದ್ಯವಾಗಿದೆ.

Exit mobile version