ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ : ಗೆಲ್ಲುವ ವಿಶ್ವಾಸದಲ್ಲಿ ಉಭಯ ತಂಡಗಳು

ಲಂಡನ್‌, ಆ. 12: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಷ್ ಇಂದಿನಿಂದ ಲಂಡನ್ ನ ಲಾರ್ಡ್ಸ ಕ್ರೀಡಾಂಗಣದಲ್ಲಿ ನಡೆಯಲಿದೆ. 5 ಟೆಸ್ಟ್ಗಳ ಸರಣಿಯಲ್ಲಿ ಮೊದಲ ಟೆಸ್ಟ್ ಡ್ರಾ ನಲ್ಲಿ ಅಂತ್ಯಗೊಂಡಿತ್ತು. ಇಂದಿನಿಂದ ನಡೆಯುವ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಮುನ್ನಡೆ ಕಾಯ್ದುಕೊಳ್ಳುವ ವಿಶ್ವಾಸದಲ್ಲಿ ಎರಡು ತಂಡಗಳಿವೆ. ಆದರೆ ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ತಂಡದ ಅನುಭವಿ ಬೌಲರ್ ಸ್ಟುವರ್ಟ ಬ್ರಾಡ್ ಮತ್ತು ಭಾರತ ತಂಡದ ಯುವ ವೇಗಿ ಶಾರ್ದೂಲ್ ಠಾಕೂರ್ ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.

ಈ ಪಂದ್ಯದಲ್ಲಿ ಭಾರತ ತಂಡ ಯಾವುದೇ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಇಲ್ಲವಾಗಿದ್ದು, ಶಾರ್ದೂಲ್ ಠಾಕೂರ್ ಬದಲಿಗೆ ಇಶಾಂತ್ ಶರ್ಮಾ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೇ ಇಂದು ವಿಶ್ವವಿಖ್ಯಾತ ಲಾರ್ಡ್ಸನ್ಲಲಿ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಸ್ಟುವರ್ಟ್ ಬ್ರಾಡ್ ಅವರು ತಮ್ಮ ವೃತ್ತಿ ಜೀವನದ 150ನೇ ಪಂದ್ಯಕ್ಕೆ ಸಜ್ಜಾಗಿದ್ದರು ಆದರೆ ಕಾಲಿನ ಸಮಸ್ಯೆಯಿಂದಾಗಿ ಅವರು ಲಾರ್ಡ್ಸನ್ಲಲಿ ಅವರ ಸ್ಮರಣೀಯ 150ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಅವರ ಬದಲಾಗಿ ಮಾರ್ಕ ವುಡ್ ಗೆ ಅವಕಾಶ ಲಭಿಸುವ ಸಾಧ್ಯತೆಯಿದೆ.

ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗಲಿದೆ.

Exit mobile version