1974 ರಲ್ಲಿ ಈ ದಿನ ಚಿಪ್ಕೋ ಚಳುವಳಿ(Chipko Movement) ಸಂಭವಿಸಿದ ದಿನ. ಉತ್ತರಾಖಂಡದಲ್ಲಿ(Uttarkhand) ಮರ(Tree) ಕಡಿಯುವುದನ್ನು ಧೈರ್ಯದಿಂದ ವಿರೋಧಿಸಿ, ಮರಗಳನ್ನು ಅಪ್ಪಿಕೊಂಡು ಮರಗಳನ್ನು ಉಳಿಸುತ್ತಾರೆ ಪರಿಸರ ಪ್ರೇಮಿ ಮಹಿಳೆಯರು(Environmentalist womens).

ಇದು ಭಾರತದ ಐತಿಹಾಸಿಕ(Historical) ‘ಚಿಪ್ಕೋ ಚಳುವಳಿ’. ರೇಣಿ ಗ್ರಾಮದ ಗೌರಾದೇವಿ ಅವರು ತಮ್ಮ ಗ್ರಾಮದ 27 ಮಂದಿ ಮಹಿಳೆಯರೊಂದಿಗೆ ಸೇರಿ ಪರಿಸರ ಕ್ಷೇತ್ರದಲ್ಲಿ ಈ ಮಾದರಿ ಚಳವಳಿ ನಡೆಸಿದರು. ಆಂದೋಲನದ ಸುದ್ದಿ ಕಾಡ್ಗಿಚ್ಚಿನಂತೆ ಹತ್ತಿರದ ಹಳ್ಳಿಗಳಿಗೆ ಹರಡುತ್ತದೆ. ಚಳುವಳಿ ಎಲ್ಲೆಡೆ ಹರಡುತ್ತದೆ.
ಭಾರತದಲ್ಲಿ ಚಿಪ್ಕೋ ಚಳುವಳಿ ಮಾದರಿ ಚಳುವಳಿ 1730 ಸೆಪ್ಟೆಂಬರ್ ನಿಂದ ಪ್ರಾರಂಭವಾಗುತ್ತದೆ. ರಾಜಸ್ಥಾನದ ಜೋಧಪುರ್ ರಾಜನು ಸ್ಥಳೀಯ ಜನರ ಗೌರವಾನ್ವಿತ ಮರಗಳಲ್ಲಿ ಒಂದಾದ ಕೇಜ್ರಿಯ ಮರಗಳನ್ನು ಕಡಿಯಲು ತನ್ನ ಸೈನಿಕರನ್ನು ಕಳುಹಿಸಿದಾಗ, ಸೈನಿಕರು ಅದನ್ನು ಅನುಮತಿಸದ ಬಿಷ್ಣೋಯ್ ಸಮುದಾಯದ ಜನರ ಮೇಲೆ ದಾಳಿ ಮಾಡುತ್ತಾರೆ. ಮರಗಳ ಉಳಿವಿಗೆ ಪ್ರತಿರೋಧ ತೋರಿದ 363 ಜನರನ್ನು ಹೋರಾಟದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಯಿತು.