Nethaji Statue : ಇಂಡಿಯಾ ಗೇಟ್ನ ನೇತಾಜಿ ಪ್ರತಿಮೆ ಕೆತ್ತಲು ಶಿಲ್ಪಿಗಳು 26,000 ಗಂಟೆಗಳನ್ನು ವ್ಯಯಿಸಿದ್ದಾರೆ : ಕೇಂದ್ರ ಸರ್ಕಾರ

New Delhi : ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು ಇಂಡಿಯಾ ಗೇಟ್ನಲ್ಲಿ(India Gate) ನೇತಾಜಿ ಸುಭಾಷ್ ಚಂದ್ರ ಬೋಸ್(Subaschandra Bose) ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಈ ಪ್ರತಿಮೆಯ ಕುರಿತ ಕೆಲ ಮಹತ್ವದ ಅಂಶಗಳನ್ನು ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯು 28 ಅಡಿ ಎತ್ತರವಿದ್ದು, ಇದನ್ನು 280 ಮೆಟ್ರಿಕ್ ಟನ್ ತೂಕದ ಏಕಶಿಲೆಯ ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾಗಿದೆ. ಈ ಗ್ರಾನೈಟ್‌ ಶಿಲೆಯನ್ನು ತೆಲಂಗಾಣದ ಖಮ್ಮಮ್ನಿಂದ ನವದೆಹಲಿಗೆ(New Delhi) ತರಲು 140 ಚಕ್ರಗಳ 100 ಅಡಿ ಉದ್ದದ ಟ್ರಕ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಬಳಸಲಾಗಿದೆ.

ಇದನ್ನೂ ಓದಿ : https://vijayatimes.com/congress-slams-state-bjp-ministers/

ಇನ್ನು ಈ ಪ್ರತಿಮೆಯನ್ನು ಅರುಣ್ ಯೋಗಿರಾಜ್ ನೇತೃತ್ವದ ಶಿಲ್ಪಿಗಳ ತಂಡವು ಸಂಪೂರ್ಣವಾಗಿ ಸಾಂಪ್ರದಾಯಿಕ ತಂತ್ರಗಳು ಮತ್ತು ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಕೈಯಿಂದ ಕೆತ್ತಲಾಗಿದೆ. ಇದನ್ನು ಕೆತ್ತಲು ಶಿಲ್ಪಿಗಳ ತಂಡವು 26000 ಗಂಟೆಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಈ ಕುರಿತು ಮಾತನಾಡಿದ ಮುಖ್ಯಶಿಲ್ಪಿ ಅರುಣ್ ಯೋಗಿರಾಜ್ “ಈ ಯೋಜನೆಯು ಸವಾಲಿನದ್ದಾಗಿತ್ತು. ಆದರೆ ಇದು ಒಂದು ಸುಂದರ ಪ್ರಯಾಣವಾಗಿತ್ತು. ಗ್ರಾನೈಟ್ನಲ್ಲಿ ಶಿಲ್ಪ ನಿರ್ಮಿಸುವುದು ಸವಾಲಿನ ಕೆಲಸ. ಗ್ರಾನೈಟ್ನಲ್ಲಿ ಮುಖದ ವೈಶಿಷ್ಟ್ಯಗಳನ್ನು ಕೆತ್ತಲು ಮತ್ತು ಸನ್ನೆಗಳನ್ನು ಪಡೆಯಲು ಹೆಚ್ಚುವರಿ ಪ್ರಯತ್ನದ ಅಗತ್ಯವಿದೆ.

https://fb.watch/fpth5SG5tY/

ಹೀಗಾಗಿಯೇ ನಾವು ಸುಭಾಷ್ ಚಂದ್ರ ಬೋಸ್ ಅವರ 600 ಚಿತ್ರಗಳನ್ನು ಅಧ್ಯಯನ ಮಾಡಿದ್ದೇವೆ. ಇನ್ನು ನಾನು ಚಿಕ್ಕವನಿದ್ದಾಗ ಇಂಡಿಯಾ ಗೇಟ್ಗೆ ಭೇಟಿ ನೀಡಲು ಬಯಸಿದ್ದೆ, ಆದರೆ ಈಗ ಅಲ್ಲಿ ಸ್ಥಾಪಿಸಲಾಗುವ ನೇತಾಜಿ ಅವರ ಪ್ರತಿಮೆಯನ್ನು ನಿರ್ಮಿಸುವ ಅವಕಾಶ ನನಗೆ ಸಿಕ್ಕಿದೆ. ನನ್ನಂತಹ ಕಲಾವಿದನ ಕನಸು ನನಸಾಗಿದೆ.” ಎಂದು ತಿಳಿಸಿದ್ದಾರೆ.v

Exit mobile version