ಶೀಘ್ರದಲ್ಲೇ ಭಾರತ ಮತ್ತು ಇಸ್ರೇಲ್ ಮುಕ್ತ ವ್ಯಾಪರಕ್ಕೆ ಮಾತುಕತೆ

ನವದೆಹಲಿ 19 : ಭಾರತ ಮತ್ತು ಇಸ್ರೇಲ್ ಮುಂದಿನ ತಿಂಗಳು ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಪುನರಾರಂಭಿಸಲು ಒಪ್ಪಿಕೊಂಡಿವೆ.

ಇಸ್ರೇಲಿ ವಿದೇಶಾಂಗ ಸಚಿವ ಯಾರ್ ಲ್ಯಾಪಿಡ್ ಜೊತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಸಂಕ್ಷಿಪ್ತ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್ ಜೈಶಂಕರ್, ನವೆಂಬರ್­ನಲ್ಲಿ ಮಾತುಕತೆ ಆರಂಭವಾಗಲಿದ್ದು, ಮುಂದಿನ ವರ್ಷ ಜೂನ್ ವೇಳೆಗೆ ಮಾತುಕತೆ ಮುಗಿಯುವ ವಿಶ್ವಾಸ ವ್ಯಕ್ತಪಡಿಸಿದರು.

ಇಬ್ಬರೂ ಮಂತ್ರಿಗಳು ವ್ಯಾಪಕವಾದ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಕೋವಿಡ್ ಲಸಿಕೆ ಪ್ರಮಾಣೀಕರಣದ ಪರಸ್ಪರ ಗುರುತಿಸುವಿಕೆಗೆ ತಾತ್ವಿಕವಾಗಿ ಒಪ್ಪಿಕೊಂಡರು.

ಡಾ. ಜೈಶಂಕರ್ ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಹೊಸ ಸದಸ್ಯ ಎಂದು ಸ್ವಾಗತಿಸಿದರು. ಜೈಶಂಕರ್ ಅವರು ಯಾದ್ ವಶೇಂನಲ್ಲಿ ಹತ್ಯಾಕಾಂಡದ ಸಂತ್ರಸ್ತರಿಗೆ ಗೌರವ ಸಲ್ಲಿಸಿದರು. ಈ ಸ್ಮಾರಕವು ಮಾನವನ ದೃಢತೆಗೆ ಸಾಕ್ಷಿಯಾಗಿದೆ ಮತ್ತು ದುಷ್ಟರ ವಿರುದ್ಧ ಹೋರಾಡುವ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಅವರು ಇಸ್ರೇಲ್ ಮ್ಯೂಸಿಯಂನಲ್ಲಿರುವ ಕಡವುಂಬಗಂ ಸಿನಗಾಗ್‌ಗೆ ಭೇಟಿ ನೀಡಿದರು ಮತ್ತು ಅಲ್ಲಿ ಕೊಚ್ಚಿನಿ-ಯಹೂದಿ ಸಮುದಾಯದ ಕಿರಿಯ ಸದಸ್ಯರನ್ನು ಭೇಟಿಯಾದರು

Exit mobile version