ಭಾರತ ಪಾಕ್ ಪಂದ್ಯಕ್ಕೆ ವಿಶ್ವ ಹಿಂದೂ ಪರಿಷತ್ ವಿರೋಧ

ನವದೆಹಲಿ ಅ 21ಐಸಿಸಿ ಟಿ 20 ಕ್ರಿಕೆಟ್ ವಿಶ್ವಕಪ್ ಆರಂಭವಾಗಿದ್ದು, ಭಾರತ ತನ್ನ ಅತಿದೊಡ್ಡ ಎದುರಾಳಿ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 24 ರಂದು ಸೆಣೆಸಲಿದೆ. ಆದರೆ ಈ ಪಂದ್ಯಕ್ಕೆ ಇದೀಗ ವಿರೋಧ ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೂ ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ (India Pak Cricket) ಆಡಬಾರದು ಎನ್ನುವ ಮಾತುಗಳು ಕೇಳಿ ಬರುತ್ತಿದೆ. 

ಭಾರತ – ಪಾಕಿಸ್ತಾನ ಪಂದ್ಯಕ್ಕೆ ಸಂಬಂಧಪಟ್ಟಂತೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಈಗ ವಿಶ್ವ ಹಿಂದೂ ಪರಿಷತ್ (VHP) ಕೂಡ ಈ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಯಬಾರದು ಎಂದು ವಿಎಚ್‌ಪಿ ಹೇಳಿದೆ. ಉಭಯ ದೇಶಗಳ ನಡುವಿನ ಸೋಲು ಮತ್ತು ಗೆಲುವನ್ನು ಕ್ರಿಕೆಟ್ ಮೈದಾನದಲ್ಲಿ ನಿರ್ಧರಿಸದೆ ಗಡಿಯಲ್ಲಿರುವ ಸೇನೆಯ ಮೂಲಕ ನಿರ್ಧರಿಸಬೇಕು ಎಂದು  ಹೇಳಿದೆ . 

ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಘೋಷಿಸಬೇಕು ಎಂದು, ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ (Surendra Jain)  ಮನವಿ ಮಾಡಿದ್ದಾರೆ. ಪಾಕಿಸ್ತಾನ ನಮ್ಮೊಂದಿಗೆ ದ್ವೇಷವನ್ನು ಮುಂದುವರಿಸಲಿ, ನಾವು ಸ್ನೇಹವನ್ನು ಭಯಸುತ್ತೇವೆ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ  ಹಿಂದೂಗಳ ಟಾರ್ಗೆಟ್ ಕಿಲ್ಲಿಂಗ್ ನಡೆಯುತ್ತಿದೆ. ಹಾಗಾಗಿ  ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಹೇಗೆ ಆಡಲಾಗುತ್ತದೆ ಎಂದು ಜೈನ್ ಪ್ರಶ್ನಿಸಿದ್ದಾರೆ. 

Exit mobile version