ಭಾರತದ ವಿರುದ್ದ ದಕ್ಷಿಣ ಆಫ್ರಿಕಾಗೆ ಭರ್ಜರಿ ಗೆಲುವು

ಜೊಹಾನ್ಸ್‌ಬರ್ಗ್‌ ಜ 7 : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ನೇ ಟೆಸ್ಟ್‌ ಪಂದ್ಯದಲ್ಲಿ ಅತಿಥೇಯ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿದೆ. ಆರಂಭಿಕನಾಗಿ ಕಣಕ್ಕಿಳಿದು ಅಂತಿಮ ಹಂತದವರೆಗೂ ಕ್ರೀಸ್‌ಬಲ್ಲಿ ಭದ್ರವಾಗಿ ನೆಲೆಯೂರಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಈ ಪಂದ್ಯದಲ್ಲಿ ಭಾರತದ ಗೆಲುವಿನ ಕನಸಿಗೆ ಅಡ್ಡಿಯಾದರು. ಜೊತೆಗಾರರಿಂದ ದೊರೆತ ಅದ್ಭುತ ಬೆಂಬಲವನ್ನು ಬಳಸಿಕೊಂಡ ಡೀನ್ ಎಲ್ಗರ್ 240 ರನ್‌ಗಳ ಗುರಿ ಬೆನ್ನಟ್ಟಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ ತಂಡದ ಭದ್ರ ಕೋಟೆ ಎನಿಸಿದ್ದ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತಕ್ಕೆ ಮೊದಲ ಸೋಲಿನ ರುಚಿ ತೋರಿಸಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದ ದ. ಆಫ್ರಿಕಾ: 2ನೇ ಇನ್ನಿಂಗ್ಸ್‌ನಲ್ಲಿ ಭಾರತ ನೀಡಿದ 240 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಸಾಧಾರಣ ಆರಂಭ ದೊರೆಯಿತು. ಮೊದಲ ವಿಕೆಟ್‌ಗೆ 47 ರನ್‌ಗಳಿಸಿದ್ದಾಗ ದಕ್ಷಿಣ ಆಫ್ರಿಕಾ ತಂಡ 31 ರನ್‌ಗಳಿಸಿದ್ದ ಮಾರ್ಕ್ರಮ್ ವಿಕೆಟ್ ಕಳೆದುಕೊಂಡಿತ್ತು. ನಂತರ 93 ರನ್‌ಗಳಿಗೆ ದಕ್ಷಿಣ ಆಪ್ರಿಕಾ ತಂಡ 2ನೇ ವಿಕೆಟ್ ಕಳೆದುಕೊಂಡಿತು. ನಂತರ ಮೂರನೇ ವಿಕೆಟ್‌ಗೆ ಎಲ್ಗರ್ – ವಾನ್‌ ಡರ್‌ ಡುಸ್ಸೆನ್ ಜೋಡಿ  82 ರನ್‌ಗಳ ಜೊತೆಯಾಟವನ್ನು ನೀಡಿದರು

175 ರನ್‌ಗಳಿದ್ದಾಗ ವಾನ್‌ ಡರ್‌ ಡುಸ್ಸೆನ್ ಶಮಿ ಎಸೆತದಲ್ಲಿ ಕ್ಯಾಚ್ ನಿಡಿ ನಿರ್ಗಮಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಆದರೆ ಬಳಿಕ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಪಡೆಯುವಲ್ಲಿ ಭಾರತದ ಬೌಲರ್‌ಗಳು ಸಂಪೂರ್ಣವಾಗಿ ವಿಫಲವಾದರು. ನಾಯಕ ಡೀನ್ ಎಲ್ಗರ್ ಹಾಗೂ ಟೆಂಬಾ ಬವುಮಾ ದಕ್ಷಿಣ ಆಪ್ರಿಕಾ ತಂಡವನ್ನು ಗೆಲುವಿನ ದಡ ತಲುಪಿಸಿದರು. ಡೀನ್ ಎಲ್ಗರ್ ಅಜೇಯ 96 ರನ್‌ಗಳಿಸಿದರೆ ಟೆಂಬಾ ಬವುಮಾ 23 ರನ್‌ಗಳ ಕೊಡುಗೆ ನೀಡಿದರು.
ಇನ್ನು ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮವಾಗಿ ಕೇವಲ 202 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿತ್ತು. ನಾಯಕ ಕೆಎಲ್ ರಾಹುಲ್ (50 ರನ್) ಹಾಗೂ ಆರ್ ಅಶ್ವಿನ್ (46) ಮಾತ್ರವೇ ತಮಡದ ಪರವಾಗಿ ಉತ್ತಮ ಮೊತ್ತವನ್ನು ಗಳಿಸುವಲ್ಲಿ ಸಫಲವಾಗಿದ್ದರು. ಇದಕ್ಕೆ ಪ್ರತಿಯಾಗಿ ದಕ್ಷಿಣ ಆಪ್ರಿಕಾ ತಂಡ 229 ರನ್‌ಗಳನ್ನು ಗಳಿಸಿ ಇನ್ನಿಂಗ್ಸ್ ಅಂತ್ಯಗೊಳಿಸಿತ್ತು. ಭಾರತದ ಪರವಾಗಿ 7ವಿಕೆಟ್‌ಗಳನ್ನು ಪಡೆದು ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಮಿಂಚದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಭಾರತ ತಂಡ 266 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ಹೀಗಾಗಿ 240 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು. ಇದನ್ನು ದಕ್ಷಿಣ ಆಫ್ರಿಕಾ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ವಿಜಯದ ನಗೆ ಬೀರಿದರು


Exit mobile version