ಟಿ 20 ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ

ಜೈಪುರ  ನ 18 : ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಐದು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ನ್ಯೂಜಿಲೆಂಡ್ (New Zealand) ತಂಡವನ್ನು 166 ರನ್ ಗಳಿಗೆ ಕಟ್ಟಿ ಹಾಕಿತು. ನ್ಯೂಜಿಲೆಂಡ್ ತಂಡದ ಪರವಾಗಿ ಗುಪ್ತಿಲ್ ಕೇವಲ 42 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 70 ರನ್ ಗಳನ್ನು ಗಳಿದರೆ, ಇನ್ನೊಂದೆಡೆಗೆ ಚಾಪ್ಮ್ಹಾನ್ 50 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ತಂಡದ ಗಡಿ 150 ದಾಟಿಸುವಲ್ಲಿ ಸಫಲರಾದರು .ಭಾರತದ ಪರವಾಗಿ ಭುವನೇಶ್ವರ ಹಾಗೂ ಆಶ್ವಿನ್ ತಲಾ ಎರಡು ವಿಕೆಟ್ ಗಳನ್ನು ಪಡೆದುಕೊಂಡರು.

167 ರನ್‌ಗಳ ಮೊತ್ತ ಬೆನ್ನತ್ತಿದ ಭಾರತ ಆರಂಭದಲ್ಲಿ ಕೆ.ಎಲ್ ರಾಹುಲ್ ರವರ ವಿಕೆಟ್ ಗಳನ್ನು ಕಳೆದುಕೊಂಡರು ನಾಯಕ  ರೋಹಿತ್ ಶರ್ಮಾ ಅವರ 48 ಹಾಗೂ ಸೂರ್ಯಕುಮಾರ್ ಯಾದವ್ 62 ರನ್ ನೆರವಿನಿಂದ ಭಾರತ ತಂಡ ಇನ್ನೂ 2 ಎಸೆತ ಬಾಕಿ ಇರುವಾಗಲೇ ಗೆಲುವಿನ ನಗೆಬೀರಿತು .

ಈ ಪಂದ್ಯದದ ಮುಖಾಂತರ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರು ಕ್ರಮವಾಗಿ ನಾಯಕ ಮತ್ತು ಕೋಚ್ ಆಗಿ ಆಯ್ಕೆಯಾಗಿದ್ದಾರೆ

Exit mobile version