202 ರನ್‌ ಗಳಿಗೆ ಸರ್ವಪತನ ಕಂಡ ಭಾರತ

ಜೊಹಾನ್ಸ್‌ಬರ್ಗ್ ಜ 4 : ಜೊಹಾನ್ಸ್‌ಬರ್ಗ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾದ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕಳಪೆ ಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿ ಕೇಲವ 202 ರನ್‌ಗಳಿಗೆ ಸರ್ವಪತನ ಕಂಡುಕೊಂಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 202 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 35 ರನ್ ಬಾರಿಸಿದೆ.

ಮಯಾಂಕ್ ಅಗರ್ ವಾಲ್ ಮತ್ತು ರಾಹುಲ್‌ ಇನ್ನಿಂಗ್ಸ್ ಆರಂಭಿಸಿದರು. ಮೊದಲ ವಿಕೆಟ್ ಗೆ 36 ರನ್ ಕಲೆಹಾಕಿದರು.‌ 26 ರನ್ ಗಳಿಸಿದ್ದಾಗ ಅಗರ್ ವಾಲ್ ನಿರ್ಗಮಿಸಿದರು. ಮೊದಲ ವಿಕೆಟ್ ಪತನವಾಗುತ್ತಿದಂತೆ ಇತರ ಆಟಗಾರರ ಕಳಪೆ ಬ್ಯಾಟಿಂಗ್ ಗೆ ಸಾಕ್ಷಿಯಾಯಿತು.ಚೇತೇಶ್ವರ ಪೂಜಾರ 3 ಅಜಿಂಕ್ಯಾ ರಹಾನೆ ಶೂನ್ಯಕ್ಕೆ ನಿರ್ಗಮಿಸಿ ಮತ್ತೆ ನಿರಾಸೆ ಮೂಡಿಸಿದರು.

ಗಾಯದ ಸಮಸ್ಯೆಯಿಂದ ಬಳಲುತ್ತಿರವ ಟೀ ಇಂಡಿಯಾಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು  ದಕ್ಷಿಣ ಆಫ್ರಿಕಾ ಇನಿಂಗ್ಸ್‌ನಲ್ಲಿ ತಮ್ಮ ನಾಲ್ಕನೇ ಓವರ್‌ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಅವರ ಕಾಲಿನಲ್ಲಿ ನೋವು ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ನಾಲ್ಕನೇ ಓವರ್‌ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ವೇಳೆ ತಂಡದ ಫಿಸಿಯೋ ಮೈದಾನಕ್ಕೆ ಆಗಮಿಸಿ ಯುವ ವೇಗಿಯನ್ನು ಡ್ರೆಸ್ಸಿಂಗ್ ಕೊಠಡಿಗೆ ಕರೆದೊಯ್ದರು

Exit mobile version