ಎಂಎಸ್ ಧೋನಿಯ ದಾಖಲೆ ಸರಿಗಟ್ಟಿದ ಪಂತ್

ಸೆಂಚುರಿಯನ್ ಡಿ 29  :  ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ  ಭಾರತ ತಂಡದ ಯುವ ವಿಕೆಟ್ ಕೀಪರ್‌ ರಿಷಭ್ ಪಂತ್  ಮಾಜಿ ಕ್ಯಾಪ್ಟನ್ ಎಂಎಸ್ ಧೋನಿಯ ದಾಖಲೆಯನ್ನು ಪುಡಿಪುಡಿ ಮಾಡಿದ್ದಾರೆ.

ಭಾರತದ ಪರ ಸ್ಟಂಪ್‌  ಹಿಂದೆ ಅತಿವೇಗದಲ್ಲಿ ಕೇವಲ 26 ಟೆಸ್ಟ್‌ಗಳಲ್ಲಿ 100ಮಂದಿ ಬ್ಯಾಟ್ಸ್‌ಮನ್‌ಗಳನ್ನು ಬಲಿಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ   

ದಕ್ಷಿಣ ಆಫ್ರಕಾದಲ್ಲಿ ನಡೆಯುತ್ತಿರುವ ಸೆಂಚುರಿ ಟೆಸ್ಟ್‌ಗೆ ಬರುವ ಮುನ್ನವೇ 97 ವಿಕೆಟ್‌ಗಳನ್ನು ರಿಷಭ್ ಪಡೆದುಕೊಂಡಿದ್ದರು. ಶತಕ ವಿಕೆಟ್‌ಗಳನ್ನು ಪಡೆಯಲು ಕೇವಲ ಮೂರು ವಿಕೆಟ್‌ಗಳ ಅವಶ್ಯಕತೆ ಇತ್ತು.  ಅಂದಹಾಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪ್ರಥಮ ಇನ್ನಿಂಗ್ಸ್ ನಲ್ಲಿ ತೆಂಬಾ  ಬಾವೂಮ, ಅವರ ಕ್ಯಾಚ್ ಪಡೆಯುತ್ತಿದ್ದಂತೆ  ಮಾಜಿ ನಾಯಕ  ಎಂಎಸ್ ಧೋನಿ ದಾಖಲೆಯನ್ನು ಮುರಿದರು.

 ವಿಕೆಟ್ ಕೀಪರ್ ಆಗಿ 100 ವಿಕೆಟ್ ಪತನಗೊಳಿಸಲು ರಿಷಬ್ ಪಂತ್ ಕೇವಲ 26 ಪಂದ್ಯಗಳನ್ನು ಮಾತ್ರ ತೆಗೆದುಕೊಂಡಿದ್ದಾರೆ . ಮಾಜಿ ನಾಯಕ ಎಂಎಸ್ ಧೋನಿ ಈ  ಸಾಧನೆಯನ್ನು ಮಾಡಲು  36 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದರು. ಆದರೆ ಪಂತ್‌  ಧೋನಿ ಗಿಂತ  10 ಪಂದ್ಯಗಳನ್ನು ಕಡಿಮೆ ತೆಗೆದುಕೊಂಡು ಈ ಸಾಧನೆಯನ್ನು ಮಾಡಿದ್ದಾರೆ.

ತೆಂಬಾ ಬಾವೂಮ  ಅವರ ಕ್ಯಾಚ್‌  ಪಡೆಯುವ ಮೊದಲು ರಿಷಬ್ ಪಂತ್ ದಕ್ಷಿಣ ಆಫ್ರಿಕಾ ದ ಕ್ಯಾಪ್ಟನ್ ಡೀನ್ ಎಲ್ಗರ್  ಅವರ ವಿಕೆಟನ್ನು ಪಡೆದುಕೊಂಡರು. ಆನಂತರ ಮೊಹಮ್ಮದ್  ಶಮಿ ಅವರ ಓವರ್‌ನಲ್ಲಿ ವಿಯಾನ್ ಮುಲ್ದರ್‌ ಅವರನ್ನು  ಕೂಡ ಪಂತ್ ಪೆವಿಲಿಯನ್‌ಗೆ ಕಳುಹಿಸಲು ಸಫಲರಾದಾರು

 ಭಾರತ ತಂಡದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ 5 ವಿಕೆಟ್ ಪಡೆದರು  ಇನ್ನು ಜಸ್ಪ್ರೀತ್ ಬುಮ್ರಾ ಹಾಗೂ  ಶಾರ್ದುಲ್ ಠಾಕೂರ್ ತಲಾ ಎರಡೆರೆಡು ವಿಕೆಟ್ ಗಳನ್ನುಕಬಳಿಸಿದರು. ಒಟ್ಟಾರೆ ಮೂರನೇ ದಿನದ ಅಂತ್ಯದ ವೇಳೆಗೆ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ  ಆರು ಓವರ್ ಗಳಿಗೆ  ಒಂದು ವಿಕೆಟ್  ಪತನಕ್ಕೆ ಕೇವಲ 16 ರನ್‌ಗಳಿಸಿಕೊಂಡಿದೆ ಒಟ್ಟಾರೆಯಾಗಿ  146 ರನ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

Exit mobile version