ದೇಶದ ಮೊದಲ ಅಂತಾರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್‌ ಅನುಪಮ ಕೊರೊನಾಗೆ ಬಲಿ

ಕೊಡಗು, ಏ. 18: ದೇಶದ ಮೊದಲ ಹಾಗೂ ಕೊಡಗಿನ ಏಕೈಕ ಅಂತರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಆಗಿದ್ದ, ಹಾಕಿಪಟು ಮುಂಡಂಡ ಅನುಪಮ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕಳೆದೊಂದು ವಾರದಿಂದ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅನುಪಮ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ, ಇಂದು ಬೆಳಗ್ಗೆ ಸಾವನ್ನಪ್ಪಿದರು.

ಜೂನಿಯರ್ ವಿಶ್ವಕಪ್ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟವನ್ನು ನಿರ್ವಹಿಸಿದ ಮೊದಲ ಭಾರತೀಯ ಮಹಿಳಾ ಹಾಕಿ ಅಂಪೈರ್ ಆಗಿದ್ದ ಅನುಪಮ ಕರ್ನಾಟಕದ ಮೊದಲ ಅಂತರಾಷ್ಟ್ರೀಯ ಮಹಿಳಾ ಅಂಪೈರ್ ಎಂಬ ಹೆಗ್ಗಳಿಕೆ ಪಡೆದಿದ್ದರು.

ಅಂತರಾಷ್ಟ್ರೀಯ ಮಟ್ಟದ 50 ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿರುವ ಪ್ರಥಮ ಮಹಿಳಾ ಅಂಪೈರ್ ಎಂಬ ಹೆಗ್ಗಳಿಕೆ ಸಹ ಅನುಪಮ ಅವರಿಗಿತ್ತು. ಅಲ್ಲದೇ ಇಂಟರ್ ನ್ಯಾಷನಲ್ ಫೆಡರೇಶನ್ ಹಾಕಿಯಲ್ಲಿ ಅವರು 2005ರಲ್ಲಿ ವಿಶ್ವದ 10 ಪುರಷರ ಜೊತೆಗೆ ಅವರೂ ಆಯ್ಕೆಯಾದರು. ಆ ಮೂಲಕ ಕಿರಿಯ ಮಹಿಳಾ ಅಂಪೈರ್ ಎನಿಸಿಕೊಂಡರು.

2007ರಲ್ಲಿ ನವದೆಹೆಲಿಯಲ್ಲಿ ಸರ್ದಾರ್ ಜ್ಞಾನ್ ಸಿಂಗ್ ಸ್ಮಾರಕ ಹಾಕಿ ಸೊಸೈಟಿಯಿಂದ ಭಾರತದ ಅತ್ಯುತ್ತಮ ಅಂಪೈರ್(ಮಹಿಳೆ) ಪ್ರಶಸ್ತಿಗೆ ಭಾಜನರಾದರು. 2004ರಲ್ಲಿ ಎಸ್ ಎಸ್ ಬಿ ಶಾಟ್೯ ಸರ್ವೀಸ್ ಕಮಿಷನ್ ಪರೀಕ್ಷೆಯಲ್ಲಿ(ತಾಂತ್ರಕೇತರ) ಎ.ಆರ್.ಎಂ.ವೈ ಉತ್ತೀರ್ಣರಾಗಿದ್ದರು.

Exit mobile version