ಭಾರತದ ಮೋಸ್ಟ್ ವಾಂಟೆಡ್ ಉಗ್ರನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ

Pakisthan: 2018 ರಿಂದ 2020 ರವರೆಗೆ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ (Indias most wanted terrorist) ಲಷ್ಕರ್-ಎ-ತೊಯ್ಬಾದ ಮಾಜಿ ಕಮಾಂಡರ್

ಅಕ್ರಮ್ ಖಾನ್ (Akram Khan) ಅಲಿಯಾಸ್ ಅಕ್ರಮ್ ಘಾಜಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹಲವು ವರ್ಷಗಳಿಂದ ಈತ ಉಗ್ರ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಇದೀಗ ಅಪರಿಚಿತರು ಗುಂಪೊಂದು ಅಕ್ರಮ್ ಘಾಜಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಲಷ್ಕರ್-ಎ-ತೊಯ್ಬಾದಲ್ಲಿ (Lashkar e taiba) ಅಕ್ರಮ್ ಘಾಜಿ ಉನ್ನತ ಕಮಾಂಡರ್‌ಗಳಲ್ಲಿ ಒಬ್ಬನಾಗಿದ್ದ. ದಲ್ಲಿ ತಿಂಗಳಿಗೊಂದು

ಭಯೋತ್ಪಾದಕರ ಹತ್ಯೆಯಾಗುತ್ತಿದೆ. ಇದೀಗ ಭಾರತಕ್ಕೆ ಶತ್ರುವಾಗಿದ್ದ ಮತ್ತೊಬ್ಬ ಉಗ್ರನ ಹತ್ಯೆಯಾಗಿದೆ. ಈ ವರ್ಷದಲ್ಲಿ ಭಾರತದ ವಿರುದ್ಧ ವಿಷಕಾರುತ್ತಿದ್ದ ಅನೇಕ ಭಯೋತ್ಪಾದಕರನ್ನು ಪಾಕಿಸ್ತಾನದಲ್ಲಿ

ಹತ್ಯೆ (Indias most wanted terrorist) ಮಾಡಲಾಗಿದೆ.

ಈ ಪೈಕಿ ಈಗ ಲಷ್ಕರ್-ಎ-ತೊಯ್ಬಾದ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅಲಿಯಾಸ್ ಅಕ್ರಮ್ ಘಾಜಿಯನ್ನು ಗುಂಡಿಕ್ಕಿ ಹತ್ಯೆ (Gun Shoot) ಮಾಡಲಾಗಿದೆ. 2018 ರಿಂದ 2020 ರವರೆಗೆ ಲಷ್ಕರ್-ಎ-ತೊಯ್ಬಾದ

ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ, ಇದೀಗ ಅಪರಿಚಿತರು ಗುಂಪೊಂದು ಅಕ್ರಮ್ ಘಾಜಿಯನ್ನು ಗುಂಡುಕ್ಕಿ ಕೊಂದಿದ್ದಾರೆ. ಲಷ್ಕರ್-ಎ-ತೊಯ್ಬಾದಲ್ಲಿ ಅಕ್ರಮ್ ಘಾಜಿ ಉನ್ನತ ಕಮಾಂಡರ್‌ಗಳಲ್ಲಿ ಒಬ್ಬನಾಗಿದ್ದ.

ಹಲವು ವರ್ಷಗಳಿಂದ ಉಗ್ರ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಅನೇಕ ಉಗ್ರರನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಹಿಂದೆ ಮುಫ್ತಿ ಕೈಸರ್ ಫಾರೂಕ್, ಖಲಿಸ್ತಾನ್ ಭಯೋತ್ಪಾದಕ ಪರಮ್‌ಜಿತ್ ಸಿಂಗ್ ಪಂಜ್ವಾಡ್, ಎಜಾಜ್ ಅಹ್ಮದ್ ಅಹಂಗರ್,

ಬಶೀರ್ ಅಹ್ಮದ್ ಪೀರ್ ಇನ್ನು ಅನೇಕ ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದೀಗ ಇಂತಹ ಘಟನೆ ಪಾಕಿಸ್ತಾನ ಉಗ್ರರ ನಿದ್ದೆ ಕೆಡಿಸಿದೆ. ಕಳೆದ ತಿಂಗಳು, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ

ಶಾಹಿದ್ ಲತೀಫ್ ಪಾಕಿಸ್ತಾನದಲ್ಲಿ ಕೊಲೆ ಮಾಡಲಾಗಿತ್ತು.

ಸಿಯಾಲ್‌ಕೋಟ್‌ನಲ್ಲಿ ಲತೀಫ್‌ನನ್ನು ಅಪರಿಚಿತ ಗುಂಪೊಂದು ಹತ್ಯೆ ಮಾಡಿದೆ. ಲತೀಫ್‌ 2016ರಲ್ಲಿ ಪಠಾಣ್ ಕೋಟ್ (Pathankot) ಏರ್ ಫೋರ್ಸ್ ಸ್ಟೇಷನ್ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್

ಆಗಿದ್ದ ಎಂದು ಹೇಳಲಾಗಿದೆ. 2023ರಲ್ಲಿ ಮೇ 6ರಂದು ಖಲಿಸ್ತಾನ್ ಕಮಾಂಡೋ ಫೋರ್ಸ್ ಮುಖ್ಯಸ್ಥ ಪರಮ್‌ಜಿತ್ ಸಿಂಗ್ ಪಂಜ್ವಾಡ್​​ನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಹತ್ಯೆ ಮಾಡಲಾಗಿತ್ತು.

ಇಲ್ಲಿಂದ ಶುರುವಾದ ಹತ್ಯೆ ಇದೀಗ ಅಕ್ರಮ್ ಘಾಜಿ ವರೆಗೆ ತಲುಪಿದ್ದು, ಪರಮ್‌ಜಿತ್ ಸಿಂಗ್ (Paramjit Singh) ಪಂಜ್ವಾಡ್ ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ, ಪರಮ್‌ಜಿತ್

ಪಾಕಿಸ್ತಾನದ ಯುವಕರಿಗೆ ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ನೀಡುತ್ತಿದ್ದರು. ಇನ್ನು ಈ ಉಗ್ರರು ಭಾರತದಲ್ಲಿ ವಿಐಪಿಗಳ ಮೇಲೆ ದಾಳಿ ಮಾಡಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸಲು

ಅನೇಕ ಯುವಕರನ್ನು ಬಳಸುತ್ತಿದ್ದಾರೆ.

ಪಾಕಿಸ್ತಾನದ ರೆಡಿಯೋಗಳಲ್ಲಿ ಭಾರತ ಸರ್ಕಾರವನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಲು ದೇಶದ್ರೋಹ ಮತ್ತು ಪ್ರತ್ಯೇಕತಾವಾದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಜತೆಗೆ ಮಾದಕವಸ್ತು

ಕಳ್ಳಸಾಗಣೆಯಲ್ಲಿಯೂ ಸಕ್ರಿಯರಾಗಿದ್ದ ಪರಮ್‌ಜಿತ್ ಸಿಂಗ್ ಪಂಜ್ವಾಡ್ ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರ ನಡುವೆ ಪ್ರಮುಖ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಇದನ್ನು ಓದಿ: ಗನ್​ಮ್ಯಾನ್​ನಿಂದ ಶೂ ಹಾಕಿಸಿಕೊಂಡ ಮಹದೇವಪ್ಪ; ಸಂವಿಧಾನದ ಪೀಠಿಕೆಯನ್ನು ದಿನವೂ ಓದಿ ಎಂದ ಯತ್ನಾಳ್

Exit mobile version