ಭಾನುವಾರ ವಿಶ್ವ ತಾಯಂದಿರ ದಿನದಂದು ಇಂಡಿಗೋ ಏರ್‍ಲೈನ್ಸ್(Indigo Airlines) ಸಿಬ್ಬಂದಿ ತಾಯಿ ಮತ್ತು ಅವರ ಅಂಗವಿಕಲ ಮಗನನ್ನು ವಿಮಾನದಲ್ಲಿ ಪ್ರಯಾಣಿಸಲು ಕರೆದುಕೊಂಡು ಬಂದಿದ್ದರು, ಆದ್ರೆ ವಿಮಾನದ ಹತ್ತಿರ ಪ್ರವೇಶಿಸುತ್ತಿದ್ದಂತೆ ಇಂಡಿಗೋ ಏರ್‍ಲೈನ್ಸ್ ಸಿಬ್ಬಂದಿಗಳು ನಿಮ್ಮ ಮಗನನ್ನು ಒಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ತಿರಸ್ಕರಿಸಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿದ್ದಂತೆ, ನೆಟ್ಟಿಗರು ಇಂಡಿಗೋ ಸಿಬ್ಬಂದಿ ಹಾಗೂ ಸಿಇಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಗೋ ಸಿಬ್ಬಂದಿಗಳು ನಿಮ್ಮ ವಿಕಲ ಚೇತನ ಮಗನನ್ನು ವಿಮಾನದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ರಾಂಚಿ(Ranchi) ಸಚಿವ ಜ್ಯೋತಿರಾದಿತ್ಯ ಸಿಂಧಿಯಾ(Jyothiradithya Sindhia) ಸೋಮವಾರ ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಮತ್ತು ಯಾವುದೇ ಮನುಷ್ಯ ಇಂತಹ ಪರಿಸ್ಥಿತಿಗೆ ಒಳಗಾಗಬಾರದು ಎಂದು ಹೇಳಿದರು.
ಘಟನೆಯ ಬಗ್ಗೆ ಸ್ವತಃ ನಾನೇ ತನಿಖೆ ನಡೆಸುತ್ತಿದ್ದೇನೆ ಎಂದು ಹೇಳಿದರು. ಇದಾದ ಬಳಿಕ ವಿಮಾನಯಾನ ಸಂಸ್ಥೆಯ ಸಿಇಒ ಈ ಕುರಿತು ಕ್ಷಮೆಯಾಚಿಸಿದ್ದಾರೆ. ಇಂಡಿಗೋ ಅವರು ಅಂಗವಿಕಲ ಮಗುವನ್ನು ರಾಂಚಿ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತದಂತೆ ನಿಲ್ಲಿಸಿದರು. ನಿಲ್ಲಿಸಿದ್ದು ಯಾಕೆ? ಎಂದು ಪ್ರಶ್ನಿಸಿದಾಗ ಸಿಬ್ಬಂದಿ ಕೊಟ್ಟ ಉತ್ತರ, ಅವರು ವಿಮಾನದಲ್ಲಿ ಪ್ರಯಾಣ ಮಾಡುವಾಗ ಗಾಬರಿಗೊಳ್ಳಬಹುದು ಎಂಬ ಕಾರಣಕ್ಕೆ ಹೇಳಿದ್ದೀವಿ ಎಂದು ಸಮರ್ಥನೆ ಮಾಡಿಕೊಂಡರು.

ಶನಿವಾರದಂದು ರಾಂಚಿ-ಹೈದರಾಬಾದ್ ವಿಮಾನವನ್ನು ಹತ್ತದಂತೆ ಹುಡುಗನನ್ನು ತಡೆದಿದ್ದರಿಂದ, ಅವರ ತಾಯಿ ಸಹ ವಿಮಾನವನ್ನು ಹತ್ತದಿರಲು ನಿರ್ಧರಿಸಿದರು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಇಂಡಿಗೋ ಏರ್‍ಲೈನ್ಸ್ ವಿರುದ್ಧ ವ್ಯಾಪಕವಾಗಿ ಆಕ್ರೋಶಗಳನ್ನು ವ್ಯಕ್ತಪಡಿಸಿದ್ದನ್ನು ಕಂಡ ಬಳಿಕ ಮಾತನಾಡಿದ ಸಿಇಓ, ಇಂಡಿಗೋ ಸಿಬ್ಬಂದಿ ನಡೆದುಕೊಂಡ ರೀತಿಗೆ ನಾನು ಕ್ಷಮೆಯಾಚಿಸುತ್ತೇನೆ. ವಿಕಲ ಚೇತನ ವ್ಯಕ್ತಿಗೆ ಒಂದು ಎಲೆಕ್ಟ್ರಿಕ್ ಚೇರ್ ಉಡುಗೊರೆಯಾಗಿ ನೀಡುವ ಮುಖೇನ ತಮ್ಮ ನಡೆಗೆ ಕ್ಷಮೆಯಾಚಿಸಿದ್ದಾರೆ.