ಇಂದೋರ್, ಜೂ. 01: ಇಲ್ಲಿನ ಸರ್ಕಾರಿ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ದಾಖಲಾಗಿದ್ದ ಶೇಕಡ 15ರಷ್ಟು ರೋಗಿಗಳ ಮಿದುಳಿನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಬ್ಲಾಕ್ ಫಂಗಸ್ ಸೋಂಕಿಗೆ ಒಳಗಾಗಿದ್ದ ಒಟ್ಟು 368 ರೋಗಿಗಳು ಈ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿನ 55 ರೋಗಿಗಳ ಮಿದುಳಿನಲ್ಲಿ ಕಪ್ಪು ಶಿಲೀಂಧ್ರ ಸೋಂಕು ಇರುವದು ಪ್ರಾಥಮಿಕ ಅಧ್ಯಯನದಿಂದ ತಿಳಿದು ಬಂದಿದೆ. ಸಿಟಿ ಸ್ಕ್ಯಾನ್ನಲ್ಲಿಯೂ ಇದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಹುತೇಕ ರೋಗಿಗಳ ಮಿದುಳಿನಲ್ಲಿ ಸಣ್ಣ ಗಾತ್ರದಲ್ಲಿ ಸೋಂಕು ಇದೆ. ಸೊಂಕು ಹಬ್ಬುವುದನ್ನು ತಡೆಯಲು ನಾಲ್ವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಆಸ್ಪತ್ರೆಯ ನರರೋಗ ತಜ್ಞ ಡಾ. ರಾಕೇಶ್ ಗುಪ್ತಾ ತಿಳಿಸಿದ್ದಾರೆ.