ಕೆಲವೇ ನಿಮಿಷಗಳಲ್ಲಿ ಸೋಂಕು ಪತ್ತೆ; ಇಸ್ರೇಲ್​​ನಿಂದ ತಜ್ಞರನ್ನು ಕರೆಸಿಕೊಳ್ಳಲು ರಿಲಯನ್ಸ್​​ಗೆ ಅನುಮತಿ

ನವದೆಹಲಿ, ಮೇ. 07: ದೇಶದಲ್ಲಿ ಕೊರೋನಾ 2ನೇ ಅಲೆಯ ಭೀಕರತೆಯಿಂದ ಬಚಾವ್​ ಆಗಲು ಎಲ್ಲರೂ ಶ್ರಮಿಸುತ್ತಿದ್ದಾರೆ. ರಿಲಯನ್ಸ್​ ಸಂಸ್ಥೆ ಕೂಡ ಕೊರೋನಾ ವಿರುದ್ಧದ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದೆ. ಈಗಾಗಲೇ ಲಸಿಕೆ ಅಭಿಯಾನ, ಕೋವಿಡ್​ ಕೇರ್​ ಸೆಂಟರ್​ ನಿರ್ಮಿಸಿರುವ ರಿಲಯನ್ಸ್​ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ದೇಶಕ್ಕೆ ನೆರವಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ಸೋಂಕನ್ನು ಪತ್ತೆ ಹಚ್ಚುವ ಬ್ರೀತ್​ ಆಫ್​ ಹೆಲ್ತ್​​ (BHO) ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಲು ಮುಂದಾಗಿದೆ.

ಇದಕ್ಕಾಗಿ ಇಸ್ರೇಲ್​​ನಿಂದ ತಜ್ಞರ ತಂಡವನ್ನು ಭಾರತಕ್ಕೆ ಕರೆ ತರಲು ಅನುಮತಿಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಕೋವಿಡ್​ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆ ವಿಶ್ಚದ ಹಲವು ರಾಷ್ಟ್ರಗಳು ತನ್ನ ನಾಗರಿಕರಿಗೆ ಭಾರತಕ್ಕೆ ತೆರಳದಂತೆ ನಿರ್ಬಂಧವೇರಿದೆ. ಇದರಾಚೆಗೂ ಇಸ್ರೇಲ್​ ತಂಡವನ್ನು ಭಾರತಕ್ಕೆ ಕರೆ ತರುವಲ್ಲಿ ರಿಲಯನ್ಸ್​ ಸಂಸ್ಥೆ ಯಶಸ್ವಿಯಾಗಿದೆ. ಹೀಗಾಗಲೇ BHOಗೆ ಬೇಕಾದ ಉಪಕರಣಗಳು ಭಾರತವನ್ನು ತಲುಪಿದೆ. ತಜ್ಞರ ತಂಡವೂ ಭಾರತಕ್ಕೆ ವಿಶೇಷ ನಿಯಮದಡಿ ಆಗಮಿಸಲಿದೆ.

ಇಸ್ರೇಲ್​ನ ​ಸಂಸ್ಥೆಯೂ ಈ ತಂತ್ರಜ್ಞಾನವನ್ನು ಭಾರತಕ್ಕೆ ನೀಡುತ್ತಿದೆ. ಈ ಬಗ್ಗೆ ಇಸ್ರೇಲ್​ನ ಆರೋಗ್ಯ ಸಚಿವರು ಕಂಪನಿಗೆ ಖುದ್ದು ಭೇಟಿ ನೀಡಿ ಭಾರತಕ್ಕೆ ಬರಲಿರುವ ಯಂತ್ರೋಪಕರಣಗಳನ್ನು ಪರಿಶೀಲಿಸಿದ್ದಾರೆ. ಇನ್ನು BHO ತಂತ್ರಜ್ಞಾನದಿಂದ ಆರಂಭಿಕ ಹಂತದಲ್ಲೇ ದೇಹದಲ್ಲಿ ಕೊರೋನಾ ವೈರಸ್​ ಇರುವುದನ್ನು ಪತ್ತೆ ಹಚ್ಚಬಹುದು. ಇದರಿಂದ ಸೋಂಕು ಹರಡುವಿಕೆಯನ್ನು ಅತ್ಯಂತ ತ್ವರಿತವಾಗಿ ತಡೆಬಹುದಾಗಿದೆ. ಕೋವಿಡ್​ ರಿಪೋರ್ಟ್​​ಗಾಗಿ ದಿನಗಟ್ಟಲೇ ಕಾಯುವ ಬದಲು ಕೆಲವೇ ನಿಮಿಷಗಳನ್ನು ರಿಪೋರ್ಟ್​​ ಸಿಗಲಿದೆ. ಹೀಗಾಗಲೇ ಇಸ್ರೇಲ್​ನಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ರಿಲಯನ್ಸ್​ ಸೇರಿದಂತೆ ಭಾರತದ ದೊಡ್ಡ ದೊಡ್ಡ ಉದ್ಯಮಗಳು ಈ ತಂತ್ರಜ್ಞಾನವನ್ನು ಖರೀದಿಸಲಿದ್ದಾರೆ.

Exit mobile version