ನನಗೆ ಅನ್ಯಾಯವಾಗಿದೆ, ನನಗೂ 2 ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿ ; ಪಟ್ಟು ಹಿಡಿದ ಪರಂ

Bangalore : 2023 ರ ವಿಧಾನಸಭಾ ಚುನವಣೆಯಲ್ಲಿ (Assembly Elections) ನನಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಲು ನನಗೆ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿ ಎಂದು ಕಾಂಗ್ರೆಸ್ನ (Congress) ಪ್ರಚಾರ ಸಮಿತಿಯ ಅಧ್ಯಕ್ಷ ಮತ್ತು ಹಿರಿಯ ನಾಯಕ ಜಿ. ಪರಮೇಶ್ವರ್‌ (G. Parameshwar) ಪಟ್ಟು ಹಿಡಿದಿದ್ದಾರೆ (Injustice in assembly elections) ಎನ್ನಲಾಗಿದೆ.

ಸ್ಕ್ರೀನಿಂಗ್‌ ಕಮಿಟಿಯ ಸಭೆಯಲ್ಲಿ, ಸಿದ್ದರಾಮಯ್ಯನವರಿಗೆ ವಿಶೇಷ ಅವಕಾಶ ನೀಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜಿ.ಪರಮೇಶ್ವರ್‌,

ನನಗೂ ಪಕ್ಷದಲ್ಲಿ ಸಾಕಷ್ಟು ಅನ್ಯಾಯವಾಗಿದೆ. ನಾನು 2013ರಲ್ಲಿ ನಾನು ಸೋತ ಪರಿಣಾಮ ನಾನು ಮುಖ್ಯಮಂತ್ರಿ ಸ್ಥಾನದಿಂದ (Injustice in assembly elections) ವಂಚಿತನಾದೆ.

ಹೀಗಾಗಿ ಈ ಬಾರಿ ನನಗೂ ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿ, ಆ ಮೂಲಕ ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಪರಮೇಶ್ವರ್‌ ಪಟ್ಟು ಹಿಡಿದಿದ್ದಾರೆ.

ಮೂಲಗಳ ಪ್ರಕಾರ, ಪರಮೇಶ್ವರ್‌ ಅವರು ಕೊರಟಗೆರೆ ಕ್ಷೇತ್ರದ ಜೊತೆಗೆ ಬೆಂಗಳೂರಿನ ಪುಲಿಕೇಶಿ ನಗರದ ಟಿಕೆಟ್‌ನೀಡುವಂತೆ ಕೇಳಿದ್ದಾರೆ.

ಇದನ್ನೂ ಓದಿ : https://vijayatimes.com/change-in-class-12-syllabus/

ಆದರೆ ಪರಮೇಶ್ವರ್‌ ಬೇಡಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ (Srinivasamurthy) ಮತ್ತು ಜಮೀರ್‌ಅಹ್ಮದ್‌,

ಹಾಲಿ ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರವನ್ನು ಕೇಳುವುದು ತಪ್ಪು. ನಿಮಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಉತ್ಸಾಹವಿದ್ದರೆ,

ಗೆಲ್ಲುವ ಸಾಮರ್ಥ್ಯವಿದ್ದರೆ, ಬಿಜೆಪಿ ಅಥವಾ ಜೆಡಿಎಸ್‌ (JDS) ಶಾಸಕರಿರುವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ,

ಗೆದ್ದು ಬನ್ನಿ ಎಂದು ಪರಮೇಶ್ವರ್‌ಗೆ ಹೇಳಿದ್ದಾರೆ. ಇನ್ನು ಹಾಲಿ ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ,

ನಾನು ಯಾರಿಗೂ ನನ್ನ ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ. ಪಕ್ಷಕ್ಕಾಗಿ ನಾನು ಕೆಲಸ ಮಾಡಿದ್ದೇನೆ. ಹೀಗಾಗಿ ನನಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ : https://vijayatimes.com/urigowda-nanjegowda-controversy/

ಪಕ್ಷದಲ್ಲಿ ಸಿದ್ದರಾಮಯ್ಯನವರಿಗೆ ಪಕ್ಷದಲ್ಲಿ ವಿಶೇಷ ಸ್ಥಾನಮಾನ ನೀಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪರಮೇಶ್ವರ್‌,

ಸಿದ್ದರಾಮಯ್ಯನವರಿಗೆ ಮಾತ್ರ ಏಕೆ ವಿಶೇಷ ರೀತಿಯ ಅವಕಾಶ ನೀಡಲಾಗುತ್ತಿದೆ ಎಂಬುಂದು ನನಗೆ ಅರ್ಥವಾಗುತ್ತಿಲ್ಲ.

ಕಾಂಗ್ರೆಸ್‌ ಪಕ್ಷದಲ್ಲಿ ಅವರಿಗಿಂತ ಸಾಕಷ್ಟು ಹಿರಿಯರು, ಪಕ್ಷಕ್ಕಾಗಿ ಹೆಚ್ಚು ಕೆಲಸ ಮಾಡಿದವರಿದ್ದಾರೆ.

ಅವರೆಲ್ಲರನ್ನೂ ಕಡೆಗಣಿಸಿ, ಸಿದ್ದರಾಮಯ್ಯನವರಿಗೆ (Siddaramaiah) ವಿಶೇಷ ಪ್ರಾಧಾನ್ಯತೆ ನೀಡುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ವ್ಯಕ್ತಿ ಕೇಂದ್ರೀತ ಪಕ್ಷವಾಗಿ ಮಾಡಲಾಗುತ್ತಿದೆ.

ಅದರಿಂದ ಪಕ್ಷ ಮುಂದಿನ ದಿನಗಳಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಲಿದೆ ಎಂದು ಪರಮೇಶ್ವರ್‌ ಹೇಳಿದ್ದಾರೆ ಎನ್ನಲಾಗಿದೆ.

Exit mobile version