ಪರೀಕ್ಷೆಯಲ್ಲಿ ಫೇಲ್ ಆಗಿ ಜೀವನವೇ ಮುಗಿತು ಎನ್ನುವರಿಗೆ ‘ಈ’ ಜಿಲ್ಲಾಧಿಕಾರಿಯ ಕಥೆಯೇ ಸ್ಪೂರ್ತಿ!

Thushaar Sahera

ದೇಶಾದ್ಯಂತ ಈಗ ವಿದ್ಯಾರ್ಥಿಗಳು(Students) ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ಸಮಯ. ನಿರೀಕ್ಷಿಸಿದ ಫಲಿತಾಂಶ ಸಿಗದಿರುವುದು ಅಥವಾ ಪರೀಕ್ಷೆಯಲ್ಲಿ ಫೇಲ್(Fail) ಆದಾಗ ವಿದ್ಯಾರ್ಥಿಗಳು ಕುಗ್ಗುವುದು ಸಾಮಾನ್ಯ. ಕೆಲವೊಮ್ಮೆ ಆತ್ಮಹತ್ಯೆಯಂತ(Sucide) ದುಡುಕಿನ ನಿರ್ಧಾರ ಕೂಡ ತೆಗೆದುಕೊಳ್ಳುತ್ತಾರೆ.

ಆದರೆ ಇದು ತಪ್ಪು, ಪರೀಕ್ಷೆಯ ಫಲಿತಾಂಶ ಜೀವನದ ಒಂದು ಭಾಗವೇ ಹೊರತು ಅದೇ ಜೀವನವಲ್ಲ. ಇಂತಹ ದುಡುಕು ನಿರ್ಧಾರ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಗುಜರಾತ್ ನ(Gujarat) ಭರೂಚ್(Bharuchh) ಜಿಲ್ಲೆಯ ಜಿಲ್ಲಾಧಿಕಾರಿ(District Collector) ತುಷಾರ್ ಡಿ ಸುಮೆರಾ(Thushaar D Sumera) ಇವರ 10ನೇ ತರಗತಿಯ ಅಂಕಪಟ್ಟಿಯನ್ನು ಇನ್ನೊಬ್ಬ ಐಎಎಸ್ ಅಧಿಕಾರಿ ಟ್ವಿಟರ್ ನಲ್ಲಿ(Twitter) ಪೋಸ್ಟ್ ಮಾಡಿದ್ದಾರೆ. ಇವರ ಮಾರ್ಕ್ಸ್ ಕಾರ್ಡ್ ನೋಡಿದಾಗ ಖಂಡಿತ ಅಚ್ಚರಿಯಾಗುತ್ತದೆ.

ಏಕೆಂದರೆ, 10ನೇ ತರಗತಿಯಲ್ಲಿ ತುಷಾರ್ ಸುಮೆರಾ, ಇಂಗ್ಲೀಷ್ ವಿಷಯದಲ್ಲಿ ಕೇವಲ 35 ಹಾಗೂ ಗಣಿತದಲ್ಲಿ ಕೇವಲ 36 ಅಂಕ ಪಡೆದಿದ್ದರು. ಆದರೆ, ಕಠಿಣ ಪರಿಶ್ರಮ ಹಾಗೂ ಬದ್ಧತೆಯ ಕಾರಣದಿಂದಾಗಿ ತುಷಾರ್ ಅವರು ಜಿಲ್ಲಾಧಿಕಾರಿಯಾಗಲು ಸಾಧ್ಯವಾಯಿತು. ಇವರ ಈ ಸ್ಫೂರ್ತಿದಾಯಕ ಕಥೆಯನ್ನು ಮತ್ತೊಬ್ಬ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಛತ್ತೀಸ್‌ಗಢ್ ಕೇಡರ್ ಐಎಎಸ್ ಅಧಿಕಾರಿ ಅವ್ನೀಶ್ ಶರಣ್ ಈ ಟ್ವೀಟ್ ಮಾಡಿದ್ದಾರೆ. 10ನೇ ತರಗತಿಯಲ್ಲಿ ಭರೂಚ್ ಜಿಲ್ಲಾಧಿಕಾರಿ, ಗಣಿತ ಮತ್ತು ಇಂಗ್ಲೀಷ್ ಮಾತ್ರವಲ್ಲ ವಿಜ್ಞಾನ ವಿಷಯದಲ್ಲೂ 100 ಅಂಕಗಳಿಗೆ ಕೇವಲ 38 ಅಂಕ ಪಡೆದಿದ್ದರು!

ತುಷಾರ್ ಸುಮೇರಾ ಅವರ ಈ ಫಲಿತಾಂಶ ನೋಡಿದ ಗ್ರಾಮಸ್ಥರು ಹಾಗೂ ಅವರ ಶಾಲೆಯ ಟೀಚರ್ ಗಳು ಆತನಿಗೆ ವಿದ್ಯೆ ತಲೆಗೆ ಹೋಗುವುದಿಲ್ಲ, ಜೀವನದಲ್ಲಿ ಆತನಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದರು. ಆದರೆ, ತಮ್ಮ ಸಮರ್ಪಣಾ ಮನೋಭಾವ, ಕಠಿಣ ಶ್ರಮ, ಕಲಿಕೆಯಲ್ಲಿನ ಆಸಕ್ತಿಯಿಂದಾಗಿ ಈ ಅವಮಾನಗಳನ್ನೆಲ್ಲ ಎದುರಿಸಿಯೂ ಅವರು ಇಡೀ ಗ್ರಾಮದವರು ನಿರೀಕ್ಷೆಯೇ ಮಾಡದಂಥ ದೊಡ್ಡ ಸ್ಥಾನಕ್ಕೇರುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ಜೀವನದಲ್ಲಿ ಪರೀಕ್ಷೆಯೇ ಎಲ್ಲ, ಕಡಿಮೆ ಅಂಕ ಬಂದರೆ ಜೀವನವೇ ಇಲ್ಲ ಎನ್ನುವ ಮನಸ್ಥಿತಿಯ ವ್ಯಕ್ತಿಗಳಿಗೆ ತುಷಾರ್ ಅವರು ಸ್ಫೂರ್ತಿಯಾಗಿದ್ದಾರೆ. ಐಎಎಸ್ ಅವ್ನೀಶ್ ಶರಣ್ ಅವರ ಈ ಟ್ವೀಟ್‌ಗೆ, ಭರೂಚ್ ಕಲೆಕ್ಟರ್ ತುಷಾರ್ ಸುಮೇರಾ ಅವರು ‘ಧನ್ಯವಾದ ಸರ್’ ಎಂದು ಪ್ರತಿಕ್ರಿಯಿಸಿದ್ದಾರೆ.

Exit mobile version