ಅಂತರಾಷ್ಟ್ರೀಯ ವಿಮಾನಯಾನ ಜೂನ್ ೩೦ರವರೆಗೆ ನಿರ್ಬಂಧ ಮುಂದೂಡಿಕೆ

ನವದೆಹಲಿ, ಮೇ. 28: ಕೊರೋನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಜೂನ್ 30ರವರೆಗೂ ಡಿಜಿಸಿಎ ವಿಸ್ತರಿಸಿದೆ.

ನಿರ್ದಿಷ್ಟ ಪ್ರಕರಣಗಳ ಆಧಾರದಲ್ಲಿ ಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಅನುಮತಿ ನೀಡಲಾಗುವುದು ಎಂದು ಡಿಜಿಸಿಎ ಹೇಳಿಕೆ ತಿಳಿಸಿದೆ. ಅನುಮತಿ ಪಡೆದ ಸರಕು ಸಾಗಣೆ ವಿಮಾನಗಳ ಸಂಚಾರಕ್ಕೆ ಇದು ಅನ್ವಯವಾಗುವುದಿಲ್ಲ.

ಕೋವಿಡ್ ಪ್ರಕರಣಗಳು ಹೆಚ್ಚಿದಂತೆ 2020ರ ಮಾರ್ಚ್‌ 23ರಿಂದ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಯಾನದ ಮೇಲೆ ನಿರ್ಬಂಧ ಹೇರಲಾಗಿದೆ. ಮೇ 2020ರಿಂದ ವಂದೇ ಭಾರತ್‌ ಯೋಜನೆಯಡಿ ವಿಶೇಷ ವಿಮಾನಗಳು ಸಂಚರಿಸುತ್ತಿವೆ. ವಿಶೇಷ ವಿಮಾನಗಳ ಸಂಚಾರಕ್ಕೆ ಸಂಬಂಧಿಸಿ ಭಾರತ ಒಟ್ಟು 27 ದೇಶಗಳ ನಡುವೆ ಒಡಂಬಡಿಕೆ ಮಾಡಿಕೊಂಡಿದೆ.

Exit mobile version