ಅಂತರಾಷ್ಟ್ರೀಯ ಯೋಗ ದಿನ : M Yoga App ಲಾಂಚ್ ಮಾಡಿದ ಪ್ರಧಾನಿ ಮೋದಿ

ನವದೆಹಲಿ,ಜೂ.21: ಇಂದು 7ನೇ ಅಂತರಾಷ್ಟ್ರೀಯ ಯೋಗ ದಿನ. ಈ ವೇಳೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯೋಗದ ಮಹತ್ವ ಸಾರಿದ್ದಾರೆ. ಜೊತೆಗೆ M Yoga Appನ್ನು ಲಾಂಚ್​ ಮಾಡಿ, ‘ಒಂದು ವಿಶ್ವ-ಒಂದು ಆರೋಗ್ಯ‘  ಎಂಬ ಥೀಮ್​ನ್ನು ಅಭಿವೃದ್ಧಿ ಪಡಿಸಲು ನಾಂದಿ ಹಾಡಿದ್ದಾರೆ.

ಇಡೀ ವಿಶ್ವವೇ ಕೊರೋನಾ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದಾಗ, ಯೋಗ ಭರವಸೆಯ ಕಿರಣವಾಯಿತು. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದಾಗಿ ಭಾರತ ಸೇರಿದಂತೆ ವಿಶ್ವದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಆದರೆ ಯೋಗದ ಬಗ್ಗೆ ಇರುವ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಿದರು.

‘ಉತ್ತಮ ಆರೋಗ್ಯಕ್ಕಾಗಿ ಯೋಗ‘ ಮುಖ್ಯ. ‘ಮನೆಯಲ್ಲೇ ಕುಟುಂಬದ ಜೊತೆ ಯೋಗ’ ಅಂದರೆ ಕೊರೋನಾ ಇರುವ ಕಾರಣ ಮನೆಯಲ್ಲೇ ಯೋಗ ಮಾಡಿ ಎಂದು ಹೇಳಲಾಗಿದೆ.

7ನೇ ಅಂತರಾಷ್ಟ್ರೀಯ ದಿನದ ಅಂಗವಾಗಿ ಇಂದು ಪ್ರಧಾನಿ ಮೋದಿ M Yoga App ಅನ್ನು ಲಾಂಚ್ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಈ ಆ್ಯಪ್​ನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಗುತ್ತಿದೆ. M Yoga App ‘ಒಂದು ದೇಶ- ಒಂದು ಆರೋಗ್ಯ‘ ಥೀಮ್​ ಅನ್ನು ಉತ್ತೇಜಿಸಲು ಯೋಗ ಸಹಕಾರಿಯಾಗುತ್ತದೆ ಎಂಬ ಭರವಸೆ ನನಗಿದೆ. ವಿಶ್ವಸಂಸ್ಥೆಯ ಮುಂದೆ ಭಾರತವು ಅಂತರಾಷ್ಟ್ರೀಯ ಯೋಗ ದಿನದ ಬಗ್ಗೆ ಪ್ರಸ್ತಾವನೆ ಇಟ್ಟಾಗ, ಯೋಗ ವಿಜ್ಞಾನವನ್ನು ಇಡೀ ಜಗತ್ತಿಗೆ ಪರಿಚಯಿಸುವ ಉದ್ದೇಶ ಇತ್ತು. ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿದೆ ಭಾರತವು ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಈಗ ಎಂ-ಯೋಗ ಆ್ಯಪ್​ ಬಿಡುಗಡೆ ಮಾಡಲಾಗಿದ್ದು, ಇದು ವಿಶ್ವಾದ್ಯಂತ ಜನರಿಗೆ ಸಹಕಾರಿಯಾಗುವಂತೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವಿಡಿಯೋಗಳನ್ನು ಒಳಗೊಂಡಿದೆ. ಇದು ನಮಗೆ ‘ಒಂದು ದೇಶ-ಒಂದು ಆರೋಗ್ಯ‘ ಎಂಬ ಧ್ಯೇಯವಾಕ್ಯದೊಂದಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

Exit mobile version