ಇಸ್ರೇಲ್ನ ಅನುಮೋದನೆಯೊಂದಿಗೆ ಮಾತ್ರ ಗಾಜಾಕ್ಕೆ ಇಂಟರ್ನೆಟ್ ಸೇವೆ : ಎಲಾನ್ ಮಸ್ಕ್

Tel Aviv: ಇಸ್ರೇಲ್ನ (Israel) ಅನುಮೋದನೆಯೊಂದಿಗೆ ಮಾತ್ರ ಗಾಜಾಪಟ್ಟಿಗೆ (Internet service to Gaza – Elon Musk) ಸ್ಟಾರ್ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಆರಂಭಿಸಲಾಗುವುದು.

ಇಸ್ರೇಲ್ನ ಅನುಮತಿ ಇಲ್ಲದೇ ನಾವು ಯಾವುದೇ ಸೇವೆಯನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಟಾರ್ಲಿಂಕ್ ಇಂಟರ್ನೆಟ್ ಸಿಇಒ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ.

ಮೂಲಗಳ ಪ್ರಕಾರ, ತನ್ನ ಅನುಮೋದನೆಯಿಲ್ಲದೆ ಗಾಜಾದಲ್ಲಿ (Gaza) ಸ್ಟಾರ್ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಸಕ್ರಿಯಗೊಳಿಸದಂತೆ ಎಲಾನ್ ಮಸ್ಕ್ನೊಂದಿಗೆ ಪ್ರಾಥಮಿಕ ಒಪ್ಪಂದವನ್ನು

ಇಸ್ರೇಲ್ ಪ್ರಕಟಿಸಿದೆ. ಇಸ್ರೇಲ್ನ ಸಂವಹನ ಸಚಿವ ಶ್ಲೋಮೊ ಕರ್ಹಿ (Shlomo Karhi) ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಸಂವಹನ ಸಚಿವಾಲಯದ ಅನುಮೋದನೆಯ

ನಂತರ ಸ್ಟಾರ್ಲಿಂಕ್ (Starlink) ಉಪಗ್ರಹ ಘಟಕಗಳು ಗಾಜಾ ಪಟ್ಟಿಯಲ್ಲಿ ಕಾರ್ಯನಿರ್ವಹಿಸಲು (Internet service to Gaza – Elon Musk) ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ, ಎಲಾನ್ ಮಸ್ಕ್ ಅಕ್ಟೋಬರ್ನಲ್ಲಿ ಸ್ಪೇಸ್ಎಕ್ಸ್ನ ಸ್ಟಾರ್ಲಿಂಕ್ (SpaceX’s Starlink) ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಸಹಾಯ ಸಂಸ್ಥೆಗಳೊಂದಿಗೆ ಗಾಜಾದಲ್ಲಿ ಸಂವಹನ ಸಂಪರ್ಕಗಳನ್ನು

ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದರು. ಮಸ್ಕ್ ಅವರ ಈ ಕ್ರಮವು ಇಸ್ರೇಲ್ನ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಕುರಿತು ಬಹಿರಂಗವಾಗಿ ಕಿಡಿಕಾರಿದ್ದ ಇಸ್ರೇಲ್ನ ಸಂವಹನ ಸಚಿವ ಶ್ಲೋಮೋ ಕರ್ಹಿ,

ಉಪಗ್ರಹ ಇಂಟರ್ನೆಟ್ ಸೇವೆಯನ್ನು ಹಮಾಸ್ (Hamas) ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತದೆ.

ಹೀಗಾಗಿ ಈ ರೀತಿಯ ಯಾವುದೇ ಸೇವೆಯನ್ನು ಇಸ್ರೇಲ್ ವಿರೋಧಿಸುತ್ತದೆ. ಈ ವಿಚಾರದಲ್ಲಿ ನಮ್ಮ ನಿಲುವು ಅಚಲವಾಗಿದ್ದು, ಯಾವುದೇ ರೀತಿಯ ಇಂಟರ್ನೆಟ್ (Internet) ಸೇವೆಯನ್ನು ಗಾಜಾದಲ್ಲಿ

ಸ್ಥಾಪಿಸಲು ನಮ್ಮ ಅನುಮತಿ ಪಡೆಯಬೇಕಿದೆ ಎಂದಿದ್ದರು. ಇಸ್ರೇಲ್ನ ಅಸಮಾಧಾನದ ನಂತರ ಎಲಾನ್ ಮಸ್ಕ್ ತಮ್ಮ ಈ ಹಿಂದಿನ ನಿಲುವಿನಿಂದ ಹಿಂದಿ ಸರಿದಿದ್ದು, ಇಸ್ರೇಲ್ ಅನುಮೋದನೆಯೊಂದಿಗೆ

ಮಾತ್ರ ಗಾಜಾದಲ್ಲಿ ಇಂಟರ್ನೆಟ್ ಸೇವೆಯನ್ನು ಆರಂಭಿಸಲಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಇಸ್ರೇಲ್ ಬೆಂಬಲಕ್ಕೆ ನಿಂತಿದ್ದಾರೆ.

ಇನ್ನು ಇಸ್ರೇಲ್ ತನ್ನ ಗಾಜಾದ ಮೇಲೆ ವಾಯು ದಾಳಿಯನ್ನು ವಿಸ್ತರಿಸಿದಂತೆ ಫೋನ್ (Phone) ಮತ್ತು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿತ್ತು. ಗಾಜಾ ಪಟ್ಟಿಯಲ್ಲಿರುವ ಜನರು ಅಕ್ಟೋಬರ್ (October)

28 ರಿಂದ ಯಾವುದೇ ಇಂಟರ್ನೆಟ್ ಸೇವೆ ಮತ್ತು ಪೋನ್ ಕರೆಯ ಸೇವೆ ಇಲ್ಲದೇ ಪರಿತಪಿಸುವಂತಾಗಿದೆ.

ಇದನ್ನು ಓದಿ: ಶುಭ ಸುದ್ದಿ: ಏರ್​ಟೆಲ್​ನಿಂದ ಬಂತು ಮತ್ತೊಂದು ಹೊಸ ಯೋಜನೆ, ಮಾಹಿತಿ ಹೀಗಿದೆ

Exit mobile version