ಈ ಪಕ್ಷಿಗೆ ಮೆದುಳಿಗಿಂತ ಕಣ್ಣೇ ದೊಡ್ಡದು ; ಮೂರು ಹೊಟ್ಟೆ ಹೊಂದಿರುವ ಏಕೈಕ ಪಕ್ಷಿ!

ವನ್ಯಜೀವ ಸಂಕುಲಗಳು, ಪಕ್ಷಿಗಳ ಬಗ್ಗೆ ಮಾನವನ ಕುತೂಹಲ ಎಂದಿಗೂ ತಣಿಯುವುದಿಲ್ಲ. ಪಕ್ಷಿ ಲೋಕದಲ್ಲಿ ಪಕ್ಷಿ ತಜ್ಞರಿಗೇ ಅಚ್ಚರಿ ಮೂಡಿಸುವಂತಹ ಅನೇಕ ಪಕ್ಷಿಗಳ ಬೃಹತ್ ಸಂಖ್ಯೆಯಿವೆ, ಅವುಗಳಲ್ಲಿ ಪ್ರಮುಖ ಹಾಗೂ ವಿಭಿನ್ನವಾದದ್ದು ಒಂದು ಆಸ್ಟ್ರಿಚ್ ಅಥವಾ ಉಷ್ಟ್ರ ಪಕ್ಷಿ. ಇವು ಸಾಮಾನ್ಯವಾಗಿ ಅರೇಬಿಯ ಮತ್ತು ಆಫ್ರಿಕಾ ದೇಶಗಳ ಮರಳು ಕಾಡುಗಳು, ದಕ್ಷಿಣ ಅಮೆರಿಕ ಖಂಡದಲ್ಲಿ ಅಮೆರಿಕಾನ ಪ್ರಭೇದದ ಹುಲ್ಲುಗಾವಲುಗಳಲ್ಲಿ ವಾಸಿಸುತ್ತವೆ.

ದಕ್ಷಿಣ ಆಫ್ರಿಕ ಮತ್ತು ಕ್ಯಾಲಿಫೋರ್ನಿಯಗಳಲ್ಲಿ ಉಷ್ಟ್ರಪಕ್ಷಿಗಳನ್ನು ಕಾಣಬಹುದು. ಈ ಪಕ್ಷಿಯ ಬಗ್ಗೆ ನಿಮಗೆ ತಿಳಿಯದ ಕೆಲವೊಂದು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ ಪೂರ್ತಿಯಾಗಿ ಓದಿ. ಇಡೀ ಪಕ್ಷಿ ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಪಕ್ಷಿ ಆಸ್ಟ್ರಿಚ್. ಹಾಗೆಯೇ ಇದರ ಕಣ್ಣುಗಳು ಅದೆಷ್ಟು ದೊಡ್ಡದಾಗಿವೆ ಎಂದರೆ, ಇಡೀ ಪ್ರಾಣಿ ಪ್ರಪಂಚದಲ್ಲಿ ಉಷ್ಟ್ರ ಪಕ್ಷಿಯ ಕಣ್ಣುಗಳೇ ಅತ್ಯಂತ ದೊಡ್ಡದಾಗಿದೆ. ಇವುಗಳ ಕಣ್ಣುಗಳ ಗಾತ್ರ ಅದರ ಮೆದುಳಿಗಿಂತಲೂ ಅತಿ ದೊಡ್ಡದಾಗಿರುತ್ತೆ ಎಂದರೇ ನೀವೇ ಊಹಿಸಿಕೊಳ್ಳಿ!

ಆಸ್ಟ್ರಿಚ್ ವಿಶ್ವದ ಅತ್ಯಂತ ವೇಗವಾಗಿ ಓಡುವ ಪಕ್ಷಿಯಾಗಿದೆ. ಗಾಳಿಯಲ್ಲಿ ಹಾರಲು ಸಾಧ್ಯವಾಗದಿದ್ದರೂ ಜಿಗಿಯುವ ಮೂಲಕ 3 ರಿಂದ 5 ಮೀಟರ್ ದೂರವನ್ನು ಒಂದೇ ಕ್ಷಣಕ್ಕೆ ಕ್ರಮಿಸಬಲ್ಲದು. ಇದು ತುಂಬಾ ವೇಗವಾಗಿ ಓಡುತ್ತದೆ. ಗಂಟೆಗೆ ಸರಾಸರಿ 75 ಕಿಲೋಮೀಟರ್ ವೇಗದಲ್ಲಿ ಇದು ಕ್ರಮಿಸುತ್ತದೆ ಎಂದರೆ ಆಶ್ಚರ್ಯವಾಗ್ತಿದೆ ಅಲ್ವಾ, ಆಶ್ಚರ್ಯವಾದ್ರೂ ಇದು ಸತ್ಯ. ಅಸ್ಟ್ರಿಚ್ ಪಕ್ಷಿಗಳು ಹಾರುವುದಿಲ್ಲ. ಹಾಗಾದ್ರೆ ಇವು​ಗಳಿಗೆ ರೆಕ್ಕೆ ಏಕಿದೆ ಎಂದು ನಿಮಗೆ ಆಶ್ಚರ್ಯವಾಗಬಹುದು?

ಆಸ್ಟ್ರಿಚ್​ ಪಕ್ಷಿಗಳಿಗೆ ಹಾರಲು ಸಾಧ್ಯವಾಗುವುದಿಲ್ಲ, ನಿಜ. ಆದ್ರೆ ಅವುಗಳು ದಿಕ್ಕನ್ನು ಬದಲಾಯಿಸಲು ತಮ್ಮ ರೆಕ್ಕೆಗಳನ್ನು ಬಳಸುತ್ತದೆ. ಅಚ್ಚರಿಯ ವಿಷಯವೆಂದರೆ ಪಕ್ಷಿಗಳ ಪಾದಗಳು ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಬೆರಳುಗಳನ್ನು ಹೊಂದಿರುತ್ತವೆ. ಆದರೆ ಆಸ್ಟ್ರಿಚ್ ಕೇವಲ 2 ಬೆರಳುಗಳನ್ನು ಹೊಂದಿದೆ. ಆಸ್ಟ್ರಿಚ್ ಅತ್ಯಂತ ಶಾಂತ ಪಕ್ಷಿ. ಆದರೆ ಆತ್ಮರಕ್ಷಣೆಯ ವಿಷಯಕ್ಕೆ ಬಂದಾಗ ಅದು ತನ್ನ ಕಾಲುಗಳನ್ನು ಬಳಸುತ್ತದೆ. ಇದರ ಉದ್ದವಾದ ಕಾಲುಗಳು ತುಂಬಾ ಶಕ್ತಿಯುತವಾಗಿವೆ.

ಅವು ಎಷ್ಟು ಬಲಶಾಲಿಯೆಂದರೆ ಒಂದೇ ಏಟಿಗೆ ಮನುಷ್ಯನ ಪ್ರಾಣಪಕ್ಷೀ ಹಾರಿ ಹೋಗಬಹುದು. ಇದರ ಮೊಟ್ಟೆಯ ಬಗ್ಗೆ ನೀವು ಕೇಳಿರಬಹುದು. ಆಸ್ಟ್ರಿಚ್ ವಿಶ್ವದ ಅತಿದೊಡ್ಡ ಮೊಟ್ಟೆಯಿಡುವ ಪಕ್ಷಿಯಾಗಿದೆ. ಇದರ ಮೊಟ್ಟೆಯು 6 ಇಂಚು ಉದ್ದ ಮತ್ತು 5 ಮೀಟರ್ ವ್ಯಾಸವನ್ನು ಹೊಂದಿದೆ. ಈ ಮೊಟ್ಟೆ ಎಷ್ಟು ದೊಡ್ಡದು ಎಂದರೆಅದನ್ನು ಹಿಡಿಯಲು ನಮ್ಮ ಎರಡು ಕೈಗಳು ಕೂಡ ಸರಿಯಾಗುವುದಿಲ್ಲ ಅಷ್ಟು ದೊಡ್ಡದಾಗಿರುತ್ತದೆ. ಇದೇ ರೀತಿ ಮತ್ತಷ್ಟು ನಿಮಗೆ ತಿಳಿಯದ ಅನೇಕ ಹೊಸ ವಿಷಯಗಳನ್ನು ನಾವು ನಿಮಗೆ ಪರಿಚಯಿಸುತ್ತ ಬರವಣಿಗೆ ರೂಪದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತೇವೆ. ತಪ್ಪದೇ ನಿರೀಕ್ಷಿಸಿ.

  • ಪವಿತ್ರ ಸಚಿನ್

Latest News

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.