ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿವೇ ಅನೇಕ ಕುತೂಹಲಕಾರಿ ವಸ್ತುಗಳು!

rail musuem

ಪ್ರವಾಸಿಗರ(Tourists) ಅಚ್ಚುಮೆಚ್ಚಿನ ತಾಣ ಹಾಗೂ ಸಾಂಸ್ಕೃತಿಕ(Heritage City) ನಗರಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಮೈಸೂರು(Mysuru) ರೈಲ್ವೆ ಮ್ಯೂಸಿಯಂನಲ್ಲಿವೇ(Rail Musuem) ಬಹಳಷ್ಟು ಕುತೂಹಲಕಾರಿಯಾದ ಅಂಶಗಳು. ಹೌದು, 32 ಎಕರೆ ವಿಶಾಲ ಪ್ರದೇಶದಲ್ಲಿರುವ ಮ್ಯೂಸಿಯಂನಲ್ಲಿ ಆಕರ್ಷಕ ಹಾಗೂ ಅಪರೂಪದ ಬ್ರಿಟಿಷರ ಕಾಲದ ರೈಲು ಇಂಜಿನ್‌ಗಳು ಹಾಗೂ ಸ್ಟೀಮ್‌ ಇಂಜಿನ್‌ಗಳಿವೆ.

ಇವೆಲ್ಲವೂ ಪ್ರವಾಸಿಗರಲ್ಲಿ ಕುತೂಹಲ ಮೂಡಿಸುತ್ತಿದೆ. ನಗರದ ಕೆ.ಆರ್‌.ಎಸ್ ರಸ್ತೆಯಲ್ಲಿನ ಸಿಎಫ್‌ಟಿಆರ್‌ಐ ಎದುರು ಭಾರತೀಯ ರೈಲ್ವೆ 1979ರಲ್ಲಿ ಈ ಮ್ಯೂಸಿಯಂ ಅನ್ನು ಸ್ಥಾಪಿಸಿತು. ದೇಶದಲ್ಲಿ ಇರುವುದು ಎರಡೇ ರೈಲ್ವೆ ಮ್ಯೂಸಿಯಂ. ಹೊಸದಿಲ್ಲಿಯಲ್ಲಿ ನ್ಯಾಷನಲ್‌ ರೈಲ್ವೆ ಮ್ಯೂಸಿಯಂ ಇದೆ. ಅದು ಬಿಟ್ಟರೆ ಮೈಸೂರಿನಲ್ಲಿದೆ. ವಿಂಟೇಜ್‌ ಲೋಕೋಮೋಟರ್‌ಗಳನ್ನು ಹೊರಗಡೆ ಪ್ರದರ್ಶನಕ್ಕಿಟ್ಟಿರುವ ಏಕೈಕ ಮ್ಯೂಸಿಯಂ ಎಂದರೆ ಮೈಸೂರಿನ ರೈಲು ವಸ್ತು ಸಂಗ್ರಹಾಲಯ ಮಾತ್ರ.

ಮ್ಯೂಸಿಯಂನ ವಿಶೇಷ : ಮೊದಲ ರೈಲಿನ ಇಂಜಿನ್‌, ಸ್ಟೀಮ್‌ ರೈಲು, ಕಲ್ಲಿದ್ದಲು ಇಂಜಿನ್‌ ಸೇರಿದಂತೆ ಹಳೆ ಕಾಲದ ನಾನಾ ಬಗೆಯ ಇಂಜಿನ್‌ಗಳು ಪ್ರದರ್ಶನದಲ್ಲಿವೆ. ಇಎಸ್‌ 506 4-6-2 ಮೊದಲ ಲೋಕೋಮೋಟರ್‌ ಇಂಜಿನ್‌, ಆಟ್ಸಿನ್‌ ರೈಲ್‌ ಮೋಟಾರ್‌ ಕಾರ್‌, ಹಳೆ ಕಾಲದಲ್ಲಿ ರೈಲು ದುರಸ್ತಿಗೊಳಿಸಲು ಪರಿಶೀಲಿಸುತ್ತಿದ್ದ ವಾಹನಗಳು ಸೇರಿದಂತೆ ನಾನಾ ರೈಲು ಇಂಜಿನ್ ಗಳು ಮತ್ತು ಬೋಗಿಗಳು ಮ್ಯೂಸಿಯಂನಲ್ಲಿವೆ.

ಜೊತೆಗೆ 1899ರ ಸಮಯದಲ್ಲಿ ಮೈಸೂರಿನ ರಾಜ ವಂಶಸ್ಥರು ಪ್ರಯಾಣಿಸಲು ಬಳಸುತ್ತಿದ್ದ ಬೋಗಿಗಳು ಹಾಗೂ ಮಹಾರಾಣಿ ಸಲೂನ್‌ ಕ್ಯಾರೇಜ್‌ (ಮಹಾರಾಣಿ ಪ್ರಯಾಣಿಸುತ್ತಿದ್ದ ಬೋಗಿ) ಗಮನಾರ್ಹವಾಗಿದೆ. ಅದರಲ್ಲೂ ಅಡುಗೆ ಕೋಣೆ, ಮರದ ವೆಸ್ಟರ್ನ್‌ ಟಾಯ್ಲೆಟ್‌ಗಳು ಆಕರ್ಷಣೀಯವಾಗಿದೆ. ಹಳೆ ಕಾಲದ ಟೆಲಿಫೋನ್‌ಗಳು, ಛಾಯಾಚಿತ್ರಗಳು, ಆರಂಭಿಕ ಕಾಲದ ರೈಲ್ವೆ ಟಿಕೆಟ್‌ಗಳು ಪ್ರದರ್ಶನದಲ್ಲಿವೆ. ಮೈಸೂರು ರೈಲು ವಸ್ತುಸಂಗ್ರಹಾಲಯವು ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ. ಸಂಜೆ ನಾಲ್ಕೂವರೆಗೆ ಟಿಕೆಟ್ ಮಾರಾಟ ನಿಲ್ಲುತ್ತದೆ.

ಪ್ರಮುಖ ಆಕರ್ಷಣೆಗಳು: ಆಸ್ಟಿನ್ ರೈಲು ಮೋಟಾರು ಕಾರು, 1925ರ ಆಸ್ಟಿನ್ ಕಾರಿಗೆ ರೈಲ್ವೆ ಚಕ್ರಗಳನ್ನು ಅಳವಡಿಸಿ ಮತ್ತು ತಪಾಸಣೆ ಕಾರ್ ಆಗಿ ಬಳಸಲಾಗುತಿತ್ತು. ವ್ಯಾಗ್ನಾಲ್ & ಕೋ 119 ಇ ಉಗಿ ಇಂಜಿನ್
ಶಿವಮೊಗ್ಗ ಮತ್ತು ತಾಳಗುಪ್ಪ ನಡುವೆ ಓಡುತ್ತಿದ್ದ ಮೀಟರ್ ಗೇಜ್ ಬಸ್ ರೈಲು ಮೈಸೂರಿನ ಮಹಾರಾಜರು ಬಳಸಿದ ರಾಯಲ್ ಬೋಗಿಗಳು
1963 ವೈಪಿ -2511 ಟೆಲ್ಕೊ ನಿರ್ಮಿಸಿದ ಮೀಟರ್ ಗೇಜ್ ಉಗಿ ಎಂಜಿನ್.

ನ್ಯಾರೋ ಗೇಜ್ (ಒಂದು ಮೀಟರ್ ಗಿಂತ ಕಡಿಮೆ ಅಗಲ) ಮತ್ತು ಮೀಟರ್ ಗೇಜ್ ರೈಲು ಬೋಗಿಗಳು ಮಹಾರಾಣಿ ಸಲೂನ್- ಮಲಗುವ ಕೋಣೆ , ಅಡಿಗೆ ಮನೆ ಮತ್ತು ಊಟದ ಕೋಣೆ ಇರುವ ರಾಯಲ್ ಬೋಗಿಗಳು 85 1885 ಎಂಜಿ ಹ್ಯಾಂಡ್ ಕ್ರೇನ್ (ಭಾರ ಎತ್ತುವ ಸಾಧನ)
ರೈಲ್ವೆಗೆ ಸಂಬಂಧಿಸಿದ ಸಿಗ್ನಲಿಂಗ್ ವ್ಯವಸ್ಥೆಗಳು, ವರ್ಣಚಿತ್ರಗಳು ಮತ್ತು ಇತರ ಕಲಾಕೃತಿಗಳು ಮೈಸೂರು ರೈಲು ವಸ್ತುಸಂಗ್ರಹಾಲಯವು ಮಕ್ಕಳಿಗಾಗಿ ಬ್ಯಾಟರಿ ಚಾಲಿತ ಆಟಿಕೆ ರೈಲನ್ನು ಕೂಡ ಹೊಂದಿದೆ.

Exit mobile version