IPL ಬ್ಯಾನ್‌ ಮಾಡಲು ಅಭಿಮಾನಿಗಳ ಆಗ್ರಹ

Latest Cricket News Today

ಮುಂಬೈ ನ 1 : ಐಪಿಎಲ್ ನಲ್ಲಿ ಚೆನ್ನಾಗಿ ಆಡುವ ಆಟಗಾರರು ವಿಶ್ವಕಪ್ ನಲ್ಲಿ ಏಕೆ ಆಡುತ್ತಿಲ್ಲ? ಅಲ್ಲಿ ದುಡ್ಡಿಗಾಗಿ ಆಡುವ ಆಟಗಾರರು ಇಲ್ಲಿ ದೇಶಕ್ಕಾಗಿ ಏಕೆ ಆಡುತ್ತಿಲ್ಲ? ವೆಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಐಪಿಎಲ್ ಟೂರ್ನಿಯನ್ನು ಬ್ಯಾನ್ ಮಾಡಿದರೆ ಎಲ್ಲವೂ ಸರಿಹೋಗುತ್ತದೆ. ಆಗ ಟೀಂ ಇಂಡಿಯಾ ಆಟಗಾರರು ಸರಿಯಾದ ಟ್ರ್ಯಾಕ್ ಗೆ ಬರುತ್ತಾರೆ ಅಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ದೇಶಕ್ಕಾಗಿ ಆಡದ ಆಟಗಾರರು ದುಡ್ಡಿಗಾಗಿ ಐಪಿಎಲ್ ನಲ್ಲಿ ಆಡುವುದು ಎಷ್ಟು ಸರಿ? ಹೀಗಾಗಿ ಬಿಸಿಸಿಐ ಐಪಿಎಲ್ ಟೂರ್ನಿ ಬ್ಯಾನ್ ಮಾಡಬೇಕು. ಮುಂದಿನ ದಿನಗಳಲ್ಲಿ ಐಪಿಎಲ್ ಆಯೋಜಿಸಬಾರದು ಎಂದು ಹೇಳುತ್ತಿದ್ದಾರೆ. ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಬೆಳಗ್ಗೆಯಿಂದಲೇ ಐಪಿಎಲ್ ಬ್ಯಾನ್(Ban IPL Trends) ಮಾಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.  

ಭಾನುವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿ(T20 World Cup 2021)ಯ ಮಹತ್ವದ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ಎದುರು 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 10 ವಿಕೆಟ್ ಗಳ ಹೀನಾಯ ಸೋಲು(India vs New Zealand) ಕಂಡಿದ್ದ ವಿರಾಟ್ ಕೊಹ್ಲಿ ಪಡೆ 2ನೇ ಪಂದ್ಯದಲ್ಲಿಯೂ ಸೋಲು ಕಂಡಿದೆ. ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ ಭಾರತ ತಂಡ ಸೋಲು ಕಾಣುತ್ತಿರುವುಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಕೊಹ್ಲಿ ಪಡೆ ಸಂಪೂರ್ಣ ವಿಫಲವಾಗಿದೆ. ಅನುಭವಿ ಆಟಗಾರರು ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿ ರನ್ ಹೊಡೆಯಲು ತಿಣುಕಾಡುತ್ತಿದ್ದರೆ, ಐಪಿಎಲ್(IPL Match) ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬೌಲರ್ ಗಳು ಮಂಕಾಗಿದ್ದಾರೆ. ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ಅವರ ಮಾರ್ಗದರ್ಶನವೂ ಟೀಂ ಇಂಡಿಯಾಗೆ ಕೈಹಿಡಿಯುತ್ತಿಲ್ಲ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿರುವ ಭಾರತ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಫ್ಘಾನಿಸ್ತಾನ ತಂಡಕ್ಕಿಂತಲೂ ಹಿಂದಿದೆ.

Sports News in Kannada

Exit mobile version