ಐಪಿಎಲ್ 2020; ಯಾರ ಪಾಲಾಯಿತು ಟಾಟಾ ಆಲ್ಟ್ರೋಸ್ ಕಾರು?

ದುಬೈ, ನ. 11; ಕೊರೋನಾದ ಭೀತಿ ನಡುವೆಯು ಬಾರಿ ೧೩ನೇ ಸರಣಿಯ ಐಪಿಎಲ್‌, ದುಬೈನಲ್ಲಿ ನಡೆಯಿತು. ಈ ಬಾರಿಯ ಐಪಿಎಲ್‌ ಸರಣಿಯನ್ನು ರೋಹಿತ್‌ ಶರ್ಮಾ ನೇತೃತ್ವದ ತಂಡ ಮುಂಬೈ ಇಂಡಿಯನ್ಸ್‌ ಸತತ ಮೂರನೇ ಬಾರಿಗೆ ಅಂದರೆ ಒಟ್ಟಾರೆಯಾಗಿ 5ನೇ ಬಾರಿಗೆ ಟ್ರೋಫಿ ಗೆದ್ದುಕೊಟ್ಟ  ಮೊದಲ  ನಾಯಕನೆಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಗೆದ್ದು, ಚಾಂಪಿಯನ್‌ ಪಟ್ಟಕ್ಕೇರಿತು. ಇದರ ಬೆನ್ನಲ್ಲೆ ಅರಬ್ಬರ ನಾಡಿನಲ್ಲಿ ಬಿಸಿಸಿಐ ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಿತ್ತು. ಈ ಟೂರ್ನಿಯ ಆಕರ್ಷಣೀಐ ಕೇಂದ್ರಬಿಂದುವಾಗಿದ್ದ ಟಾಟಾ ಆಲ್ಟ್ರೋಸ್‌ ಕಾರು ಯಾರ ಪಾಲಾಯಿತು ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.ಇದಕ್ಕೆ ಉತ್ತರ ಇಲ್ಲಿದೆ ನೋಡಿ:

ಯುಎಇನಲ್ಲಿ ನಡೆದ ೧೩ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಟಾಟಾ ಆಲ್ಟ್ರೋಸ್‌ ಕೂಡಾ ಸಹಪ್ರಾಯೋಜಕತ್ವವನ್ನು ನೀಡಿತ್ತು. ಅತ್ಯತ್ತಮ ಬ್ಯಾಟಿಂಗ್‌ ಸ್ಟ್ರೈಕ್‌ರೇಟ್‌ ಹೊಂದಿದ ಬ್ಯಾಟ್ಸ್‌ಮ್ಯಾನ್‌ಗೆ ಈ ಕಾರನ್ನು ಬಹುಮಾನವಾಗಿ ನೀಡಲಾಯಿತು. ಈ ವರ್ಷದ ಟಾಟಾ ಆಲ್ಟ್ರೋಸ್‌ ಕಾರು ಪಡೆಯಲು ಮುಂಬೈ ಇಂಡಿಯನ್ಸ್‌ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ಗಳಾದ ಕೀರಾನ್‌ ಪೋಲ್ಲಾರ್ಡ್‌ ಹಾಗೂ ಹಾರ್ದಿಕ್‌ ಪಾಂಡ್ಯ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು.

ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಹಾರ್ದಿಕ್‌ ಪಾಂಡ್ಯ ೧೩ ಇನ್ನಿಂಗ್ಸ್‌ಗಳಲ್ಲಿ 178.98ಸ್ಟ್ರೈಕ್‌ ರೇಟ್‌ನಲ್ಲಿ ೨೮೧ ರನ್‌ ಬಾರಿಸಿದ್ದರು. ಇನ್ನು ಇನ್ನೊಬ್ಬ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಕೀರಾನ್‌ ಪೊಲ್ಲಾರ್ಡ್‌ ಕೇವಲ ೧೨ ಇನ್ನಿಂಗ್ಸ್‌ಗಳಲ್ಲಿ 191.42 ಸ್ಟ್ರೈಕ್‌ರೇಟ್‌ನಲ್ಲಿ 268 ರನ್‌ ಬಾರಿಸಿದ್ದರು. ಹೀಗಾಗಿ ಗರಿಷ್ಠ ಸ್ಟ್ರೈಕ್‌ರೇಟ್‌ ಹೊಂದಿದ ಕೀರಾನ್‌ ಪೊಲ್ಲಾರ್ಡ್‌ ಟಾಟಾ ಆಲ್ಟ್ರೋಸ್‌ ಕಾರನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.  

Exit mobile version