ಐಪಿಎಲ್ 2024 ಆಕ್ಷನ್ ದಿನಾಂಕ ಪ್ರಕಟ: ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 2024ರ ಹರಾಜು ದಿನಾಂಕ ಪ್ರಕಟವಾಗಿದ್ದು, (IPL 2024 Auction) ಇದೇ ಡಿಸೆಂಬರ್ 19 ರಂದು ದುಬೈನಲ್ಲಿ ಆಯೋಜಿಸಲಾಗಿದೆ.

ಈ ಮೂಲಕ ಮೊದಲ ಬಾರಿಗೆ ವಿದೇಶದಲ್ಲಿ ಐಪಿಎಲ್ ಆಕ್ಷನ್ (IPL Action) ನಡೆಯುತ್ತಿದೆ. ಹರಾಜಿನಲ್ಲಿ 830 ಭಾರತೀಯ ಆಟಗಾರರು ಮತ್ತು 336 ವಿದೇಶಿ ಆಟಗಾರರು ಹೆಸರು ನೋಂದಾಯಿಸಿದ್ದಾರೆ.

ಇದೇ ಡಿಸೆಂಬರ್ (December) 19 ರಂದು ದುಬೈನಲ್ಲಿ ಐಪಿಎಲ್ 2024 ಮಿನಿ ಆಕ್ಷನ್ ನಡೆಯಲಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಹರಾಜು ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ.

ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತವಾಗಿ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಈ ಮೂಲಕ ಇದೇ (IPL 2024 Auction) ಮೊದಲ ಬಾರಿಗೆ ವಿದೇಶದಲ್ಲಿ ಆಕ್ಷನ್ ನಡೆಯುತ್ತಿದೆ.

ದುಬೈನಲ್ಲಿ (Dubai) ನಡೆಯಲಿರುವ ಹರಾಜಿನಲ್ಲಿ 830 ಭಾರತೀಯ ಆಟಗಾರರು ಮತ್ತು 336 ವಿದೇಶಿ ಆಟಗಾರರು ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರು

ಮಾತ್ರ ಹರಾಜಿಗೆ ಪ್ರವೇಶಿಸಲು ಸಾಧ್ಯ. ಅಂದಾಜಿನ ಪ್ರಕಾರ, 70 ಸ್ಥಾನಗಳನ್ನು ತುಂಬಲು 1000 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ನ್ಯೂಝಿಲೆಂಡ್‌ನ (New Zealand) ಸ್ಟಾರ್ ಯುವ ಆಲ್‌ರೌಂಡರ್ ರಚಿನ್ ರವೀಂದ್ರ ರೂ. 50 ಕೋಟಿ ಮೂಲ ಬೆಲೆಗೆ ಲಭ್ಯವಾಗಲಿದ್ದು, ರವೀಂದ್ರ ಅವರು 2023 ರ ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ

ಪ್ರದರ್ಶನದೊಂದಿಗೆ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಇವರು 10 ಪಂದ್ಯಗಳಲ್ಲಿ 543 ರನ್ ಮತ್ತು 5 ವಿಕೆಟ್ ಪಡೆದಿದ್ದರು. ಈ ಬಾರಿಯ ಹರಾಜಿನಲ್ಲಿ ಟ್ರಾವಿಸ್ ಹೆಡ್ (Travis Head),

ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಸೇರಿದಂತೆ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ (Australia) ಸ್ಟಾರ್ ಆಟಗಾರರು ಭಾಗವಾಗಲಿದ್ದಾರೆ. ಮೂವರೂ ತಮ್ಮ ಮೂಲ ಬೆಲೆಯನ್ನು

ರೂ. 2 ಕೋಟಿ ನಿಗದಿಪಡಿಸಿದ್ದಾರೆ.

ಇದನ್ನು ಓದಿ: ಐಪಿಎಲ್ 2024 ಆಕ್ಷನ್ ದಿನಾಂಕ ಪ್ರಕಟ: ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ

Exit mobile version