Iran : ಲಾಕ್ ಅಪ್ ಡೆತ್ ; ತಮ್ಮ ಕೂದಲನ್ನು ಕತ್ತರಿಸಿ ವಿಭಿನ್ನ ಪ್ರತಿಭಟನೆ ನಡೆಸಿದ ಇರಾನ್ ಮಹಿಳೆಯರು!

Iran : ಪೊಲೀಸ್ (Police) ವಶದಲ್ಲಿದ್ದ 22 ವರ್ಷದ ಮಹಾಸ ಅಮಿನಿ (Mahsa Amini) ಎಂಬ ಯುವತಿ ಜೈಲಿನಲ್ಲಿ ಸಾವನ್ನಪ್ಪಿದ್ದು,

ಪೊಲೀಸರೇ ಮಹಾಸ ಅಮಿನಿ ಸಾವಿಗೆ ಕಾರಣ ಎಂದು ವಿರೋಧಿಸಿ ಇರಾನ್ ಮಹಿಳೆಯರು (Irani Womens) ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

Iran women protest

ಈ ವಾರದ ಆರಂಭದಲ್ಲಿ ಟೆಹ್ರಾನ್‌ನಲ್ಲಿ (Tehran) ಬಂಧನಕ್ಕೊಳಗಾದ ಮಹಾಸ ಅಮಿನಿ ಎಂಬ ಯುವತಿ, ನಂತರ ಕೋಮಾಗೆ ತಲುಪಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆಕೆಯ ಧರಿಸಿದ್ದ ಹಿಜಾಬ್ ನಲ್ಲಿ (Hijab) ತಪ್ಪನ್ನು ಕಂಡು ಹಿಡಿದು ಸ್ಥಳೀಯ ಪೋಲೀಸರು ಆಕೆಯನ್ನು ಕೂಡಲೇ ಬಂಧಿಸಿದ್ದಾರೆ.

ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದಾರೆ, ಹೀಗಾಗಿ ಆಕೆ ಕೆಲ ಸಮಯದ ಬಳಿಕ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ವೈದ್ಯರು ಕೊಟ್ಟಿರುವ ವರದಿ ಅನುಸಾರ ಮಹಾಸ ಅಮಿನಿ, ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಘಟನೆಯು ಹೊರಬರುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶವನ್ನು ಹುಟ್ಟುಹಾಕಿತು.

https://youtu.be/P7WBxHrhndY

ಮಹಸಾ ಅಮಿನಿ ಅವರ ಸಾವಿಗೆ ಕಾರಣರಾದ ಪೊಲೀಸರನ್ನು ಬಿಡಬೇಡಿ! ಶಿಕ್ಷಿಸಿ ಎಂಬ ಪ್ರತಿಭಟನೆ ತೀವ್ರವಾಗಿ ಬುಗಿಲೆದ್ದಿತು. ಸಾವಿರಾರು ಇರಾನಿ ಮಹಿಳೆಯರು ರಾಜಧಾನಿಯಲ್ಲಿ ಪ್ರತಿಭಟನಾ ರ್ಯಾಲಿಗಳನ್ನು ಹಮ್ಮಿಕೊಂಡರು. ಪೊಲೀಸರ ಕ್ರೂರತೆಯನ್ನು ಖಂಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದರು.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು (Videos) ಟೆಹ್ರಾನ್ ವಿಶ್ವವಿದ್ಯಾನಿಲಯದ ಮುಂದೆ “ಮಹಿಳೆ, ಜೀವನ, ಸ್ವಾತಂತ್ರ್ಯ” ಎಂಬ ಘೋಷಣೆಗಳ ಫಲಕವನ್ನು ಹಿಡಿದು ಪ್ರತಿಭಟನೆ ನಡೆಸಿರುವುದನ್ನು ಪ್ರದರ್ಶಿಸಿದೆ.

ಇದನ್ನೂ ಓದಿ : https://vijayatimes.com/sunil-chhetri-has-been-publicly-insulted/

ಹಲವಾರು ಮಹಿಳೆಯರು ಸಾಂಕೇತಿಕ ಪ್ರತಿಭಟನೆಯಲ್ಲಿ ತಮ್ಮ ಹಿಜಾಬ್‌ಗಳನ್ನು ತೆಗೆದು ಪ್ರತಿಭಟನೆ ನಡೆಸಿರುವುದು ಕಂಡುಬಂದಿದೆ. ಅನೇಕ ಇರಾನಿ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುವ ಮತ್ತು ತಮ್ಮ ಹಿಜಾಬ್‌ಗಳಿಗೆ ಬೆಂಕಿ ಹಚ್ಚುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
Exit mobile version