ನಿನ್ನ ಮಗನನ್ನು ಕೊಂದೆ ಎಂದ ಹಮಾಸ್ ಉಗ್ರ: ದೇವರು ಒಳ್ಳೇದು ಮಾಡಲಿ ಎಂದ ಇಸ್ರೇಲ್ ಪ್ರಜೆ!

Israel: ಇಸ್ರೇಲ್ ನಲ್ಲಿ ಸಾವಿರಾರು ಮಂದಿಯನ್ನು ಹತ್ಯೆ ಮಾಡಿದ ಹಮಾಸ್ (Israel Hamas war) ಉಗ್ರರು, ಗಾಜಾ ಪಟ್ಟಿಗೆ 222 ಮಂದಿಯನ್ನು ಒತ್ತೆಯಾಳಾಗಿ ಕರೆದೊಯ್ದಿದ್ದಾರೆ ಅನ್ನೋ

ಮಾಹಿತಿ ಇದ್ದು, ತಮ್ಮೊಂದಿಗೆ ಕರೆದೊಯ್ದ ಒತ್ತೆಯಾಳುಗಳನ್ನು ಒಬ್ಬೊಬ್ಬರನ್ನಾಗಿ ಹತ್ಯೆ ಮಾಡುತ್ತಿದ್ದಾರೆ. ಯುವಕನೊಬ್ಬನ ತಂದೆಗೆ ಮೊಬೈಲ್ ಫೋನ್ (Mobile Phone) ನಿಂದ ಕರೆ ಮಾಡಿದ

ಉಗ್ರ ನಿನ್ನ ಮಗನನ್ನು ಸಾಯಿಸುತ್ತೇನೆ ಎಂದು ಹೇಳಿದಾಗ ತಂದೆಯೂ ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು (Israel Hamas war) ಹಮಾಜ್ ಉಗ್ರನಿಗೆ ಹೇಳಿದ್ದಾನೆ.

ಗಾಜಾ ಪಟ್ಟಿಯಲ್ಲಿ ಹಮಾಜ್ ಉಗ್ರರ ಬರ್ಬರ ಹತ್ಯೆ ಮುಂದುವರೆದಿದ್ದು, ಅಕ್ಟೋಬರ್ (October) 7 ರಂದು ಇಸ್ರೇಲ್ ಗೆ ನುಗಿದ ಸಾವಿರಾರು ಹಮಾಸ್ ಉಗ್ರರು ಈಗಾಗಲೇ ಸುಮಾರು 1400

ಇಸ್ರೇಲಿಗರನ್ನು ಕೊಂದು ಹಾಕಿದಷ್ಟೇ ಅಲ್ಲದೆ ಇನ್ನೂರಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳನ್ನಾಗಿ ಮಾಡಿಕೊಂಡಿದ್ದಾರೆ. ಒತ್ತೆ ಆಳನ್ನಾಗಿ ಮಾಡಿಕೊಂಡಿದ್ದಲ್ಲದೆ ಅವರನ್ನು ಕೂಡ ಉಗ್ರರು ಒಬ್ಬೊಬ್ಬರನೇ

ಕೊಲ್ಲಲು ಆರಂಭಿಸಿದ್ದಾರೆ. ಇಸ್ರೇಲ್ ವಾಯುಪಡೆ ಗಾಜಾ ಪಟ್ಟಿಯ ಮೇಲೆ ನಿರಂತರವಾಗಿ ಬಾಂಬನ್ನು ದಾಳಿ ನಡೆಸುತ್ತಿದೆ.ಒತ್ತೆಯಾಳುಗಳನ್ನು ಕೊಲ್ಲುವುದಷ್ಟೇ ಅಲ್ಲದೆ ಕೊಂದಿರುವ ಮಾಹಿತಿಯನ್ನು

ಅವರ ಕುಟುಂಬಕ್ಕೆ ರವಾನೆ ಮಾಡುತ್ತಾ ಬಂದಿದೆ.


ಇಸ್ರೇಲ್ ನಾ ದಂಪತಿಗೆ ಹಮಾಜ್ ಉಗ್ರರು ಆಡಿಯೋ (Audio) ಸಂದೇಶ ಒಂದನ್ನು ರವಾನೆ ಮಾಡಿದ್ದಾರೆ. ಅದರಲ್ಲಿ ಯಹೂದಿಯ ಒಬ್ಬ ಮಗನನ್ನು ಕೊಂದು ಅವರ ಅಪ್ಪನ ಬಳಿ ನಿನ್ನ ಮಗನನ್ನು

ಕೊಂದೆ ಎಂದು ಹೇಳಿದ್ದಾರೆ. ಕೊಲೆಯನ್ನು ಮಾಡಿ ಈ ಮಾಹಿತಿಯನ್ನು ರವಾನಿಸಿದಾಗ ಮೃತಪಟ್ಟ ಮಗನ ತಂದೆ ದೇವರು ನಿನಗೆ ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದಾರೆ. ಈ ಘಟನೆಯನ್ನು ಉಗ್ರರು

ಮಾಧ್ಯಮದ ಜೊತೆಗೆ ಹಂಚಿಕೊಂಡಿದ್ದಾರೆ.

ನಾನು ಎಷ್ಟು ಮಂದಿ ಹುಲಿಗಳನ್ನು ನನ್ನ ಕೈಗಳಿಂದ ಹತ್ಯೆ ಮಾಡಿದ್ದೇನೆ ಗೊತ್ತಾ? ನಿನ್ನ ಮಗನನ್ನು ಕೊಂದಿದ್ದೇನೆ ಯಹೂದಿ ತಂದೆಯೇ ಎಂದು ಹಮಾಸ್ ಉಗ್ರ ನಾಯಕ ಎಂದು ಹೇಳಿಕೊಳ್ಳುವ ವ್ಯಕ್ತಿ

ಮಾತನಾಡುವ ಆಡಿಯೋ ಅನ್ನು ಇಸ್ರೇಲ್ ಸೇನೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಯುವಕನ ತಂದೆಯೊಂದಿಗೆ ಮಾತನಾಡುತ್ತಿದ್ದ ಉಗ್ರ ತನ್ನ ಪತ್ನಿಯ ಬಳಿ ಫೋನ್ ಕೊಡಲು ಕೇಳಿದ, ‘ನಿನ್ನ ಮಗನನ್ನು ಕೊಂದಿದ್ದೇನೆ ‘ಎಂದಾಗ ಅವಳು ನನ್ನ ಮಗ ಹೀರೋ, ನನ್ನ ಮಗ ವಾಪಸ್

ಬರುವುದಾಗಿ ಪ್ರಾಮಿಸ್ ಮಾಡಿದ್ದಾನೆ ಎಂದು ಕಣ್ಣೀರಿಟ್ಟಳು. ಹಮಾಸ್ ಉಗ್ರರು ಇಸ್ರೇಲ್ ಪ್ರಜೆಗಳನ್ನು ಗಾಜಾ ಪಟ್ಟಿಗೆ ಒತ್ತೆಯಾಳಾಗಿ ಕರೆದುಕೊಂಡು ಬರುವವರಿಗೆ 10 ಸಾವಿರ ಡಾಲರ್ ಬಹುಮಾನ

ಮತ್ತು ಒಂದು ಅಪಾರ್ಟ್ಮೆಂಟ್ (Apartment) ಕೊಡೋದಾಗಿ ಹೇಳಿದ್ದರು.

ಅಕ್ಟೋಬರ್ 7ರಂದು .1400 ಇಸ್ರೇಲ್ ಪ್ರಜೆಗಳನ್ನು ಹತ್ಯೆ ಮಾಡಿ, 200 ಜನರನ್ನು ಓತ್ತೆಯಳಾಗಿ ಮಾಡಿಕೊಂಡು ಬಂದ ಬಳಿಕ ಇಸ್ರೇಲ್ ವಾಯುಪಡೆ ಗಾಜಾ ಪಟ್ಟಿ ಮೇಲೆ ನಿರಂತರ ಬಾಂಬ್ ದಾಳಿ

ನಡೆಸುತ್ತಿದೆ ಈವರೆಗೂ ಗಜ ಪಟ್ಟಿಯಲ್ಲಿ 5000ಕ್ಕೂ ಹೆಚ್ಚು ಪಾಲಸ್ತೀನಿ ಪ್ರಜೆಗಳು ಮರಣ ಹೊಂದಿದ್ದಾರೆ.

ಇದನ್ನು ಓದಿ: ಸಾರ್ವಜನಿಕರ ಆಕ್ರೋಶ: ಬಡವರಿಗೆ ಒಂದು ನ್ಯಾಯ? ಸೆಲೆಬ್ರಿಟಿಗಳಿಗೆ ಇನ್ನೊಂದು ನ್ಯಾಯನಾ?

Exit mobile version