“ನಮ್ಮ ಸುರಕ್ಷತೆಗಾಗಿ, ನಮ್ಮ ಹೋರಾಟ ಮುಂದುವರೆಯುತ್ತದೆ” ; ಕದನ ವಿರಾಮಕ್ಕೆ ನೋ ಎಂದ ಇಸ್ರೇಲ್..!

Tel Aviv-Yafo : ಕದನ ವಿರಾಮಕ್ಕಾಗಿ ಹೆಚ್ಚುತ್ತಿರುವ ಅಂತರಾಷ್ಟ್ರೀಯ (Israel says no to ceasefire) ಒತ್ತಡದ ಮಧ್ಯೆಯೂ ಗಾಜಾ ಮೇಲಿನ ಯುದ್ಧವು ನಿಲ್ಲುವುದಿಲ್ಲ. ನಮ್ಮ ಸುರಕ್ಷತೆಗಾಗಿ ನಮ್ಮ

ಹೋರಾಟ ಮುಂದುವರೆಯುತ್ತದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು (Israeli Prime Minister Netanyahu) ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹೆಚ್ಚುತ್ತಿರುವ ನಾಗರಿಕ ಸಾವುಗಳು ಮತ್ತು ಗಾಜಾದಲ್ಲಿ (GAZA) ಹದಗೆಡುತ್ತಿರುವ ಮಾನವೀಯ ದುರಂತದಿಂದಾಗಿ ಇಸ್ರೇಲ್ ರಾಜತಾಂತ್ರಿಕ

ಪ್ರತ್ಯೇಕತೆಯನ್ನು ಎದುರಿಸುತ್ತಿದೆ. ಜಾಗತಿಕ ಒತ್ತಡದ ಹೊರತಾಗಿಯೂ ನಮ್ಮ ಹೋರಾಟವು ಮುಂದುವರೆಯುತ್ತದೆ. ಕದನ ವಿರಾಮಕ್ಕಾಗಿ ಅಂತಾರಾಷ್ಟ್ರೀಯ (International pressure) ಒತ್ತಡ ಹೆಚ್ಚಿದ್ದರೂ

ಗಾಜಾದಲ್ಲಿ ನಮ್ಮ ಸೇನೆಯು ಹೋರಾಟವನ್ನು ಮುಂದುವರಿಸಲಿದೆ. ನಾವು ಕೊನೆಯವರೆಗೂ ಮುಂದುವರಿಯುತ್ತೇವೆ ಎಂಬುವುದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ನಾನು ಇದನ್ನು ತೀವ್ರ ನೋವಿನ ಬೆಳಕಿನಲ್ಲಿ

ಹೇಳುತ್ತಿದ್ದೇನೆ. ನಾವು ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸುತ್ತೇವೆ ಎಂದು (Israel says no to ceasefire) ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.

ಇನ್ನು ಗಾಜಾದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಬೇಷರತ್ತಾದ ಬಿಡುಗಡೆಗೆ ಒತ್ತಾಯಿಸಿ ವಿಶ್ವಸಂಸ್ಥೆಯ (United Nations) ಸಾಮಾನ್ಯ ಸಭೆಯು

ನಿರ್ಣಯವನ್ನು ಅಂಗೀಕರಿಸಿದ ಒಂದು ದಿನದ ನಂತರ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಈ ಹೇಳಿಕೆ ಬಂದಿದೆ. ಯುಎನ್ ಜನರಲ್ ಅಸೆಂಬ್ಲಿಯಲ್ಲಿ (UN General Assembly) ಕದನ ವಿರಾಮಕ್ಕೆ ಕರೆ

ನೀಡುವ ನಿರ್ಣಯ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡೆನ್ (US President Joe Biden) ಅವರ “ವಿವೇಚನಾರಹಿತ ಬಾಂಬ್ ದಾಳಿಯ ಹೇಳಿಕೆ” ನಂತರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಅವರು ಅಂತರರಾಷ್ಟ್ರೀಯ ಒತ್ತಡದ ಹೊರತಾಗಿಯೂ ಗಾಜಾದಲ್ಲಿ ಸೇನೆಯ ದಾಳಿಯನ್ನು ಮುಂದುವರೆಸುತ್ತಾರೆ ಎಂದು ಹೇಳಿದರು.

ಹಮಾಸ್ ಮತ್ತು ಇಸ್ರೇಲಿ (Hamas and Israel) ಸೈನಿಕರ ನಡುವೆ ತೀವ್ರವಾದ ಹೋರಾಟವು ಉತ್ತರ ಮತ್ತು ದಕ್ಷಿಣ ಗಾಜಾದಲ್ಲಿ ನಡೆಯುತ್ತಿದೆ. ಈ ನಡುವೆ ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ

ಜೇಕ್ ಸುಲ್ಲಿವಾನ್ (Jake Sullivan) ಈ ವಾರ ಇಸ್ರೇಲ್ಗೆ ಭೇಟಿ ನೀಡುವ ನಿರೀಕ್ಷೆಯಿದೆ. ನಾಗರಿಕ ಸಾವುನೋವುಗಳ ಬಗ್ಗೆ ಇಸ್ರೇಲಿ ಅಧಿಕಾರಿಗಳೊಂದಿಗೆ ಅತ್ಯಂತ ಗಂಭೀರ ಸಂಭಾಷಣೆ ನಡೆಸಲಿದ್ದಾರೆ

ಎಂದು ಶ್ವೇತಭವನ (The White House) ತಿಳಿಸಿದೆ.

ಸುಲ್ಲಿವಾನ್ ಅವರು ಬುಧವಾರ ಸೌದಿ ಅರೇಬಿಯಾದಲ್ಲಿ (Saudi Arabia) ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ (Saudi Prince Mohammed bin Salman) ಅವರನ್ನು ಭೇಟಿ

ಮಾಡಿದ್ದು, ಗಾಜಾ ಸಂಘರ್ಷ ಮತ್ತು ಇತರ ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇದನ್ನು ಓದಿ: ಬೊಮ್ಮಾಯಿ ಸೋಲಿಸಲು ಹಣ ಕಳುಹಿಸಿದ್ದ ವಿಜಯೇಂದ್ರ: ಯತ್ನಾಳ್ ವಾಗ್ದಾಳಿ

Exit mobile version