New Delhi: ವಿಶ್ವದಾದ್ಯಂತ ಹೊಸ ವರ್ಷದ #NewYear ಸಂಭ್ರಮ ಮನೆ ಮಾಡಿದ್ದು, ಮೊದಲ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಕಪ್ಪು ಕುಳಿಗಳ ಹಾಗೂ ನ್ಯೂಟ್ರಾನ್ ನಕ್ಷತ್ರಗಳ ಬಗ್ಗೆ ಅಧ್ಯಯನ ನಡೆಸಲು ಎಕ್ಸ್ – ರೇ ಪೋಲಾರ್ಮೀಟರ್ ಉಪಗ್ರಹವನ್ನು (XpoSat) ಇಂದು (ಜ.1) ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಇಸ್ರೋದ (ISRO) ಮಹತ್ವಾಕಾಂಕ್ಷಿ ಯೋಜನೆಗಳಾದ ಚಂದ್ರಯಾನ-3, ಆದಿತ್ಯ ಎಲ್-1 (Chandrayaan-3, AdityaL-1) ಯಶಸ್ಸಿನ ಬೆನ್ನಲ್ಲೆ ಮತ್ತೊಂದು ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಸಂಶೋಧನೆಗೆ ಮುಂದಾಗಿರುವ ಇಸ್ರೋದ ಈ ಮಹತ್ತರ ಪ್ರಯತ್ನದಿಂದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಬಳಿಕ ಕಪ್ಪು ಕುಳಿಗಳ (Black Hole) ಅಧ್ಯಯನಕ್ಕೆ ಮುಂದಾದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ..
ಆಂಧ್ರಪ್ರದೇಶದ (Andrapradesh) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಬೆಳಗ್ಗೆ 9.10ಕ್ಕೆ ಎಕ್ಸ್ಪೋಸ್ಯಾಟ್ ಉಡಾವಣೆ ಆಗಿದ್ದು, ಬ್ರಹ್ಮಾಂಡದ ಕುರಿತು ಶತಮಾನಗಳಿಂದ ಇರುವ ನಿಗೂಢತೆಯನ್ನು ಭೇದಿಸುವ ಪ್ರಯತ್ನಿಸುವ ಹೊಸ ಯೋಜನೆಯೊಂದಿಗೆ ಇಸ್ರೋ ಮತ್ತೆ ವಿಶ್ವದ ಗಮನ ಸೆಳೆದಿದೆ.
ಈ ರಾಕೆಟ್ (Rocket) ಅತ್ಯಾಧುನಿಕ ಖಗೋಳ ವೀಕ್ಷಣಾ ತಂತ್ರಜ್ಞಾನವನ್ನು ಒಳಗೊಂಡಿದ್ದು, 260 ಟನ್ ತೂಕದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಸೋಮವಾರ ತನ್ನ 60ನೇ ಹಾರಾಟವನ್ನು ಆರಂಭಿಸಿದೆ. ಇದು ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ (Neutron Star) ಅಧ್ಯಯನಕ್ಕೆ ಮೀಸಲಾಗಿದೆ.
ಈ ವಿಕಿರಣಗಳ ಅಧ್ಯಯನಕ್ಕೆ ಎಕ್ಸ್ -ರೇ ಪೋಟಾನ್ಗಳು (X-ray Photon) ಮತ್ತು ಅವುಗಳ ಧ್ರುವೀಕರಣವನ್ನು ಬಳಸಿಕೊಂಡು, ಕಪ್ಪು ಕುಳಿಗಳು ಹಾಗೂ ನ್ಯೂಟ್ರಾನ್ ನಕ್ಷತ್ರಗಳ ಸಮೀಪದಿಂದ ಎಕ್ಸ್ಪೋ ಸ್ಯಾಟ್ ಸಹಾಯ ಮಾಡಲಿದ್ದು, ಇದು ಪೋಲಿಕ್ಸ್ (ಪೋಲಾರಿಮೀಟರ್ ಇನ್ಸ್ಟ್ರುಮೆಂಟ್ ಇನ್ ಎಕ್ಸ್ ರೇ) ಮತ್ತು ಎಕ್ಸ್ಪೆಕ್ಟ್ (ಎಕ್ಸ್- ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಎಂಬ ಎರಡು ಪೇ ಲೋಡ್ಗಳನ್ನು ಕೊಂಡೊಯ್ದಿದೆ.
ಭವ್ಯಶ್ರೀ ಆರ್ ಜೆ