ಚಂದ್ರಯಾನ ಬೆನ್ನಲ್ಲೇ ಗಗನಯಾನಕ್ಕೆ ಮಾನವ ಜಿಗಿತಕ್ಕೆ ಇಸ್ರೋ ಸಜ್ಜು

ಚಂದ್ರಯಾನದ ಯಶಸ್ಸಿನ ಅಲೆಯಲ್ಲಿ ಮುಳುಗಿದೆ ಇಡೀ ದೇಶ. ಆದ್ರೆ ಇಸ್ರೋ ಕೇವಲ ಈ ಯೋಜನೆಯೊಂದರ ಮೇಲಷ್ಟೇ ನಿಗಾ (ISRO scientists for space flight) ವಹಿಸಿಲ್ಲ.

2024ರ ಗಗನಯಾನಕ್ಕೆ ಇಸ್ರೋ ವಿಜ್ಞಾನಿಗಳ ಇನ್ನೊಂದು ತಂಡ ಸದ್ದಿಲ್ಲದೆ ತಯಾರಿ ನಡೆಸುತ್ತಿದೆ. ಆರಂಭದಲ್ಲಿ ‘ವೋಮಮಿತ್ರ’ (ommitra) ಎಂಬ ಮಾನವ ಪ್ರತಿಕೃತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿ,

ಸುರಕ್ಷತೆಯನ್ನು ಖಾತರಿ ಪಡಿಸಿಕೊಂಡ ಬಳಿಕ ಮೂವರು ಗಗನಯಾತ್ರಿಕರನ್ನು ಬಾಹ್ಯಾಕಾಶಕ್ಕೆ (ISRO scientists for space flight) ಕಳುಹಿಸಲಿದೆ.

ಚಂದ್ರಯಾನದ (Chandrayaana) ರಾಕೆಟ್‌ ಗಗನಕ್ಕೆ ಹಾರಿದ ಬಳಿಕವು ಆಗಾಗ ಆಕಾಶ ನೋಡುತ್ತಲೇ ಇದ್ದೇವೆ. ಜೀವವೇ ಇಲ್ಲದ ವಸ್ತುವಿನ ಬಗ್ಗೆಯೇ ನಮಗೆಷ್ಟು ಮುಗಿಯದ ಕುತೂಹಲ, ಎಲ್‌ವಿಎಂ3 ಬಾಹುಬಲಿ ರಾಕೆಟ್‌ನ

ಶೋಲ್ಡರ್ ಮೇಲೆ ಚಿಕ್ಕ ಮಗುವಿನಂತೆ ಕೂತು ಕಕ್ಷೆ ಸೇರಿದ ನೌಕೆ ಆಕಾಶದಲ್ಲಿ ಎಲ್ಲಿ/ಹೇಗೆ ಸಂಚರಿಸುತ್ತಿರಹುದೆಂದು ಕುತೂಹಲ ಉಂಟು ಮಾಡಿದೆ. ಇನ್ನು ನಮ್ಮಂತೆ ಕಣ್ಣು, ಮೂಗು, ಕೈಕಾಲು, ಹೃದಯವಿರುವ

ಮನುಷ್ಯ ಜೀವಿ ಬಾಹ್ಯಾಕಾಶದಲ್ಲಿ ಹಾರಾಟ ಮಾಡಿದರೆ, ಮೂರ್ನಾಲ್ಕು ದಿನ ಅಲ್ಲಿಯೇ ಕಳೆದರೆ ಹೇಗಿರಬಹುದು ಅಲ್ವಾ, ನಾವೆಲ್ಲ ಚಂದ್ರಯಾನದ ಗುಂಗಿನಲ್ಲಿ ಮುಳುಗಿರುವಾಗ, ಅದೇ ಇಸ್ರೋ

‘ಮಾನವಸಹಿತ ಗಗನಯಾನ’ಕ್ಕೆ ಇನ್ನೊಂದು ಕಡೆಯಲ್ಲಿ ಸದ್ದಿಲ್ಲದೆ ತಯಾರಿ ಮಾಡುತ್ತಿದೆ .

ಇಸ್ರೋ ಹಾಕಿಕೊಂಡಿರುವ ಯೋಜನೆಯಂತೆ ಎಲ್ಲಾ ನಡೆದರೆ 2024ರ ಆರಂಭದಲ್ಲಿ ‘ಗಗನಯಾನ’ ನಡೆಯಲಿದೆ. ಈಗಾಗಲೇ ರಷ್ಯಾದಲ್ಲಿ (Russia)13 ತಿಂಗಳು ತರಬೇತಿಗೊಂಡಿರುವ ಭಾರತೀಯ

ವಾಯುಪಡೆಯ ನಾಲ್ವರು ಪೈಲಟ್‌ಗಳು ಬೆಂಗಳೂರಿಗೆ ಮರಳಿದ್ದಾರೆ. ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ, ಬಾಹ್ಯಾಕಾಶ ಯಾತ್ರೆ ವಿಚಾರದಲ್ಲಿ ರಷ್ಯಾ ಹೊಂದಿರುವ ಅನುಭವ

ಅತ್ಯಂತ ಗಾಢ. ಭುವಿಯಿಂದ 400 ಕಿ.ಮೀ. ಎತ್ತರದ ಗುರುತ್ವಾಕರ್ಷಣೆ ಇಲ್ಲದ ವಲಯದಲ್ಲಿ ಸುರಕ್ಷಿತ ಹಾರಾಟದ ಕಲಿಕೆ ನಮ್ಮ ಗಗನಯಾತ್ರಿಕರಿಗೆ ಸಿಕ್ಕಿದೆ.

ಭಾರತದೊಂದಿಗೆ 6ಕ್ಕೂ ಹೆಚ್ಚು ದೇಶಗಳು ಗಗನಯಾನ ಮಿಷನ್‌ಗೆ ಕಾರ್ಯ ನಿರ್ವಹಿಸುತ್ತಿವೆ. ಗಗನಯಾತ್ರೆಗೆ ಆಯ್ಕೆಯಾದ ನಾಲ್ವರು ಪೈಲಟ್‌ಗಳಿಗೆ ರಷ್ಯಾ ತರಬೇತಿ ನೀಡಿದರೆ, ಅವರ ಆರೋಗ್ಯ- ಮೆಡಿಕಲ್‌

ಅಗತ್ಯಗಳ ಮೇಲ್ವಿಚಾರಣೆಗಾಗಿ ಭಾರತೀಯ ವೈದ್ಯರ ತಂಡಕ್ಕೆ ಫ್ರಾನ್ಸ್‌ ತರಬೇತಿ ನೀಡುತ್ತಿದೆ. ಅಂದರೆ ಶೂನ್ಯ ಗುರುತ್ವದ ತಾಣದಲ್ಲಿ ಗಗನಯಾತ್ರಿಗಳು ತೇಲುವಾಗ ಆಗುವಂಥ ಅನುಭವ, ಎದುರಾಗುವ

ಸವಾಲುಗಳನ್ನು ವಿಂಡ್‌ ಟನಲ್‌ಗಳಿಂದ ಪಡೆಯಲು ವಿಂಡ್‌ ಟನಲ್‌ ಟೆಕ್ನಾಲಜಿಯನ್ನು ಕೆನಡಾ ಮತ್ತು ರೊಮೇನಿಯಾ ರಾಷ್ಟ್ರಗಳು ಪೂರೈಸಿವೆ. ಇನ್ನು ಆಸ್ಪ್ರೇಲಿಯಾ ಹಾಗೂ ಯುರೋಪಿಯನ್‌ ಸ್ಪೇಸ್‌

ಏಜೆನ್ಸಿ ಗ್ರೌಂಡ್‌ ಸ್ಟೇಷನ್‌ ಸಪೋರ್ಟ್‌ ನೀಡುತ್ತಿದೆ.

ಗಗನಯಾತ್ರಿಕರಿಗೆ ಬೆಂಗಳೂರಿನ ಮಾರತಹಳ್ಳಿಯ ಇಸ್ರೋ ಆವರಣದಲ್ಲಿ ತರಬೇತಿ ನಡೆಯುತ್ತಿದ್ದು, ಇಲ್ಲಿ ದೈಹಿಕ ತರಬೇತಿ, ಸಿಮ್ಯುಲೇಟರ್‌ ಟ್ರೈನಿಂಗ್‌, ಫ್ಲೈಟ್‌ ಸೂಟ್‌ ಟ್ರೈನಿಂಗ್‌ಗಳನ್ನು ನೀಡಲಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ-3ರ ನೌಕೆ ಅಂದರೆ ಎಲ್‌ವಿಎಂ-3 (ಎಂಕೆ-3) ರಾಕೆಟ್‌ ಯಶಸ್ವಿಯಾಗಿ ನಭೋಮಂಡಲಕ್ಕೆ ಚಿಮ್ಮಿದೆ. ಇದೇ ರಾಕೆಟ್‌ನ ಮಾರ್ಪಡಿಸಿದ ಆವೃತ್ತಿಯನ್ನು ಗಗನಯಾನಕ್ಕೆ ಬಳಸಲಾಗುತ್ತದೆ.

ಗಗನಯಾನದ ಮೂವರು ಯಾತ್ರಿಕರು ಚಂದ್ರಯಾನದ ರೋವರ್‌ ಮತ್ತು ಲ್ಯಾಂಡರ್‌ ಕುಳಿತ ಜಾಗದಲ್ಲೇ ಕೂರಲಿದ್ದಾರೆ. ಭಾರತದ ಬಳಿಯಿರುವ ಅತ್ಯಂತ ಹೆಚ್ಚು ವಿಶ್ವಾಸಾರ್ಹ ಹೆವಿ ರಾಕೆಟ್‌ ಇದು.

ಅಲ್ಲದೆ ಜಗತ್ತಿನ ಹ್ಯೂಮನ್‌ ರೇಟೆಡ್‌ ಸಿಸ್ಟಮ್‌ ಅಳವಡಿಕೆಯಾಗದ ಕೆಲವೇ ಕೆಲವು ರಾಕೆಟ್‌ಗಳಲ್ಲಿ ಈ ಸ್ವದೇಶಿ ನಿರ್ಮಿತ ಎಲ್‌ವಿಎಂ-3 (ಎಂಕೆ-3) ರಾಕೆಟ್‌ ಕೂಡ ಒಂದು.

ಎಲ್‌ವಿಎಂ-3 ರಾಕೆಟ್‌ನ ಯಶಸ್ಸಿನ ಪ್ರಮಾಣ ಶೇ.100ರಷ್ಟು! ಅಮೆರಿಕ ನಿರ್ಮಿತ ಅಪೊಲೊ ರಾಕೆಟ್‌ಗಳು, ಸ್ಪೇಸ್‌ ಎಕ್ಸ್‌, ಪಾಲ್ಕನ್‌-9, ಬೋಯಿಂಗ್‌ ಕಂಪನಿಯ ಸ್ಟಾರ್‌ಲೈನ್‌ (Starline)

ರಾಕೆಟ್‌ಗಳೂ ಇದೇ ದರ್ಜೆಯದ್ದಾಗಿದೆ. ಎಲ್‌ವಿಎಂ-3 ರಾಕೆಟ್‌ನ ಯಶಸ್ಸಿನ ಪ್ರಮಾಣ ಶೇ.100ರಷ್ಟಿದ್ದು, ಮಾನವನನ್ನು ಹೊತ್ತೊಯ್ಯುವ ರಾಕೆಟ್‌ ಎಲ್ಲ ಸುರಕ್ಷಿತ ವ್ಯವಸ್ಥೆಗಳನ್ನು ಹೊಂದಿದ್ದರಷ್ಟೇ

ಅದನ್ನು ‘ಹ್ಯೂಮನ್‌ ರೇಟೆಡ್‌ ಸಿಸ್ಟಮ್‌’ ವರ್ಗಕ್ಕೆ ಸೇರಿಸಲಾಗುತ್ತದೆ.

ಗಗನಯಾತ್ರಿಕರನ್ನು ಹೊತ್ತೊಯ್ಯುವಾಗ ಒಂದು ವೇಳೆ ತೊಂದರೆಯಾದರೆ, ತಕ್ಷಣ ಕಾರ್ಯಾಚರಣೆ ಸ್ಥಗಿತಗೊಳಿಸಿ ಗಗನಯಾತ್ರಿಕರು ಕುಳಿತ ಕ್ಯಾಪ್ಸೂಲನ್ನು ಸುರಕ್ಷಿತಗೊಳಿಸುವ ವ್ಯವಸ್ಥೆ ಇವುಗಳಲ್ಲಿರುತ್ತದೆ.

ಗಗನಯಾತ್ರಿಕರು ಕುಳಿತ ಕ್ಯಾಪ್ಸೂಲ್‌, ರಾಕೆಟ್‌ನಿಂದ ಬೇರ್ಪಟ್ಟು, ಯಾತ್ರಿಕರು ಬಾಹ್ಯಾಕಾಶಕ್ಕೆ ಧುಮುಕುವಾಗಲೂ ಇಲ್ಲಿನ ತಂತ್ರಜ್ಞಾನ (Technology) ಸುರಕ್ಷತೆಯಾಗಿರುತ್ತದೆ.

ಇತ್ತೀಚೆಗಷ್ಟೇ ಇಸ್ರೋ ಮುಖ್ಯಸ್ಥ ಡಾ.ಎಸ್‌. ಸೋಮನಾಥ್‌ ಅವರು ”ಮನುಷ್ಯನನ್ನು ಸುರಕ್ಷಿತವಾಗಿ ಸಾಗಿಸಲು ಸಾಧ್ಯವಾಗುವವರೆಗೂ ಗಗನಯಾನ ಉಡಾವಣಾ ವಾಹನ ಪರೀಕ್ಷೆ ಪೂರ್ಣಗೊಳಿಸಲಾಗಿದೆ,”

ಎಂದು ಹೇಳಿದ್ದರು. ರಾಕೆಟ್‌ನ ಪೊ›ಪಲ್ಷನ್‌ ಮಾಡ್ಯೂಲ್, ಘನ, ದ್ರವ ಮತ್ತು ಕ್ರಯೋಜೆನಿಕ್‌ ಮಾಡ್ಯೂಲ್‌ಗಳ ಪರೀಕ್ಷೆಯನ್ನೂ ಇಸ್ರೋ ಯಶಸ್ವಿಯಾಗಿ ಮುಗಿಸಿದೆ.

ಧೈರ್ಯವಂತ ಪೈಲಟ್‌ಗಳೇ ಗಗನಯಾತ್ರಿಕರು:
ಬಾಹ್ಯಾಕಾಶ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲ ದೇಶಗಳು ಆಯಾ ರಾಷ್ಟ್ರದ ವಾಯುಪಡೆಯ ಅನುಭವಿ ಪೈಲಟ್‌ಗಳನ್ನೇ ಗಗನಯಾನಕ್ಕೆ ಹೆಚ್ಚು ಆರಿಸಿಕೊಳ್ಳುತ್ತವೆ. ಯೂರಿ ಗಗಾರಿನ್‌,

ನೀಲ್‌ ಆರ್ಮ್‌ಸ್ಟ್ರಾಂಗ್‌ನಿಂದ ಹಿಡಿದು ಭಾರತದ ರಾಕೇಶ್‌ ಶರ್ಮಾವರೆಗೆ ಎಲ್ಲರೂ ಪೈಲಟ್‌ಗಳೇ. ನೂರಾರು ಅಥವಾ ಸಹಸ್ರಾರು ಕಿ.ಮೀ. ಎತ್ತರದಿಂದ ಹಾರಾಟ ಮಾಡಲೂ ಹೆಚ್ಚು ಧೈರ್ಯ ಹೊಂದಿರಬೇಕು.

ಇಸ್ರೋ ಕೂಡ ಅಂಥ ಸ್ಟ್ರಾಂಗ್ ಇರುವಂತಹ ಪೈಲಟ್‌ಗಳನ್ನು ಗಗನಯಾನಕ್ಕೆ ಆರಿಸಿಕೊಂಡಿದೆ.

ಭವ್ಯಶ್ರೀ ಆರ್.ಜೆ

Exit mobile version