ಗರ್ಭಿಣಿಯರೇ, ಈ ಮನೆಕೆಲಸಗಳಿಂದ ದೂರವಿರವುದು ಉತ್ತಮ

ಗರ್ಭಾವಸ್ಥೆಯು ಮಹಿಳೆಯ ಜೀವನದ ಅತ್ಯಂತ ಪ್ರಮುಖ ಹಂತ. ನಿಮ್ಮ ಗರ್ಭದೊಳಗೆ ಹೊಸ ಜೀವನವನ್ನು ಇಟ್ಟುಕೊಂಡಿರುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಏನೇ ಮಾಡಿದರೂ ಅದು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಪಾಯಕಾರಿಯಾದ ಯಾವುದೇ ಚಿಕ್ಕ ತಪ್ಪನ್ನು ಮಾಡಬಾರದು. ಪ್ರತಿದಿನ ನೀವು ತಿನ್ನುವುದನ್ನು ಮೌಲ್ಯಮಾಪನ ಮಾಡಬೇಕಾಗಿಲ್ಲ ಆದರೆ ನೀವು ಗರ್ಭಿಣಿಯಾಗಿದ್ದಾಗ ನೀವು ಮಾಡುವ ಚಟುವಟಿಕೆಗಳನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕು. ಆ ನಿರ್ಣಾಯಕ ದಿನಗಳಲ್ಲಿ ಪ್ರತಿ ಗರ್ಭಿಣಿಯರು ತಪ್ಪಿಸಬೇಕಾದ 5 ಮನೆಕೆಲಸಗಳನ್ನು ನಾವು ಪಟ್ಟಿ ಮಾಡಿದ್ದೇವೆ.

ಗರ್ಭಿಣಿಯರು ತಪ್ಪಿಸಬೇಕಾದ ಮನೆಕೆಲಸಗಳ ಪಟ್ಟಿ ಇಲ್ಲಿದೆ:
ಭಾರವಾದ ವಸ್ತುಗಳನ್ನು ಎತ್ತಬೇಡಿ:

ಮೊದಲ ಮೂರುತಿಂಗಳ ನಂತರ, ಹೆವಿ ಭಾರವಿರುವ ವಸ್ತುವನ್ನು ಎತ್ತುವ ಅಥವಾ ಭಾರವಾದ ವಸ್ತುವನ್ನು ಚಲಿಸುವಂತಿರುವ ಯಾವುದೇ ಕೆಲಸವನ್ನು ಮಾಡಬೇಡಿ. ಈ ಕೆಲಸಗಳನ್ನು ಮಾಡುವುದರಿಂದ ಬೆನ್ನುನೋವು ಮತ್ತು ಗಾಯದ ಅಪಾಯ ಹೆಚ್ಚಾಗುತ್ತದೆ. ಏಕೆಂದರೆ ಗರ್ಭಾವಸ್ಥೆಯಲ್ಲಿ ಸಂಭವಿಸುವ ಹಾರ್ಮೋನುಗಳ ಬದಲಾವಣೆಯಿಂದಾಗಿ ನಿಮ್ಮ ಕೀಲುಗಳ ಸಡಿಲಗೊಳ್ಳುತ್ತವೆ, ಇದರಿಂದಾಗಿ ನೀವು ಗಾಯಗಳಿಗೆ ಹೆಚ್ಚು ಒಳಗಾಗುತ್ತೀರಿ.

ತುಂಬಾ ಹೊತ್ತು ನಿಂತಿರಬೇಡಿ:
ನೀವು ದೀರ್ಘಕಾಲದವರೆಗೆ ನಿಲ್ಲಬೇಕಾದ ಯಾವುದೇ ಕಾರ್ಯವನ್ನು ತಪ್ಪಿಸಬೇಕು. ಹೆಚ್ಚಿನ ಮಹಿಳೆಯರು ಆಯಾಸ ಅಥವಾ ಮಾರ್ನಿಂಗ್ ಸಿಕ್ ನೆಸ್ ನಿಂದ ಬಳಲುತ್ತಿರುವಾಗ ಬೆಳಿಗ್ಗೆ ಇದನ್ನು ಅನುಸರಿಸುವುದು ಬಹಳ ಮುಖ್ಯ. ದೀರ್ಘಕಾಲ ನಿಂತು ನಿಮ್ಮ ಕಾಲುಗಳ ಮೇಲೆ ಒತ್ತಡವನ್ನು ಹಾಕಬಾರದು. ಅದು ಊತ ಮತ್ತು ಬೆನ್ನುನೋವಿಗೆ ಕಾರಣವಾಗುತ್ತದೆ. ನೀವು ಅಡುಗೆ ಮಾಡಬೇಕಾದರೆ, ವಿರಾಮಗಳನ್ನು ತೆಗೆದುಕೊಳ್ಳಿ ಮತ್ತು ಬಹಳ ಸಮಯದವರೆಗೆ ನಿಲ್ಲಬೇಡಿ.

ಬಾಗುವುದನ್ನು ತಪ್ಪಿಸಿ:
ಗರ್ಭಾವಸ್ಥೆಯಲ್ಲಿ ಬಾಗುವಿಕೆ ಅಗತ್ಯವಿರುವ ಬಟ್ಟೆ ಒಗೆಯುವುದು, ನೆಲ ಮತ್ತು ಸ್ವಚ್ಛಗೊಳಿಸುವುದನ್ನು ಶಿಫಾರಸು ಮಾಡುವುದಿಲ್ಲ. ಗರ್ಭಧಾರಣೆಯ ತೂಕ ಹೆಚ್ಚಳವು ದೇಹದ ಗುರುತ್ವಾಕರ್ಷಣೆಯ ಕೇಂದ್ರದಲ್ಲಿ ಸ್ವಲ್ಪ ಬದಲಾವಣೆಗೆ ಕಾರಣವಾಗಬಹುದು ಮತ್ತು ಈ ಸಮಯದಲ್ಲಿ ಬಾಗುವುದು ಸಿಯಾಟಿಕ್ ನರಕ್ಕೆ ಅಪಾಯಕಾರಿಯಾಗಿದೆ (ಬೆನ್ನಿನ ಹಿಂಭಾಗದಿಂದ ಕಾಲಿಗೆ ಚಲಿಸುತ್ತದೆ). ಆದ್ದರಿಂದ, ಯಾವುದೇ ಕಾರ್ಯವನ್ನು ನಿರ್ವಹಿಸುವಾಗ ನಿಮಗೆ ಅನಾನುಕೂಲವಾಗಿದ್ದರೆ ತಕ್ಷಣ ನಿಲ್ಲಿಸಿ.

ಹತ್ತುವುದು ಅಥವಾ ಬ್ಯಾಲೆನ್ಸಿಂಗ್ ಕಾರ್ಯ ಮಾಡಬೇಡಿ:
ನಿಮ್ಮೊಳಗೆ ಮತ್ತೊಂದು ಜೀವದ ಭಾರವನ್ನು ನೀವು ಹೊತ್ತಿರುವಾಗ ಮೇಲೆ ಹತ್ತುವುದು ಅಥವಾ ಏಣಿಯ ಮೇಲೆ ಏರುವುದು ಕೆಟ್ಟ ಆಲೋಚನೆಯಾಗಿದೆ. ಹೆಚ್ಚುವರಿ ತೂಕವನ್ನು ಹೊಂದುವುದು ನಿಮ್ಮ ಒಟ್ಟಾರೆ ಬ್ಯಾಲನ್ಸ್ ಮೇಲೆ ಪರಿಣಾಮ ಬೀರಬಹುದು ಮತ್ತು ನಿಮ್ಮನ್ನು ಸಮತೋಲನದಿಂದ ದೂರವಿಡಬಹುದು. ಇದು ಮಗುವಿಗೆ ಹಾನಿಯಾಗಬಹುದು, ಇದು ಪ್ರಸವಪೂರ್ವ ನೋವಿಗೆ ಕಾರಣವಾಗಬಹುದು. ನಿಮ್ಮ ಮಗುವಿನ ಸುರಕ್ಷತೆಗಾಗಿ ನೀವು ಅಂತಹ ಕಾರ್ಯಗಳನ್ನು ಮಾಡಬೇಕಾದಾಗ ಸಹಾಯ ತೆಗೆದುಕೊಳ್ಳಿ.

ರಾಸಾಯನಿಕಯುಕ್ತ್ ಶುಚಿಗೊಳಿಸುವ ಉತ್ಪನ್ನಗಳು ಅಥವಾ ಕೀಟನಾಶಕಗಳನ್ನು ಬಳಸಬೇಡಿ:

ಕೀಟನಾಶಕಗಳಲ್ಲಿ ಕಂಡುಬರುವ ಪಿಪೆರೋನಿಲ್ ಬ್ಯುಟಾಕ್ಸೈಡ್ ಎಂಬ ಸಾಮಾನ್ಯ ರಾಸಾಯನಿಕ ಭ್ರೂಣದ ಮೆದುಳಿನ ಬೆಳವಣಿಗೆಗೆ ಹಾನಿಯಾಗಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ಗರ್ಭಧಾರಣೆಗೆ ಸಂಬಂಧಿಸಿದ ಯಾವುದೇ ತೊಂದರೆಗಳನ್ನು ತಪ್ಪಿಸಲು ಕೀಟನಾಶಕಗಳು ಮತ್ತು ಇತರ ಶುಚಿಗೊಳಿಸುವ ಉತ್ಪನ್ನಗಳ ಹತ್ತಿರ ಸುಳಿಯುವುದನ್ನು ತಪ್ಪಿಸಿ. ನೀವು ದಿನಸಿ ಖರೀದಿಸುವಾಗ ಕಠಿಣ ಮತ್ತು ವಿಷಕಾರಿ ವಸ್ತುಗಳಿಂದ ಮುಕ್ತವಾದ ನೈಸರ್ಗಿಕ ಉತ್ಪನ್ನಗಳಿಗಾಗಿ ನೋಡಿ.

Exit mobile version