ಸಾಕಷ್ಟು ಪ್ರಚಾರ ಮಾಡಿದರು ಡಬ್ಬಲ್ ಮೀನಿಂಗ್ ಸಂಭಾಷಣೆಗಳು(Dialogues) ಹೆಚ್ಚಿವೆ ಎಂದು ಭಿನ್ನಭಿಪ್ರಾಯಗಳು ಕೇಳಿ ಬಂದ ಹಿನ್ನಲೆಯಲ್ಲಿ ಪೆಟ್ರೋಮ್ಯಾಕ್ಸ್(Petromax) ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದಕ್ಕಾಗಿ ನಿರ್ದೇಶಕ ಎಂ.ಸಿ ವಿಜಯ್ ಪ್ರಸಾದ್(MC Vijay Prasad) ಅವರು ಈ ಸೋಲಿಗೆ ನಾನೇ ಹೊಣೆ ಎಂದು ಟ್ವೀಟ್(Tweet) ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆಯಾದ ಸತೀಶ್ ನೀನಾಸಂ(Sathish Ninasam) ಮತ್ತು ಹರಿಪ್ರಿಯಾ(Haripriya) ಅಭಿನಯದ ಪೆಟ್ರೋಮ್ಯಾಕ್ಸ್ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ.

ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ವಿಜಯ್ ಪ್ರಸಾದ್, ಪೆಟ್ರೊಮ್ಯಾಕ್ಸ್ ಚಿತ್ರವು ನಾವು ಅಂದುಕೊಂಡಂತೆ ಎಲ್ಲರನ್ನು ತಲುಪಲು ಆಗಲಿಲ್ಲ. ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲ. ಹಾಗೆ ನಮ್ಮ ಚಿತ್ರತಂಡದ ಯಾರೋಬ್ಬರೂ ಅಲ್ಲ! ಇದಕ್ಕೆ ಕಾರಣ ನಾನೊಬ್ಬನೇ…! ಕ್ಷಮೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಚಿತ್ರ ಸೋತಿದೆ, ಸೋತಿದ್ದರಿಂದ ಚಿತ್ರತಂಡದ ತಂಡದಲ್ಲಿ ಏನಾದರೂ ಭಿನ್ನಾಭಿಪ್ರಾಯಗಳಿವೆಯಾ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಕಾರಣಕ್ಕಾಗಿಯೇ ವಿಜಯ ಪ್ರಸಾದ್ ಸೋಲಿನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜವೇ ಸರಿ.
ಈ ಪ್ರಶ್ನೆಗಳನ್ನು ಅವರ ಮುಂದಿಟ್ಟರೆ, ಚಿತ್ರತಂಡದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳುತ್ತಾರೆ. ನಾವೆಲ್ಲಾ ಚೆನ್ನಾಗಿ ಇದ್ದೇವೆ, ಆದರೆ ಚಿತ್ರ ಹೆಚ್ಚು ಜನರನ್ನು ತಲುಪಲಿಲ್ಲ ಎಂಬ ವಿಷಯ ಮನಸ್ಸು ಕೊರೆಯುತ್ತಿತ್ತು, ಹಾಗಾಗಿ ಮನಸ್ಸು ಹಗುರ ಮಾಡಿಕೊಳ್ಳಲು ಸೋಲಿನ ಜವಾಬ್ದಾರಿಯನ್ನು ಒಪ್ಪಿಕೊಂಡೆ ಎಂದು ವಿಜಯ್ ಪ್ರಸಾದ್ ರವರು ಟ್ವೀಟ್ ನಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನು ವಿಜಯ್ ಪ್ರಸಾದ್ ಅವರ ಈ ಒಂದು ಟ್ವೀಟ್ಗೆ ಅನೇಕ ಮರು ಟ್ವೀಟ್ಗಳು ಬಂದಿದ್ದು,
ಅದೇ ರೀತಿಯ ಡೈಲಾಗ್, ಅದೇ ರೀತಿಯ ಕಥಾ ಹಂದರ. ಅದೇ ಡಬಲ್ ಮೀನಿಂಗ್ ಜೋಕ್ಸ್, ಹಾಗಾಗಿ ಸೋತಿರಬಹುದು. ಹಾಸ್ಯದಲ್ಲೂ ವಿಭಿನ್ನತೆ ಇರಲಿ. ಅಷ್ಲೀಲ ಅಥವಾ ಗುಪ್ತ ವಿಚಾರಗಳೇ ಹಾಸ್ಯದ ವಸ್ತುವಾಗದಿರಲಿ. ಮುಂದಿನ ಪ್ರಯತ್ನಕ್ಕೆ ಶುಭವಾಗಲಿ.
— ಭರತ್ ಗೌಡ/Bharath Gowda (@GowdaBSBharath) August 1, 2022
ಟ್ವೀಟ್ : Replying to @Vijayaprasad72 ಅದೇ ರೀತಿಯ ಡೈಲಾಗ್, ಅದೇ ರೀತಿಯ ಕಥಾ ಹಂದರ. ಅದೇ ಡಬಲ್ ಮೀನಿಂಗ್ ಜೋಕ್ಸ್, ಹಾಗಾಗಿ ಸೋತಿರಬಹುದು. ಹಾಸ್ಯದಲ್ಲೂ ವಿಭಿನ್ನತೆ ಇರಲಿ. ಅಷ್ಲೀಲ ಅಥವಾ ಗುಪ್ತ ವಿಚಾರಗಳೇ ಹಾಸ್ಯದ ವಸ್ತುವಾಗದಿರಲಿ. ಮುಂದಿನ ಪ್ರಯತ್ನಕ್ಕೆ ಶುಭವಾಗಲಿ.
ನಿಮ್ಮ ಮೇಲೆ ಇದ ಅಭಿಮಾನ ನಿಮ್ಮ ಚಿತ್ರಗಳು ನೋಡಿದ ಮೇಲೆ ಹೊರಟು ಹೋಗಿದೆ. ಚೇಷ್ಟೆ ಅಂತ ಹೇಳಿಕೊಂಡು ಹಲ್ಕಾ ಚಿತ್ರ ಯಾಕೆ ಮಾಡಬೇಕು?
— ತೇಜಸ್ವಿ 🌼 (@Tejaswi_Kannada) July 31, 2022
ನಿಮ್ಮ ಮುಂದಿನ ಎಲ್ಲಾ ಚೇಷ್ಟೆ ಚಿತ್ರ ಸೋಲಲ್ಲಿ ಮತ್ತು ಒಳ್ಳೆಯ ಮನೆಮಂದಿ ಸೇರಿ ನೋಡುವ ಚಿತ್ರ ಗೆಲಲ್ಲಿ. 🙏🏻 ಶುಭವಾಗಲಿ.
ಟ್ವೀಟ್ : Replying to @Vijayaprasad72ನಿಮ್ಮ ಮೇಲೆ ಇದ ಅಭಿಮಾನ ನಿಮ್ಮ ಚಿತ್ರಗಳು ನೋಡಿದ ಮೇಲೆ ಹೊರಟು ಹೋಗಿದೆ. ಚೇಷ್ಟೆ ಅಂತ ಹೇಳಿಕೊಂಡು ಹಲ್ಕಾ ಚಿತ್ರ ಯಾಕೆ ಮಾಡಬೇಕು? ನಿಮ್ಮ ಮುಂದಿನ ಎಲ್ಲಾ ಚೇಷ್ಟೆ ಚಿತ್ರ ಸೋಲಲ್ಲಿ ಮತ್ತು ಒಳ್ಳೆಯ ಮನೆಮಂದಿ ಸೇರಿ ನೋಡುವ ಚಿತ್ರ ಗೆಲಲ್ಲಿ, ಶುಭವಾಗಲಿ.

ಈ ರೀತಿ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದಕ್ಕೆಲ್ಲಾ ವಿಜಯಪ್ರಸಾದ್ ಅವರು, ಪ್ರೀತಿಯಿಂದಲೇ ಸ್ವೀಕರಿಸಿ ಧನ್ಯವಾದ ತಿಳಿಸಿದ್ದಾರೆ.
- ಕುಮಾರ್, ಬೆಂಗಳೂರು