ಆರ್ಥಿಕ ಹಿಂಜರಿತದ ಹೊಡೆತ: ಜಪಾನ್ ಕೈ ತಪ್ಪಿದ 3ನೇ ಅತಿದೊಡ್ಡ ಆರ್ಥಿಕತೆ ಪಟ್ಟ

Tokyo: ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ವಿಶ್ವದ ಮೂರನೇ ಅತಿದೊಡ್ಡ (Japan Economy in Recession) ಆರ್ಥಿಕತೆಯಾಗಿದ್ದ ಜಪಾನ್

(Japan) ಅಚ್ಚರಿಯ ರೀತಿಯಲ್ಲಿ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ. ಅಲ್ಲದೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಸ್ಥಾನವನ್ನೂ ಜರ್ಮನಿಗೆ ಬಿಟ್ಟುಕೊಟ್ಟಿದೆ. ವಿಶ್ವದ

ಅತಿ ದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಜಪಾನ್‌ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಜಪಾನ್ ಆರ್ಥಿಕತೆ ಕುಸಿತ ಕಂಡಿದ್ದೇ ಇದಕ್ಕೆ

ಕಾರಣವಾಗಿದೆ. ಈ ಮೂಲಕ ಜಪಾನ್‌ ಅಧಿಕೃತವಾಗಿ (Japan Economy in Recession) ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ.

ಒಂದು ಕಾಲದಲ್ಲಿ ಜಪಾನ್ ವಿಶ್ವದ ಎರಡನೇ ಅತೀದೊಡ್ಡ ಆರ್ಥಿಕತೆಯಾಗಿತ್ತು. ಆದರೆ, ಸತತ ಎರಡು ತ್ರೈಮಾಸಿಕದಲ್ಲಿ ಜಪಾನ್ ಆರ್ಥಿಕತೆ (Economic) ಸಂಕೋಚಿತಗೊಂಡಿದೆ.

ಮೂರನೇ ತ್ರೈಮಾಸಿಕದಲ್ಲಿ ಶೇ.3.3ರಷ್ಟು ಸಂಕೋಚಿತಗೊಂಡಿದ್ದ ಜಪಾನ್ ಆರ್ಥಿಕತೆ ನಾಲ್ಕನೇ ತ್ರೈಮಾಸಿಕದಲ್ಲಿ ಅಂದಾಜು ಶೇ.1.4ರಷ್ಟು ಜಿಡಿಪಿ ಗುರಿ ತಲುಪಲು ಸಾಧ್ಯವಾಗಲಿಲ್ಲ

ಎಂದು ರಾಯ್ಟರ್ಸ್ ನಡೆಸಿದ ಅರ್ಥಶಾಸ್ತ್ರಜ್ಞರ ಸಮೀಕ್ಷಿ ಅಭಿಪ್ರಾಯಪಟ್ಟಿದೆ. ಸತತ ಎರಡು ತ್ರೈಮಾಸಿಕಗಳಲ್ಲಿ ಜಪಾನ್ ಆರ್ಥಿಕತೆ ಹಿಂಜರಿತ ಕಂಡಿರೋದೆ ಇದಕ್ಕೆ ಕಾರಣ ಎಂದು

ಹೇಳಲಾಗಿದೆ.

2023ನೇ ಪೂರ್ಣ ಸಾಲಿನಲ್ಲಿ ಜಪಾನ್ ನಾಮಿನಲ್ ಜಿಡಿಪಿ ಶೇ.5.7ರಷ್ಟು ಪ್ರಗತಿ ಸಾಧಿಸಿತ್ತು. ಆ ಮೂಲಕ ಅಲ್ಲಿನ ಆರ್ಥಿಕತೆ 591.48 ಟ್ರಿಲಿಯನ್ ಯೇನ್ ಗೆ ಅಭಿವೃದ್ಧಿ ಹೊಂದಿತ್ತು.

ಇನ್ನೊಂದೆಡೆ ಜರ್ಮನಿ ನಾಮಿನಲ್ ಜಿಡಿಪಿ (GDP) ಶೇ.6.3ರಷ್ಟು ಅಭಿವೃದ್ಧಿ ಹೊಂದಿದ್ದು, 4.12 ಟ್ರಿಲಿಯನ್ ಯುರೋಸ್ ಅಥವಾ 4.46 ಟ್ರಿಲಿಯನ್ ಡಾಲರ್ ತಲುಪಿತ್ತು. 

ಡಾಲರ್ (Dollar) ಮತ್ತು ಯೂರೋ ವಿರುದ್ಧ ಪೌಂಡ್ ದುರ್ಬಲಗೊಂಡಿತು. ಹೂಡಿಕೆದಾರರು ಬ್ಯಾಂಕ್ ಆಫ್ ಇಂಗ್ಲೆಂಡ್ (BoE) ಬಡ್ಡಿದರಗಳನ್ನು ಈ ವರ್ಷ ಕಡಿತಗೊಳಿಸುವುದರ

ಮೇಲೆ ನಿರೀಕ್ಷೆ ಹೊಂದಿದ್ದಾರೆ. ಮಾರ್ಚ್ 6 ರಂದು ನಡೆಯಲಿರುವ ಬಜೆಟ್ (Budget) ಯೋಜನೆಯಲ್ಲಿ ವ್ಯವಹಾರಗಳು ಸರ್ಕಾರದಿಂದ ಹೆಚ್ಚಿನ ಸಹಾಯಕ್ಕಾಗಿ ಕರೆ ನೀಡಿವೆ.

ಗುರುವಾರ ಹೊರ ಬಿದ್ದ ಆರ್ಥಿಕ ದತ್ತಾಂಶಗಳೊಂದಿಗೆ ಬ್ರಿಟನ್ ಕೂಡ, ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಏಳು ಮುಂದುವರಿದ ಆರ್ಥಿಕತೆಗಳ ರಾಷ್ಟ್ರಗಳ ಸಾಲಿಗೆ

ಜಪಾನ್‌ನೊಂದಿಗೆ ಸೇರ್ಪಡೆಯಾಗಿದೆ. ಆದರೂ ಇದು ಅಲ್ಪಾವಧಿಯ ಮತ್ತು ಐತಿಹಾಸಿಕ ಮಾನದಂಡಗಳಿಂದ ಪ್ರೇರಿತವಾಗಿಲ್ಲದಿರಬಹುದು. ಮತ್ತೊಂದು ರಾಷ್ಟ್ರ ಕೆನಡಾ (Canada)

ಕೂಡ ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿಲ್ಲ.

ಜಪಾನ್ ನ ಜಿಡಿಪಿಯ ಕುಸಿತದಿಂದಾಗಿ, ಈ ದೇಶವು ಈಗ ಆರ್ಥಿಕ ಹಿಂಜರಿತದ ಹಿಡಿತದಲ್ಲಿದೆ ಮತ್ತು ಇದರ ಪರಿಣಾಮವೆಂದರೆ ಜಪಾನ್ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ

ತನ್ನ ಸ್ಥಾನವನ್ನ ಕಳೆದುಕೊಂಡಿದೆ. ಜಪಾನ್ನ ಜಿಡಿಪಿ ಈಗ 4.2 ಟ್ರಿಲಿಯನ್ ಡಾಲರ್ಗೆ ಬಂದಿದ್ದರೆ, ಜರ್ಮನಿಯ ಜಿಡಿಪಿ ಅದನ್ನು 3ನೇ ಸ್ಥಾನಕ್ಕೆ ಹಿಂದಿಕ್ಕಿ 4.5 ಟ್ರಿಲಿಯನ್ ಡಾಲರ್ಗೆ ಏರಿದೆ.

ಅಕ್ಟೋಬರ್ (October)-ಡಿಸೆಂಬರ್ ಅವಧಿಯಲ್ಲಿ ಜಪಾನ್ನ ಒಟ್ಟು ದೇಶೀಯ ಉತ್ಪನ್ನ (GDP) ವರ್ಷದಿಂದ ವರ್ಷಕ್ಕೆ 0.4% ರಷ್ಟು ಕುಸಿದಿದೆ. ಇದಕ್ಕೂ ಮುನ್ನ ಅಕ್ಟೋಬರ್ ನಲ್ಲಿ,

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಯುಎಸ್ ಡಾಲರ್ ಲೆಕ್ಕದಲ್ಲಿ ಅಳೆಯಲಾದ ಜರ್ಮನಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಬಹುದು ಎಂದು

ಭವಿಷ್ಯ ನುಡಿದಿತ್ತು ಅದು ನಿಜವಾಗಿದೆ.

ಇದನ್ನು ಓದಿ : ಹುಬ್ಬಳ್ಳಿ ಗಲಭೆ ಪ್ರಕರಣ: 106 ಮಂದಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್

Exit mobile version