ಕೊತ್ವಾಲ್ನ ಶಿಷ್ಯ ಡಿಕೆ ಶಿವಕುಮಾರ್ನ ಪಟಾಲಂ ತಮ್ಮ ಹಳೆಚಾಳಿ ಮುಂದುವರಿಸಿದ್ದಾರೆ – ಡಿಕೆ ಮೇಲೆ ಮುಗಿಬಿದ್ದ ಜೆಡಿಎಸ್

ಬೆಂಗಳೂರು (Bengaluru) ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೂಂಡಾಗಿರಿ ತಾರಕಕ್ಕೇರಿದೆ. ಕೊತ್ವಾಲ್ ರಾಮಚಂದ್ರನ (Kotwal Ramachandra) ಶಿಷ್ಯ ಡಿಕೆ ಶಿವಕುಮಾರ್ನ ಪಟಾಲಂ ತಮ್ಮ ಹಳೆಚಾಳಿ ಮುಂದುವರಿಸಿದ್ದಾರೆ ಎಂದು ಜೆಡಿಎಸ್ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ದ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ (JDS, BJP) ಹಾಗು ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಗುಂಡಾಗಳನ್ನು ಬಿಟ್ಟು ಮಾರಣಾಂತಿಕವಾಗಿ ಹಲ್ಲೆ ಮಾಡಿಸಿದ್ದಾರೆ. ಸೋಲುವ ಭೀತಿಯಿಂದ ವಿಚಲಿತರಾಗಿರುವ ಈ ಪಟಾಲಂ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಆಮಿಷ ಒಡ್ಡಿ, ಒಪ್ಪದವರನ್ನು ಹೆದರಿಸಿ ಬೆದರಿಸಿ ತಮ್ಮ ಪರ ಕೆಲಸ ಮಾಡುವಂತೆ ಧಮ್ಕಿ ಹಾಕುತ್ತಿದ್ದಾರೆ.

ಬೆಂಗಳೂರು (Bengaluru) ಗ್ರಾಮಾಂತರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಶಾಹಿಯ ದುರ್ಬಳಕೆ, ಗೂಂಡಾಗಳನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದಾದ್ಯಂತ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಜನರು ಹೆದರಿ ಕೂರುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಟೀಕಿಸಿದೆ.

ಇನ್ನೊಂದು ಟ್ವೀಟ್ನಲ್ಲಿ, ಸರಕಾರ ಈ ಕೂಡಲೇ ದೌರ್ಜನ್ಯ ನಡೆಸಿರುವ ಅಪರಾಧಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಚುನಾವಣಾ ಆಯೋಗ ನಿರ್ಭೀತಿಯಿಂದ ಚುನಾವಣೆ ನಡೆಸಲು ಸೂಕ್ತ ಕ್ರಮ ಜರುಗಿಸಬೇಕು. ಕಾಂಗ್ರೆಸಿಗರಿಗೆ, ಅದರಲ್ಲೂ ಡೂಪ್ಲಿಕೇಟ್ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಸೋಲಿನ ಭೀತಿ ಎಷ್ಟರಮಟ್ಟಿಗೆ ಕಾಡುತ್ತಿದೆ ಎಂದರೆ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೇ ಕಾಂಗ್ರೆಸ್ ಶಾಲು ಹಾಕಿ, ಅವರನ್ನು ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸಿ, ಅವರೆಲ್ಲ ಕಾಂಗ್ರೆಸ್ (Congress) ಸೇರಿದ್ದಾರೆ ಎಂದು ಪ್ರಚಾರ ಪಡೆಯುತ್ತಿದ್ದಾರೆ.

ಸೋಲಿನ ಭೀತಿ, ಹತಾಶೆ ಎಂತೆಂತಹ ಗಿಮಿಕ್ ಗಳನ್ನು ಮಾಡಿಸುತ್ತದೆ ಎನ್ನುವುದಕ್ಕೆ ಇದು ಜೀವಂತ ಸಾಕ್ಷಿ. ಡಿ.ಕೆ. ಶಿವಕುಮಾರ (D.K Shivakumar) ಸುಳ್ಳು ಹೇಳಿ ಅಪಪ್ರಚಾರ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಯಾರು ಎಷ್ಟೇ ಅಪಪ್ರಚಾರ ಮಾಡಿದರು ರಾಜ್ಯದ ಪ್ರಬುದ್ಧ ಜನತೆ ಎಲ್ಲವನ್ನು ಗಮನಿಸುತ್ತಿರುತ್ತಾರೆ. ನಿಮ್ಮ ಈ ಚಿಲ್ಲರೆ ಬುದ್ದಿ ಬಿಡಿ, ನೀವು ಎಷ್ಟೇ ಅಪಪ್ರಚಾರ ಮಾಡಿದರೂ, ಸುಳ್ಳು ಯಾವತ್ತೂ ಸತ್ಯವಾಗುವುದಿಲ್ಲ ಎಂದು ಕಿಡಿಕಾರಿದೆ.

Exit mobile version